Tumakuru News : ಮೂರು ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿ ದಿಢೀರನೆ ಪ್ರತ್ಯಕ್ಷ

By Sujatha NR  |  First Published Dec 2, 2021, 1:33 PM IST
  • ಮೂರು ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿ ದಿಢೀರನೆ ಪ್ರತ್ಯಕ್ಷ
  • ಕುಟುಂಬದವರು ಹಾಗೂ ಗ್ರಾಮದವರೆಲ್ಲರಿಗೂ ಅಚ್ಚರಿ ಮೂಡಿಸಿದ ಘಟನೆ 

ತುಮಕೂರು (ಡಿ.02):  ಮೂರು ತಿಂಗಳ ಹಿಂದೆ ಮೃತ ಪಟ್ಟ ವ್ಯಕ್ತಿ ದಿಢೀರನೆ ಪ್ರತ್ಯಕ್ಷವಾಗಿ ಕುಟುಂಬದವರು ಹಾಗೂ ಗ್ರಾಮದವರೆಲ್ಲರಿಗೂ ಅಚ್ಚರಿ ಮೂಡಿಸಿದ ಘಟನೆ ಮಧುಗಿರಿ (Madugiri) ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಕೊಡಿಗೇನಹಳ್ಳಿ ಗ್ರಾಮದ ನಾಗರಾಜಪ್ಪ ಎಂಬಾತ ಮರಳಿ ಗ್ರಾಮಕ್ಕೆ ಬಂದಿರುವ ವ್ಯಕ್ತಿ. ಶವ ಸಂಸ್ಕಾರ (Last Rite), ತಿಥಿ ಕಾರ್ಯ ಎಲ್ಲವೂ ಮುಗಿದು ಕುಟುಂಬಸ್ಥರು ಬಹುತೇಕ ಆ ನೋವಿನಿಂದ ಹೊರಬಂದಿದ್ದರು. ಆದರೆ ಮೃತಪಟ್ಟಿದ್ದಾನೆ ಎನ್ನಲಾದ ತಾಲೂಕಿನ ಚಿಕ್ಕ ಮಾಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಲತಾ ತಂದೆ ನಾಗರಾಜಪ್ಪ ಮಂಗಳ ವಾರ ಬೆಳಗ್ಗೆ ಗ್ರಾಮಕ್ಕೆ ಬಸ್‌ನಲ್ಲಿ (Bus) ಬಂದಿಳಿದು ಅಚ್ಚರಿ ಮೂಡಿಸಿದ್ದಾರೆ. ಕಾಣೆಯಾಗಿ ತಿಥಿ ಕಾರ್ಯವೂ ಮುಗಿದ ವ್ಯಕ್ತಿ ಮರಳಿ ಊರಿಗೆ ಬಂದ ಘಟನೆಯಿಂದಾಗಿ ಕುಟುಂಬಸ್ಥರು, ಗ್ರಾಮಸ್ಥರು ಗೊಂದಲಕ್ಕೆ ಒಳಗಾಗಿದ್ದಾರೆ. 

ಮದ್ಯಪಾನದ ಚಟಕ್ಕೆ ದಾಸನಾಗಿದ್ದ ನಾಗರಾಜಪ್ಪನನ್ನು ಅನಾರೋಗ್ಯದ (Health Issue) ಹಿನ್ನೆಲೆಯಲ್ಲಿ 3 ತಿಂಗಳ ಹಿಂದೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ( Bengaluru Nimhans Hospital ) ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ (Treatment) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಖಾಸಗಿ ಆಸ್ಪತ್ರೆ ಸಿಬ್ಬಂದಿ ನಾಗರಾಜಪ್ಪ ಮೃತಪಟ್ಟಿದ್ದಾರೆ ಎಂದು ಶವವನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಿದ್ದರು. ಕುಟುಂಬಸ್ಥರು ಅಂತ್ಯ ಸಂಸ್ಕಾರ ನೆರವೇರಿಸಿದ್ದರು. 

