ಮೈಸೂರಿನಲ್ಲಿ ಕೊರೋನಾ ದಾಖಲೆ ಶೂನ್ಯ!

Kannadaprabha News   | Asianet News
Published : Aug 22, 2020, 02:41 PM IST
ಮೈಸೂರಿನಲ್ಲಿ ಕೊರೋನಾ ದಾಖಲೆ ಶೂನ್ಯ!

ಸಾರಾಂಶ

ಮೈಸೂರಿನಲ್ಲಿ ಆಗಸ್ಟ್ 22 ರಂದು ಯಾವುದೇ ಕೊರೋನಾ ಪ್ರಕರಣಗಳು ದಾಖಲಾಗಿಲ್ಲ. ಒಂದೂ  ಪ್ರಕರಣಗಳು ದಾಖಲಾಗದಿರಲು ಕಾರಣ ಇದೆ. 

ಮೈಸೂರು  (ಆ.22): ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆಯ ಹಿನ್ನೆಲೆ ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿಭಟಿಸಿದ್ದರಿಂದ ಶುಕ್ರವಾರ ಯಾವುದೇ ಕೋವಿಡ್‌ 19ಕ್ಕೆ ಸಂಬಂಧಪಟ್ಟಂತೆ ಎಲ್ಲಾ ಸೇವೆಗಳೂ ಬಂದ್‌ ಆಗಿದ್ದವು. 

ಈ ಹಿನ್ನೆಲೆಯಲ್ಲಿ ಕೋವಿಡ್‌ ಪರೀಕ್ಷೆ ನಡೆದಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್‌ ಪ್ರಕರಣವೂ ವರದಿಯಾಗಿಲ್ಲ. ಮಾತ್ರವಲ್ಲದೆ ಜಿಲ್ಲೆಯಲ್ಲಿ ಗುಣಮುಖರಾಗಿ ಡಿಸ್ಚಾಜ್‌ರ್‍ ಆದವರು, ಕೋವಿಡ್‌ನಿಂದ ಮೃತಪಟ್ಟವರ ಅಂಕಿ ಅಂಶಗಳಾವುವೂ ಲಭ್ಯವಾಗಿಲ್ಲ. 

ಇನ್ನೆರಡು ವರ್ಷದೊಳಗೆ ಕೊನೆಯಾಗುತ್ತೆ ಕೊರೋನಾ: ವಿಶ್ವ ಆರೋಗ್ಯ ಸಂಸ್ಥೆ..

ಹೀಗಾಗಿ, ಆರೋಗ್ಯ ಇಲಾಖೆಯ ಬಿಡುಗಡೆಗೊಳಿಸುವ ಕೊರೋನಾ ಹೆಲ್ತ್‌ ಬುಲೆಟಿನ್‌ನಲ್ಲಿ ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಶೂನ್ಯ ಎಂದು ನಮೂದಾಗಿದೆ.

PREV
click me!

Recommended Stories

ಕೋರಮಂಗಲ್ಲಿ ಜನಸಾಗರದಿಂದ ಸಾರ್ವಜನಿಕ ಪ್ರವೇಶ ಬಂದ್, ಕಿರಿಕ್ ಮಾಡಿದಾತ ಪೊಲೀಸ್ ವಶಕ್ಕೆ
ಬೆಂಗಳೂರು: ಎಂಜಿ ರೋಡ್ ರಷ್‌ನಲ್ಲಿ ಪತ್ನಿ ನಾಪತ್ತೆ; ಆಘಾತ ತಾಳಲಾರದೆ ಪತಿಗೆ ಪಿಟ್ಸ್!