ಫಸ್ಟ್‌ನೈಟಿಗೂ ಮುನ್ನ ಪತ್ನಿಯ ರಾಸಲೀಲೆ ಲೀಕ್‌! ಪತಿಯ ಮೊಬೈಲ್ ಗೆ ಬಂದ ವಿಡಿಯೋ

By Kannadaprabha News  |  First Published Mar 16, 2020, 8:56 AM IST

ಫಸ್ಟ್ ನೈಟಿಗೂ ಮುನ್ನ ಪತಿಯ ಮೊಬೈಲಿಗೆ ಪತ್ನಿಯ ರಾಸಲೀಲೆ ವಿಡಿಯೋ ಬಂದಿದ್ದು, ಇದನ್ನು ಕಂಡು ಆತ ಶಾಕ್ ಆಗಿದ್ದಾನೆ. ಅಲ್ಲದೇ ಪೊಲೀಸ್ ಠಾಣೆಗೆ ತೆರಳಿ ವಂಚನೆ ದೂರು ದಾಖಲಿಸಿದ್ದಾನೆ


ಎನ್‌.ಲಕ್ಷ್ಮಣ್‌

ಬೆಂಗಳೂರು [ಮಾ.16]: ಮದುವೆಯ ಮೊದಲ ರಾತ್ರಿಗೆ ಎರಡು ದಿನ ಮುನ್ನ ಸಾಮಾಜಿಕ ಜಾಲತಾಣದಿಂದ ಬಂದ ಪತ್ನಿಯ ನಗ್ನ ಫೋಟೋ ಮತ್ತು ವಿಡಿಯೋ ನೋಡಿ ಪತಿ ಆಘಾತಕ್ಕೊಳಗಾದ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಹಳೆಯ ಪ್ರೇಮದ ಕಥೆ ಬಚ್ಚಿಟ್ಟು, ವಿವಾಹವಾಗಿ ವಂಚಿಸಿರುವ ಸರ್ಕಾರಿ ಸಿಬ್ಬಂದಿಯೂ ಆದ ಪತ್ನಿ ವಿರುದ್ಧ ಪತಿ ಸುಬ್ರಮಣ್ಯ ನಗರ ಠಾಣೆಗೆ ದೂರು ನೀಡಿದ್ದಾರೆ.

Tap to resize

Latest Videos

31 ವರ್ಷದ ರಾಜಕುಮಾರ್‌ ಅವರು ಕೊಟ್ಟದೂರಿನ ಮೇರೆಗೆ ಆರೋಪಿತೆ ಜಿನ್ನಾಂಬ (ಇಬ್ಬರು ಹೆಸರು ಬದಲಾಯಿಸಲಾಗಿದೆ) ಹಾಗೂ ಆಕೆಯ ಪೋಷಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೆಸೆಂಜರ್‌ನಲ್ಲಿ ಬಂತು ಫೋಟೋ:

ರಾಜಕುಮಾರ್‌ ಅವರು ಸುಬ್ರಮಣ್ಯ ನಗರದಲ್ಲಿ ನೆಲೆಸಿದ್ದು, ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾರೆ. ಆರೋಪಿತೆ ಜಿನ್ನಾಂಬ ಹಾಸನ ಜಿಲ್ಲೆಯ ನಿವಾಸಿಯಾಗಿದ್ದು, ಚಿಕ್ಕಮಗಳೂರಿನ ನ್ಯಾಯಾಲಯವೊಂದರಲ್ಲಿ ಟೈಪಿಸ್ಟ್‌ ಆಗಿದ್ದಾರೆ. ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ 2019ರ ಜೂ.30ರಂದು ಹಾಸನದ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥ ನಡೆದಿದೆ. ನಿಶ್ಚಿತಾರ್ಥಕ್ಕೆ 1.25 ಲಕ್ಷ ರು. ವ್ಯಯಿಸಿದ್ದೇವೆ. ಆರು ತಿಂಗಳ ಬಳಿಕ 2019ರ ನ.24ರಂದು ಹಾಸನದ ಕೆಇಬಿ ಸಮುದಾಯ ಭವನದಲ್ಲಿ ಜಿನ್ನಾಂಬ ಜತೆ ಗುರುಹಿರಿಯರ ಸಮ್ಮುಖದಲ್ಲಿ ವಿವಾಹ ನಡೆದಿದೆ. ವಿವಾಹವಾದ ದಿನದಿಂದ 10 ದಿನ ಮಾತ್ರ ಸುಬ್ರಮಣ್ಯ ನಗರದ ನನ್ನ ಮನೆಯಲ್ಲಿ ಇದ್ದಳು ಎಂದು ದೂರಿನಲ್ಲಿ ರಾಜಕುಮಾರ್‌ ಹೇಳಿದ್ದಾರೆ.

