Divorce for Cleanliness: ಪತ್ನಿಯ ಸ್ವಚ್ಛತೆ ಗೀಳು: ಬೇಸತ್ತು ಡೈವೋರ್ಸ್‌ಗೆ ಮುಂದಾದ ಪತಿ!

By Kannadaprabha NewsFirst Published Dec 3, 2021, 7:08 AM IST
Highlights

*  ಲ್ಯಾಪ್‌ಟಾಪ್‌, ಸೆಲ್‌ಪೋನನ್ನು ಸೋಪಿಂದ ತೊಳೆಯುತ್ತಿದ್ದ ಪತ್ನಿ
*  ಪೊಲೀಸರಿಂದ ವನಿತಾ ಸಹಾಯವಾಣಿ ಪರಿಹಾರ್‌ಗೆ ಶಿಫಾರಸು
*  ಸ್ವಚ್ಛತೆಯ ಬಗ್ಗೆ ಅತಿರೀಕದ ವರ್ತನೆ
 

ಬೆಂಗಳೂರು(ಡಿ.03):  ಪತ್ನಿಯ ಅತಿಯಾದ ಸ್ವಚ್ಛತೆಯ ಗೀಳಿನಿಂದ ಬೇಸತ್ತಿರುವ ಪತಿ ದಾಂಪತ್ಯ ಕಡಿದುಕೊಳ್ಳಲು ವಿವಾಹ ವಿಚ್ಛೇದನಕ್ಕೆ(Divorce) ಮುಂದಾಗಿದ್ದಾರೆ.

ಒಸಿಡಿ ಸಮಸ್ಯೆಯಿಂದ ಬಳಲುತ್ತಿರುವ 35 ವರ್ಷದ ಮಹಿಳೆ(Woman), ಲ್ಯಾಪ್‌ಟಾಪ್‌, ಸೆಲ್‌ಫೋನ್‌ಗಳನ್ನು ಡಿಟರ್ಜೆಂಟ್‌ ಹಾಕಿ ಸ್ವಚ್ಛಗೊಳಿಸುವ ಅತಿರೇಕದ ವರ್ತನೆಯಿಂದ ರೋಸಿರುವ ಪತಿ(Husband) ಪೊಲೀಸರ(Police) ಮೊರೆ ಹೋಗಿದ್ದಾನೆ. ಪೊಲೀಸರು ಈ ಪ್ರಕರಣವನ್ನು ವನಿತಾ ಸಹಾಯವಾಣಿ ಪರಿಹಾರ್‌ಗೆ ಶಿಫಾರಸು ಮಾಡಿದ್ದಾರೆ.

ಕುಕ್ಕರ್ ಮದುವೆಯಾದ ಪುಣ್ಯಾತ್ಮ ನಾಲ್ಕೇ ದಿನಕ್ಕೆ  ಡಿವೋರ್ಸ್ ಕೊಟ್ಟ!

ಆರ್‌.ಟಿ.ನಗರ ಸುಮಾ ಮತ್ತು ಜಯಂತ್‌ 2009ರಲ್ಲಿ ವಿವಾಹವಾಗುತ್ತಾರೆ(Marriage). ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಜಯಂತ್‌, ವಿವಾಹದ ಬಳಿಕ ಪತ್ನಿ(Wife) ಸುಮಾ ಜತೆಗೆ ಲಂಡನ್‌ಗೆ(London) ತೆರಳುತ್ತಾರೆ. ಎಂಬಿಎ ಪದವೀಧರರಾದ ಸುಮಾ, ಲಂಡನ್‌ನಲ್ಲಿ ಮನೆಯನ್ನು ತುಂಬಾ ಸ್ವಚ್ಛವಾಗಿ ಇರಿಸಿಕೊಳ್ಳುತ್ತಾರೆ. ಮೊದಲ ಮಗು ಹುಟ್ಟಿದ ಎರಡು ವರ್ಷದ ಬಳಿಕ ಸುಮಾಗೆ ಈ ಸ್ವಚ್ಛತೆ(Cleanliness) ಗೀಳು ಮತ್ತಷ್ಟು ಹೆಚ್ಚಾಗುತ್ತದೆ. ಪತಿ ಕೆಲಸ ಮುಗಿಸಿ ಮನೆಗೆ ಬಂದಾಗ ಶೂ, ಬಟ್ಟೆ, ಸೆಲ್‌ಫೋನ್‌ ಸ್ವಚ್ಛ ಮಾಡುವಂತೆ ಪದೇ ಪದೇ ಹೇಳುತ್ತಿರುತ್ತಾಳೆ. ಇದರಿಂದ ಕಿರಿಕಿರಿಗೆ ಒಳಗಾಗುವ ಪತಿ, ಈಕೆಯ ಸ್ವಚ್ಛತೆಯ ಅತಿರೇಕದ ವರ್ತನೆಯಿಂದ ಬೇಸತ್ತು ಹೋಗುತ್ತಾನೆ.

