ಪತ್ನಿ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ರಾಜಕೀಯ ಮುಖಂಡ ಸಾವು

Kannadaprabha News   | Asianet News
Published : Aug 22, 2020, 02:58 PM IST
ಪತ್ನಿ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ರಾಜಕೀಯ ಮುಖಂಡ ಸಾವು

ಸಾರಾಂಶ

ಪತ್ನಿ ಸಾವಿನ ಸುದ್ದಿ ಕೇಳಿ ಪತಿಯೂ ಹೃದಯಾಘಾತದಿಂದ ಸಾವಿಗೀಡಾದ ಘಟನೆ ನಡೆದಿದೆ. ಹಲವು ವರ್ಷಗಳಿಂದ ಜೊತೆಗಿದ್ದ ಸಂಗಾತಿಯ ಅಗಲಿಕೆ ನೋವಿಂದ ಹಠಾತ್ ಮೃತಪಟ್ಟಿದ್ದಾರೆ.

ಕನಕಗಿರಿ (ಆ.22) : ಆರು ದಶ​ಕ​ಗಳಿಂದ ಜತೆಗಿದ್ದ ಜೀವನಸಂಗಾತಿ ಬುಧವಾರ ತಡರಾತ್ರಿ ಏಕಾಏಕಿ ಹೃದಯಾಘಾತದಿಂದ ಮರಣ ಹೊಂದಿದ ಸುದ್ದಿ ಕೇಳಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪತಿಯೂ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಘಟನೆ ಪಟ್ಟಣದಲ್ಲಿ ನಡೆದಿದೆ.

ಬಾಡಿಗೆಗೆ ಲೋಡ್‌ ಕೊಡದ್ದಕ್ಕೆ ಚೂರಿಯಿಂದ ಇರಿದು ಹತ್ಯೆ...

ಪಟ್ಟಣದ ಹಿರಿಯ ರಾಜಕಾರಣಿ, ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಮಹಾಬಳೇಶ್ವರ ಸ್ವಾಮಿ ಕಲುಬಾಗಿಲಮಠ (83), ಪತ್ನಿ ಪ್ರಭಾವತಿ (78) ಮೃತರು. ಬುಧವಾರ ತಡರಾತ್ರಿ 12.15ಕ್ಕೆ ಪ್ರಭಾವತಿ ಹೃದಯಾಘಾತದಿಂದ ಮೃತಪಟ್ಟಿದ್ದು, ಕುಟುಂಬದವರು ದುಃಖದಲ್ಲೇ ಅಂತ್ಯಸಂಸ್ಕಾರದ ವಿಧಿ-ವಿಧಾನಗಳಲ್ಲಿ ತೊಡಗಿಸಿಕೊಂಡಿದ್ದರು. 

ಮಗುವಿನ ತಂದೆ ವಿಚಾರದಲ್ಲಿ ದಂಪತಿ ಮಧ್ಯೆ ಜಗಳ: ಮಗುವನ್ನು ಬಾವಿಗೆಸೆದ ತಾಯಿ..

ಪತ್ನಿ ಸಾವಿನಿಂದಾಗಿ ನೊಂದ ಮಹಾಬಳೇಶ್ವರ ಸ್ವಾಮಿ ಅವರೂ ಗುರುವಾರ ಬೆಳಗ್ಗೆ 6ಕ್ಕೆ ಹೃದಯಾಘಾತವಾಗಿ ಇಹಲೋಕ ತ್ಯಜಿಸಿದ್ದಾರೆ. ಮೃತರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ. ತಂದೆ-ತಾಯಿ ಅಂತ್ಯಸಂಸ್ಕಾರಕ್ಕೆ ಕೊನೆ ಮಗ ಹಾಗೂ ಮೊಮ್ಮಕ್ಕಳು ವಿಡಿಯೋ ಕಾಲ್‌ ಮೂಲಕವೇ ಅಂತಿಮ ದರ್ಶನ ಪಡೆದರು.
 

PREV
click me!

Recommended Stories

ಕೋರಮಂಗಲ್ಲಿ ಜನಸಾಗರದಿಂದ ಸಾರ್ವಜನಿಕ ಪ್ರವೇಶ ಬಂದ್, ಕಿರಿಕ್ ಮಾಡಿದಾತ ಪೊಲೀಸ್ ವಶಕ್ಕೆ
ಬೆಂಗಳೂರು: ಎಂಜಿ ರೋಡ್ ರಷ್‌ನಲ್ಲಿ ಪತ್ನಿ ನಾಪತ್ತೆ; ಆಘಾತ ತಾಳಲಾರದೆ ಪತಿಗೆ ಪಿಟ್ಸ್!