ಡಿ.12ರಂದು ಬೀಗರ ಔತಣಕೂಟ ತಿಪಟೂರಿನಲ್ಲಿ ಇದ್ದ ಕಾರಣ ಪತ್ನಿ ಜಿನ್ನಾಂಬಳನ್ನು ತವರು ಮನೆಯಲ್ಲಿಯೇ ಬಿಟ್ಟಿದ್ದೆ. ಡಿ.15ರಂದು ನಮ್ಮ ಮೊದಲ ರಾತ್ರಿ ನಿಗದಿಯಾಗಿತ್ತು. ಇದಕ್ಕೂ ಎರಡು ದಿನ ಮುನ್ನವೇ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಪ್ರಮೋದ್‌ ಕುಮಾರ್‌ ಎಂಬಾತ ಪತ್ನಿ ಹಾಗೂ ಆಕೆಯ ಹಿಂದಿನ ಪ್ರಿಯಕರ ವಿನೀತ್‌ ಜತೆಗಿದ್ದ ನಗ್ನ ಚಿತ್ರಗಳನ್ನು ಕಳುಹಿಸಿದ್ದ. ಜೊತೆಗೆ ಮೊಬೈಲ್‌ ಸಂಖ್ಯೆ ಹಾಕಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ ಎಂದಿದ್ದ. ಆ ಸಂಖ್ಯೆಗೆ ಕರೆ ಮಾಡಿದಾಗ ವಿನಿತ್‌ ‘ನಾನು ಮತ್ತು ಜಿನ್ನಾಂಬ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ. ಇಬ್ಬರ ನಡುವೆ ದೈಹಿಕ ಸಂಬಂಧ ಇದ್ದು, ನಿಮಗೆ ಕಳುಹಿಸಿರುವ ನಗ್ನ ಫೋಟೋ ನಿಮ್ಮ ನಿಶ್ಚಿತಾರ್ಥವಾದ ಮೇಲೆ ಚಿಕ್ಕಮಗಳೂರಿನಲ್ಲಿ ನಾವಿಬ್ಬರೂ ಒಟ್ಟಿಗೆ ಇದ್ದ ಫೋಟೋ’ ಎಂದಿದ್ದಾನೆ.

ಅಲ್ಲದೆ, ಜಿನ್ನಾಂಬ ಪ್ರಿಯಕರನೊಂದಿಗೆ ಚಾಟ್‌ ಮಾಡಿರುವ ಸಂದೇಶವನ್ನು ಸ್ಕ್ರೀನ್‌ ಶಾಟ್‌ ಮಾಡಿ ರಾಜಕುಮಾರ್‌ಗೆ ಕಳುಹಿಸಿದ್ದ. ಇದರಲ್ಲಿ ಜಿನ್ನಾಂಬ, ರಾಜಕುಮಾರ್‌ ನನ್ನ ಮನೆಯವರಿಗೆ ಬೇಕು, ನೀನು ನನಗೆ ಬೇಕು. ಯಾವುದೇ ಕಾರಣಕ್ಕೂ ನಾನು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ವರ್ಗಾವಣೆ ಮಾಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾಳೆ. ಬಳಿಕ ಜಿನ್ನಾಂಬ ಇರುವ ನಗ್ನ ವಿಡಿಯೋವನ್ನು ವಿನೀತ್‌ ರಾಜಕುಮಾರ್‌ಗೆ ಕಳುಹಿಸಿದ್ದ. ಈ ಆಧಾರದ ಮೇಲೆ ರಾಜಕುಮಾರ್‌ ಹಾಸನದ ಸೈಬರ್‌ ಠಾಣೆಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಜಿನ್ನಾಂಬ ಮತ್ತು ವಿನೀತ್‌ನನ್ನು ವಿಚಾರಣೆ ನಡೆಸಿದಾಗ ಇಬ್ಬರ ಪ್ರೇಮ ಕತೆ ಬೆಳಕಿಗೆ ಬಂದಿತ್ತು.

ತವರಿಗೆ ಬಂದವಳನ್ನು ಸ್ನಾನದ ಮನೆಯಲ್ಲಿ ಪ್ರಾಣವನ್ನೇ ತೆಗೆದ ಗೀಸರ್‌...