ಲಂಡನ್‌ನಿಂದ ನಗರಕ್ಕೆ(Bengaluru) ವಾಪಾಸಾಗುವ ದಂಪತಿ ಕೌಟುಂಬಿಕ ಸಮಾಲೋಚನೆಗೆ(Family Counseling) ಒಳಗಾಗುತ್ತಾರೆ. ಈ ವೇಳೆ ಈ ಸ್ವಚ್ಛತೆಯ ಗೀಳು ಕೊಂಚ ಕಡಿಮೆಯಾಗುತ್ತದೆ. ಈ ನಡುವೆ ದಂಪತಿಗೆ ಎರಡನೇ ಮಗು ಜನಿಸುತ್ತದೆ. ಕೋವಿಡ್‌(Covid19) ಸಂದರ್ಭದಲ್ಲಿ ಸಮಾಳಿಗೆ ಈ ಸ್ವಚ್ಛೆತೆಯ ಗೀಳು ಮತ್ತಷ್ಟುಹೆಚ್ಚಾಗುತ್ತದೆ. ಮನೆಯನ್ನು ಪದೇ ಪದೇ ಸ್ಯಾನಿಟೈಸ್‌ ಮಾಡುವುದು, ಮನೆಯ ಪೀಠೋಪಕರಣಗಳು, ಚಮಚ, ಫೆಲೕರ್‌ ಮ್ಯಾಟ್‌ ಸೇರಿದಂತೆ ಎಲ್ಲ ವಸ್ತುಗಳನ್ನು ಪದೇ ಪದೇ ಸ್ವಚ್ಛ ಮಾಡಲು ಶುರು ಮಾಡುತ್ತಾಳೆ. ಲಾಕ್‌ಡೌನ್‌(Lockdown) ಸಂದರ್ಭದಲ್ಲಿ ದಿನಕ್ಕೆ ಆರು ಬಾರಿ ಸ್ನಾನ ಮಾಡುವುದು, ಸ್ನಾನಕ್ಕೆ ಬಳಸಿದ ಸೋಪನ್ನು ಮತ್ತೊಂದು ಸೋಪಿನಿಂದ ಸ್ವಚ್ಛಗೊಳಿಸುವ ಮಟ್ಟಕ್ಕೆ ಇವಳ ವರ್ತನೆ ಬದಲಾಗುತ್ತದೆ.

ಈ ನಡುವೆ ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಸುಮಾ ತಾಯಿ ಮೃತಪಡುತ್ತಾರೆ(Death). ಈ ಘಟನೆ ಬಳಿಕ ಸುಮಾಳ ಸ್ವಚ್ಛತೆ ಗೀಳು ಉಚ್ಛ್ರಾಯ ಸ್ಥಿತಿಗೆ ತಲುಪುತ್ತದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಪತಿ ವರ್ಕ್ ಫ್ರಂ(Work From Home) ಹೋಮ್‌ ಕೆಲಸ ಮಾಡುವಾಗ, ಆತನ ಲ್ಯಾಪ್‌ಟಾಪ್‌, ಸೆಲ್‌ಫೋನ್‌ಗಳನ್ನು ಡಿಟರ್ಜೆಂಟ್‌ ಹಾಕಿ ಸ್ವಚ್ಛಗೊಳಿಸಿದ್ದಳು. ಅಲ್ಲದೆ, ಮಕ್ಕಳು(Children) ಶಾಲೆಗೆ(School) ಹೋಗಿ ಬಂದರೆ, ಅವರ ಬ್ಯಾಗ್‌, ಯೂನಿಫಾರ್ಮ್‌, ಶೂಗಳನ್ನು ಪ್ರತಿ ದಿನ ಸ್ವಚ್ಛ ಮಾಡುತ್ತಿದ್ದಳು. ಈಕೆಯ ಸ್ವಚ್ಛತೆಯ ಅತಿರೇಕದ ವರ್ತನೆಗೆ ಬೇಸತ್ತ ಪತಿ ಜಯಂತ್‌ ಇದೀಗ ಆಕೆಯಿಂದ ವಿಚ್ಛೇದನ ಕೋರಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ವಿಚ್ಛೇದಿತ ಪುತ್ರಿಗೆ ಅನುಕಂಪದ ನೌಕರಿ ಇಲ್ಲ: ಸುಪ್ರೀಂಕೋರ್ಟ್‌

ಕೋರ್ಟ್‌ನಲ್ಲಿ ಮತ್ತೆ ಒಂದಾದ ಜೋಡಿ : ಡಿವೋರ್ಸ್ ನಿರ್ಧಾರದಿಂದ ಹಿಂದಕ್ಕೆ

ತಿಪಟೂರು ನಗರದ ನ್ಯಾಯಾಲಯದಲ್ಲಿ (Court) ಸೆ.30ರಂದು ನಡೆದ ಮೆಗಾ ಲೋಕ ಅದಾಲತ್ನಲ್ಲಿ ಕೌಟುಂಬಿಕ ಪ್ರಕರಣಗಳು, ಆಸ್ತಿ ವಿಚಾರಕ್ಕೆ ಸಂಬಂಧಸಿದ ಪ್ರಕರಣಗಳು, ಚೆಕ್ ಬೌನ್ಸ್ (Cheque Bounce)   ಅಪಘಾತ, ವಿಮೆ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ  ಒಟ್ಟು 4390 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು. 

ಅದಾಲತ್‌ನಲ್ಲಿ ಮುಖ್ಯವಾಗಿ ಹಿರಿಯ ಸಿವಿಲ್  ನ್ಯಾಯಾಲಯದಲ್ಲಿ (Civil Court) ವಿವಾಹ ವಿಚ್ಛೆದನಕ್ಕೆ (Divorce) ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದ 2 ಜೋಡಿಗಳಾದ ಕಿರಣ್ ಮತ್ತು ತೇಜಸ್ವಿನಿ ಹಾಗು ಕೇಶವಮೂರ್ತಿ ಮತ್ತು ಗಾಯತ್ರಿ ಮತ್ತೆ ಒಟ್ಟಾಗಿ ಜೀವನ ನಡೆಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡು ರಿಯೂನಿಯನ್ ಆಗಿ ಈ ಮೆಗಾ ಲೋಕ ಅದಲಾತ್‌ನಲ್ಲಿ ಒಂದಾದ ಘಟನೆ ನಡೆಯಿತು. 
 

click me!