Mysuru Chamundi Hill: ಚಾಮುಂಡಿ ಬೆಟ್ಟದ ಮಾರ್ಗ ಪರಿವರ್ತನೆಗೆ ಸಲಹೆ

By Kannadaprabha News  |  First Published Dec 2, 2021, 10:58 AM IST
  • ಮಳೆಯಿಂದಾಗಿ ಕುಸಿದಿರುವ ಚಾಮುಂಡಿ ಬೆಟ್ಟದ ನಂದಿ ಮಾರ್ಗ
  • ಮಾರ್ಗವನ್ನು ಚಾರಣ ಪಥವಾಗಿ (ಟ್ರಕ್ಕಿಂಗ್‌ ಟ್ರ್ಯಾಕ್‌) ಪರಿವರ್ತಿಸುವಂತೆ ತಾಂತ್ರಿಕ ತಜ್ಞರ ತಂಡವು ಮನವಿ 

 ಮೈಸೂರು (ಡಿ.02): ಮಳೆಯಿಂದಾಗಿ (Rain) ಕುಸಿದಿರುವ ಚಾಮುಂಡಿ ಬೆಟ್ಟದ (Chamundi Hill) ನಂದಿ ಮಾರ್ಗವನ್ನು ಚಾರಣ ಪಥವಾಗಿ ( trekking path ) ಪರಿವರ್ತಿಸುವಂತೆ ತಾಂತ್ರಿಕ ತಜ್ಞರ ತಂಡವು (Experts Team) ಮನವಿ ಮಾಡಿದೆ. ಎಂಜಿನಿಯರ್‌ಗಳ ಸಂಸ್ಥೆಯ ಮೈಸೂರು(mysuru) ಶಾಖೆಯು ಬೆಟ್ಟಕುಸಿತ ಸಂಬಂಧ ಅಧ್ಯಯನ ನಡೆಸಿ ವರದಿ ತಯಾರಿಸಲು ನಿವೃತ್ತ ಮೇಜರ್‌ ಜನರಲ್‌ ಒಂಬತ್ಕೆರೆ ಅವರ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿ ರಚಿಸಿತ್ತು. ಈ ಸಮಿತಿಯು ನ.19ರಂದು ಸ್ಥಳ ಪರಿಶೀಲಿಸಿತ್ತು. ಈಗ ವರದಿ ಸಿದ್ಧಪಡಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅವರಿಗೆ ಬುಧವಾರ ಮನವಿ ಸಲ್ಲಿಸಿತು.

ಈ ಸಂಬಂಧ 8 ಪುಟಗಳ ವರದಿ ಸಲ್ಲಿಸಿರುವುದಾಗಿ ತಿಳಿಸಿದ ಒಂಬತ್ಕೆರೆ ಅವರು, ವರದಿಯಲ್ಲಿ ಎರಡು ಸಲಹೆ ಕೊಟ್ಟಿದ್ದೇವೆ. ಈ ಸಲಹೆಯಿಂದ ಸಾರ್ವಜನಿಕರ ತೆರಿಗೆ ಹಣ (Publics Tax) ಉಳಿತಾಯವಾಗುತ್ತದೆ. ಉಳಿತಾಯ ಮಾಡಿದ ಹಣವನ್ನು ಚಾಮುಂಡಿ ಬೆಟ್ಟದ (Chamundi  Hill) ಮುಖ್ಯರಸ್ತೆ ಅಭಿವೃದ್ಧಿಗೆ ಬಳಸಬಹುದು. ನಂದಿ (nandi) ವಿಗ್ರಹದ ಬಳಿಗೆ ಹೋಗಲು ಎರಡು ಮಾರ್ಗಗಳಿವೆ. ವೀಕ್ಷಣಾ ಗೋಪುರ ಮತ್ತು ಮೆಟ್ಟಿಲುಗಳ ಮೂಲಕವೂ ಹೋಗಬಹುದು. ಈಗ ಕುಸಿದಿರುವ ರಸ್ತೆಯಲ್ಲಿ ವಾಹನ (Vehicle) ನಿಷೇಧಿಸಿ ಟ್ರಕ್ಕಿಂಗ್‌ ಟ್ರ್ಯಾಕ್‌ ಆಗಿ ಪರಿವರ್ತಿಸುವಂತೆ ಸಲಹೆ ನೀಡಿರುವುದಾಗಿ ಹೇಳಿದರು.

Tap to resize

Latest Videos

ವಾತಾವರಣದಲ್ಲಿನ ಬದಲಾವಣೆಯಿಂದ ಹಾಗೂ ಸತತವಾಗಿ ಮಳೆ (Rain) ಬರುತ್ತಿರುವುದರಿಂದ ಬೆಟ್ಟದ ರಸ್ತೆ ಕುಸಿದಿದೆ. ಈಗ ಕುಸಿದಿರುವ 1.5 ಕಿ.ಮೀ. ರಸ್ತೆಯನ್ನು ಪೂರ್ಣ ದುರಸ್ತಿಮಾಡಲು ಹೆಚ್ಚು ಹಣ ಬೇಕಿದೆ. ಟ್ರಕ್ಕಿಂಗ್‌ ಟ್ರ್ಯಾಕ್‌ ಆಗಿ ಪರಿವರ್ತಿಸುವುದು ಹೆಚ್ಚು ಉಪಯುಕ್ತ ಎಂದರು.