ಈ ಎಲ್ಲಾ ವಿಚಾರ ಗೊತ್ತಿದ್ದರೂ ಜಿನ್ನಾಂಬ ಹಾಗೂ ಅವಳ ಕುಟುಂಬದ ಸದಸ್ಯರು ಅದನ್ನು ಮುಚ್ಚಿಟ್ಟು ವಿವಾಹ ಮಾಡಿದ್ದಾರೆ. ಅಲ್ಲದೆ, ನನ್ನ ವಿರುದ್ಧವೇ ಎಲ್ಲರ ಬಳಿ ಕೆಟ್ಟದಾಗಿ ಹೇಳಿಕೊಂಡು ಬರುತ್ತಿದ್ದಾರೆ. ಈ ಘಟನೆಯಿಂದ ನನ್ನ ಪೋಷಕರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಾನಸಿಕವಾಗಿ ಕುಗ್ಗಿದ್ದಾರೆ. ಪೋಷಕರ ಆರೋಗ್ಯದ ಚಿಂತೆ, ಇನ್ನೊಂದೆಡೆ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ವಂಚನೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿದ್ದೇವೆ. ನನಗೆ ವಂಚನೆ ಮಾಡಿರುವ ಜಿನ್ನಾಂಬ ಹಾಗೂ ಆಕೆಯ ಪೋಷಕರು ಈಗ ನಮಗೇ ಬೆದರಿಕೆ ಹಾಕಿದ್ದಾರೆ. ಹಾನಸದ ಸೈಬರ್‌ ಠಾಣೆಯಲ್ಲಿ ವಿಡಿಯೋ ಮತ್ತು ನಗ್ನ ಫೋಟೋ ಬಂದಿದ್ದ ಬಗ್ಗೆ ದೂರು ದಾಖಲಿಸಿದ್ದರು. ಇದೀಗ ತಮಗೆ ಆಗಿರುವ ವಂಚನೆ ಮತ್ತು ಬೆದರಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜಕುಮಾರ್‌ ದೂರಿನಲ್ಲಿ ವಿವರಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.
ವಂಚನೆ ಮಾಡಿ ಆತ್ಮಹತ್ಯೆ ಡ್ರಾಮಾ!

ಮದುವೆಗೆ ನಾನು 7.64 ಲಕ್ಷ ರು. ಖರ್ಚು ಮಾಡಿದ್ದು, ಐಡಿಎಫ್‌ಸಿ ಬ್ಯಾಂಕ್‌ ಹಾಗೂ ಸಂಬಂಧಿಕರಿಂದ ಕೈಸಾಲ ಪಡೆದಿದ್ದೇನೆ. ಇಷ್ಟಾದರೂ ಜಿನ್ನಾಂಬ ಮತ್ತು ಆಕೆಯ ಚಿಕ್ಕಪ್ಪ ನಮಗೆ ಕರೆ ಮಾಡಿ ವಿಡಿಯೋ ಇಟ್ಟುಕೊಂಡು ಏನು ಮಾಡುತ್ತೀಯಾ ಮಾಡು ಎಂದು ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಜಿನ್ನಾಂಬ ನಮ್ಮ ಮನೆಯ ದೂರವಾಣಿಗೆ ಕರೆ ಮಾಡಿ, ನಿಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಿಮ್ಮ ಕುಟುಂಬದವರಿಗೆ ಸರಿಯಾಗಿ ಪಾಠ ಕಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ರಾಜಕುಮಾರ್‌ ತಿಳಿಸಿದ್ದಾರೆ.

ಯಾರನ್ನೂ ಪ್ರೀತಿಸುತ್ತಿಲ್ಲ ಎಂದಿದ್ದಳು :  ಮದುವೆಗೆ ಆರು ತಿಂಗಳು ಬಾಕಿ ಇದ್ದ ಹಿನ್ನೆಲೆಯಲ್ಲಿ ನಾನು ಮತ್ತು ಜಿನ್ನಾಂಬ ಇಬ್ಬರೂ ಮೊಬೈಲ್‌ನಲ್ಲಿ ಸಂಭಾಷಣೆ ಮತ್ತು ಸಂದೇಶ ವಿನಿಮಯ ಮಾಡಿಕೊಂಡಿದ್ದೆವು. ಈ ಅವಧಿಯಲ್ಲಿ ನಾನು ಜಿನ್ನಾಂಬಳನ್ನು ಎರಡು ಬಾರಿ ನೇರವಾಗಿ ಭೇಟಿಯಾಗಿದ್ದೆ. ಈ ವೇಳೆ ಈ ಹಿಂದೆ ಯಾರನ್ನಾದರೂ ಪ್ರೀತಿಸಿದ್ದೆಯಾ ಎಂದು ಕೇಳಿದ್ದಕ್ಕೆ ಆಕೆ ಇಲ್ಲ ಎಂದು ಹೇಳಿದ್ದಳು ಎಂದು ರಾಜಕುಮಾರ್‌ ತಿಳಿಸಿದ್ದಾರೆ.

click me!