Tap to resize

Latest Videos

 ಇದೀಗ ಇಲ್ಲದ ನಾಗರಾಜಪ್ಪ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದು, ಕುಟುಂಬದವರು (Family) ಗೊಂದಲಕ್ಕೀಡಾಗಿದ್ದಾರೆ. ಹಾಗಾದರೆ ಮೂರು ತಿಂಗಳ ಹಿಂದೆ ನೆರವೇರಿಸಿದ್ದ ಶವ ಸಂಸ್ಕಾರ ಯಾರದ್ದು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಲು ಕುಟುಂಬಸ್ಥರು ಕೊಡಿಗೇನಹಳ್ಳಿ ಪೊಲೀಸ್ ಠಾಣೆ (Police station) ಮೆಟ್ಟಿಲೇರಿದ್ದಾರೆ.

ಮತ್ತೆಲ್ಲಿಗೂ ಕಳುಹಿಸಲ್ಲ: ನಾಗರಾಜಪ್ಪನವರ ಪುತ್ರಿ ಬೆಂಗಳೂರಿನ (Bengaluru ) ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅಲ್ಲಿಯೇ ತಂದೆ ನಾಗರಾಜಪ್ಪ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇರುತ್ತಿದ್ದರು. 

ಆಗಾಗ ಇವರು ಮನೆ ಬಿಟ್ಟು ಹೋಗುತ್ತಿದ್ದು, ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಮೂರು ತಿಂಗಳ ಹಿಂದೆ ಆಸ್ಪತ್ರೆಯ ( Hospital ) ಶವಾಗಾರದಲ್ಲಿ ಇವರ ತಂದೆಯನ್ನೇ ಹೋಲುವ ವ್ಯಕ್ತಿ ಮೃತಪಟ್ಟಿದ್ದು, ಆಸ್ಪತ್ರೆಯ ದಾಖಲೆಗಳ ಪ್ರಕಾರ ಇವರ ತಂದೆಗೆ ಏನೇನು ಕಾಯಿಲೆಗಳಿವೆಯೋ ಅವೆಲ್ಲಾ ಕಾಯಿಲೆಯ ಲಕ್ಷಣಗಳು ಮೃತ ವ್ಯಕ್ತಿಯಲ್ಲಿ ಇದ್ದುದರಿಂದ, ತಂದೆಯೆಂದೇ ಭಾವಿಸಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ ಎನ್ನಲಾಗಿದೆ. ತಂದೆ ವಾಪಾಸ್ ಬಂದಿರುವುದು ನಮಗೆ ಸಂತಸ ತಂದಿದೆ. ನಾವು ಇವರನ್ನು ಮತ್ತೆಲ್ಲಿಗೂ ಕಳುಹಿಸಲ್ಲ ಎನ್ನುತ್ತಾರೆ ಕುಟುಂಬಸ್ಥರು. ಇಷ್ಟು ದಿನ ಇವರು ನಿರಾಶ್ರಿತರ ಶಿಬಿರದಲ್ಲಿದ್ದು, ಮನೆಯವರ ನೆನಪು ಕಾಡಿ ಊರಿಗೆ ವಾಪಾಸ್ಸಾಗಿದ್ದಾರೆ ಎನ್ನಲಾಗಿದೆ. 

ಕಾಣೆಯಾದ ತಂಗಿ ರಕ್ಷಾ ಬಂಧನದಂದು ಪತ್ತೆ :  