ಸಮಿತಿ ಸದಸ್ಯ ಹಾಗೂ ಕೆಪಿಸಿಸಿ (KPCC) ವಕ್ತಾರ ಎಂ. ಲಕ್ಷ್ಮಣ್ ಮಾತನಾಡಿ, ಈಗ ಕುಸಿದಿರುವ ರಸ್ತೆಯನ್ನು (Road) 1903ನೇ ಇಸವಿಯಲ್ಲಿ ನಿರ್ಮಿಸಲಾಗಿದೆ. ಈ ರಸ್ತೆ 120 ವರ್ಷ ಸೇವೆ ನೀಡಿದೆ. ಈಗ ನಾಲ್ಕು ಕಡೆ ಕುಸಿದಿದೆ. 2019ರಲ್ಲೂ ಕುಸಿದಿತ್ತು. ಮತ್ತೆ ಅದೇ ಸಮಸ್ಯೆ ಆಗಿದೆ. ವಾಹನಗಳನ್ನು ನಿಷೇಧಿಸಿದರೆ ನೂರಾರು ವರ್ಷ ರಸ್ತೆ ಸೇವೆಗೆ ದೊರೆಯುತ್ತದೆ. ಕುಸಿದಿರುವ ರಸ್ತೆ ದುರಸ್ತಿ ಪಡಿಸಲು 50 ಅಡಿ ಕೆಳ ಮಟ್ಟದಿಂದ ಬಿಲ್ಡ್‌ ಮಾಡಬೇಕು. ಮಳೆ ನಿಂತ ಮೇಲೆ ಮತ್ತೊಂದು ಸುತ್ತು ಪರಿಶೀಲನೆಗೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಲೋಕೋಪಯೋಗಿ ಇಲಾಖೆ .10 ಕೋಟಿ ಪ್ರಸ್ತಾವನೆ ಸಲ್ಲಿಸಿದೆ. ಮಳೆ ನಿಂತ ಮೇಲೆ ಕಾಮಗಾರಿ ಆರಂಭಿಸಬಹುದು. ಇದು ತಾತ್ಕಾಲಿಕ ಕ್ರಮ ಎಂದರು.

ಎಂಜಿನಿಯರ್‌ ಸಂಸ್ಥೆಯ ಸ್ವಯಂ ಪ್ರೇರಿತವಾಗಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಿದೆ. ಹಿಂದೆ ಮಡಿಕೇರಿಯಲ್ಲಿ ಸಂಭವಿಸಿದ ವಿಕೋಪದ ವೇಳೆ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ವರದಿ ಸಲ್ಲಿಸಿದೆವು. ಬೆಂಗಳೂರಿನಿಂದ ಎಂಜಿನಿಯರ್‌ ಕರೆದುಕೊಂಡು ಬಂದು ಸಲಹೆ ಪಡೆಯದೆ ಮೈಸೂರಿನಲ್ಲಿರುವ ನುರಿತ ಎಂಜಿನಿಯರ್‌ಗಳ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ಲಕ್ಷ್ಮಣ್‌ ಅವರು ತಿಳಿಸಿದರು. ಎಂಜಿನಿಯರ್‌ಗಳಾದ ಬಿ.ಎಸ್‌.ಪ್ರಭಾಕರ್‌, ಎಚ್‌.ಎಸ್‌. ಸುರೇಶ್‌ ಬಾಬು, ಎಚ್‌. ಕಿಶೋರ್‌ ಚಂದ್ರ, ಎಂ.ಕೆ. ನಂಜಯ್ಯ ಇದ್ದರು.

ರಸ್ತೆ ದುರಸ್ತಿಗೆ 9.5 ಕೋಟಿ:  

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ (Mysuru Chamundi Hill ) ಕುಸಿದಿರುವ ರಸ್ತೆ ದುರಸ್ತಿಗೆ  9.50 ಕೋಟಿ ರು. ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST  Somashekar ) ತಿಳಿಸಿದರು. ಮೈಸೂರಿನಲ್ಲಿ (Mysuru) ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ (Indian  Institute ) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದುರಸ್ತಿ ಕಾರ್ಯಕ್ಕೆ ಸುಮಾರು 9.50  ಕೋಟಿ ರು.  ಬೇಕಾಗುತ್ತದೆ ಎಂದು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇನ್ನೊಂದು ಬಾರಿ ಸರ್ವೇ ಮಾಡಲು ನಿರ್ಧರಿಸಿದ್ದಾರೆ ಎಂದರು.

ತಕ್ಷಣಕ್ಕೆ ಕುಸಿತವಾಗಿರುವ ಸ್ಥಳದಲ್ಲಿ ದುರಸ್ತಿ ಕಾರ್ಯ ಆರಂಭಿಸಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆ (Rain) ಬರುತ್ತಿರುವುದರಿಂದ ತೇವ ಇದೆ. ಬಿಸಿಲು ಬಂದು ನೆಲ ಗಟ್ಟಿಯಾದ ನಂತರ ದುರಸ್ತಿ ಕಾರ್ಯ ಆರಂಭಿಸಲಿದ್ದಾರೆ. ಈ ಕೆಲಸ ಶೀಘ್ರ ಆರಂಭಿಸುವಂತೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅವರ ಭೇಟಿ ವೇಳೆ ಮನವಿ ಮಾಡಿರುವುದಾಗಿ ಅವರು ಹೇಳಿದರು.

click me!