ಸೋದರಿ ತನ್ನ ಸೋದರನಿಗೆ ನೀಡುವ ಬೆಂಬಲ, ಸೋದರ ತನ್ನ ಸೋದರಿಯನ್ನು ನೋಡಿಕೊಳ್ಳುವ ಪರಿ ಎಲ್ಲವೂ ಅಪ್ಯಾಯಮಾನ. ಸೋದರ ಸೋದರಿಯ ಈ ಪ್ರೀತಿಯ ಪ್ರತೀಕವೇ ರಕ್ಷಾ ಬಂಧನ ಹಬ್ಬ.ಈ ಪವಿತ್ರ ರಕ್ಷಾ ಬಂಧನ (Raksha Bandan)  ಹಬ್ಬದ ದಿನವಾದ ಇಂದು (ಆ.22)  ಕಾಣೆಯಾಗಿದ್ದ ತಂಗಿಯನ್ನು ಪತ್ತೆಮಾಡಿದ ಬೆಂಗಳೂರು (Bengaluru) ಪೊಲೀಸರು ರಕ್ಷಾ ಬಂಧನದಂದೇ ಅಣ್ಣನಿಗೆ ಒಪ್ಪಿಸಿದ್ದಾರೆ. ಬೆಂಗಳೂರಿನ ಅಮೃತಹಳ್ಳಿ ಪೊಲೀಸರೇ ರಕ್ಷಾ ಬಂಧನದಂದು ಕಾಣೆಯಾಗಿದ್ದ ತಂಗಿಯನ್ನು ಅಣ್ಣನಿಗೆ ಹುಡುಕಿಕೊಟ್ಟಿದ್ದರು. ಪೊಲೀಸ್ ಠಾಣೆಯಲ್ಲೇ ರಾಖಿ ಕಟ್ಟುವ ಮೂಲಕ ತನ್ನ ತಂಗಿಯನ್ನು ಅಣ್ಣ ಮನೆಗೆ ಬರಮಾಡಿಕೊಂಡಿದ್ದ.

 ಇದೇ ತಿಂಗಳ 6 ರಂದು ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಸ್ಟರ್ ಆಸ್ಪತ್ರೆಯಿಂದ (Hospital) ರಿಮಿ ಅಡ್ಡಿ ಕಾಣೆಯಾಗಿದ್ದಳು.  ಬಳಿಕ ಸಹೋದರ ವಿವೇಕ  ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಬಳಿಕ ಆಸ್ಪತ್ರೆ ಸಿಸಿಟಿವಿ ಪರಿಶೀಲನೆ ಮಾಡಲಾಗಿದ್ದು, ಈ ವೇಳೆ ರಿಮಿ ಅಡ್ಡಿ ಬೈಕ್ ನಲ್ಲಿ ಹೋಗೋದು ಪತ್ತೆಯಾಗಿದೆ. ನಂತರ ವೀರಣ್ಣನಪಾಳ್ಯದಲ್ಲಿ ಬೈಕ್ ನಲ್ಲಿ ಇಳಿದಿರುವ ಸಿಸಿಟಿವಿ ಲಭ್ಯವಾಗಿದ್ದು, ಆ ಆಧಾರದ ಹುಡುಕುತ್ತಾ ಹೋಗುವ ಸಂದರ್ಭದಲ್ಲಿ ಇಂದು (ಆ.22)ರಂದು ಮಾಗಡಿ ಬಳಿ ಸಿಕ್ಕಿದ್ದಳು. 

ಪೊಲೀಸ್ ಠಾಣೆಯಲ್ಲಿ ರಾಖಿ ಕಟ್ಟಿಸಿಕೊಳ್ಳುವ ಮೂಲಕ ಅಣ್ಣ ತಂಗಿಯನ್ನ ಮನೆಗೆ ಬರಮಾಡಿಕೊಂಡಿದ್ದಾನೆ. ಪೊಲೀಸರು ಠಾಣೆಯಲ್ಲೇ (Police station) ಕೇಕ್ ಕತ್ತರಿಸಿ ಅಣ್ಣನ ಕೈಗೆ ರಾಖಿ ಕಟ್ಟಿಸುವ ಮೂಲಕ ಮನೆಗೆ ಕಳುಹಿಸಿದ್ದರು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, 50 ಕ್ಕೂ ಹೆಚ್ಚು ಆಶ್ರಮ, ಡಿಜೆಹಳ್ಳಿ, ಗೋವಿಂದಪುರ, ಕೆಜಿ ಹಳ್ಳಿ‌ ಸುತ್ತಮುತ್ತ ಸುಮಾರು 100ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾಗಳನ್ನು ಪೊಲಿರು  ಪರಿಶೀಲನೆ ಮಾಡಿದ್ದರು. 

click me!