ಹುಣಸೂರು ಬೈಎಲೆಕ್ಷನ್: ಗೆಲುವು ನಮ್ಮದೇ ಎನ್ನುತ್ತಿದ್ದಾರೆ ಮೂವರು ಅಭ್ಯರ್ಥಿಗಳು..!

By Kannadaprabha NewsFirst Published Dec 6, 2019, 10:36 AM IST
Highlights

ಹುಣಸೂರು ಬೈ ಎಲೆಕ್ಷನ್ ಮುಗಿದಿದ್ದು, ಇದೀಗ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ತಾಲೂಕಿನಲ್ಲಿ ಕಳದೊಂದು ತಿಂಗಳಿನಿಂದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷದ ನಾಯಕರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದು, ಮತದಾರರಿಗೆ ಆಸೆ- ಅಮಿಷಗಳನ್ನೊಡ್ಡಿ ಮತ ಸೆಳೆಯುವ ಯತ್ನ ನಡೆಯಿತು. ಮತದಾರರ ಕೃಪೆ ಯಾರಕಡೆಗಿದೆ ಎಂಬುದು ಇನ್ನು ತಿಳಿಯಬೇಕು.

ಮೈಸೂರು(ಡಿ.06): ಹುಣಸೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು ಕಳೆದೊಂದು ತಿಂಗಳಿನಿಂದ ನಡೆಸಿದ ಚುನಾವಣಾ ಪ್ರಚಾರವು ಮತದಾನದ ಮೂಲಕ ಅಂತ್ಯಗೊಂಡಿದ್ದು, ಮೂರು ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸದೊಂದಿಗೆ ಜನ ನಮ್ಮನ್ನು ಕೈ ಹಿಡಿಯುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಲೂಕಿನಲ್ಲಿ ಕಳದೊಂದು ತಿಂಗಳಿನಿಂದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷದ ನಾಯಕರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದು, ಮತದಾರರಿಗೆ ಆಸೆ- ಅಮಿಷಗಳನ್ನೊಡ್ಡಿ ಮತ ಸೆಳೆಯುವ ಯತ್ನ ನಡೆಯಿತು. ಗುರುವಾರ ಮತದಾನವು ಮುಗಿಯಿತು. ಶುಕ್ರವಾರದಿಂದ, ಜಾತಿ ಆಧಾರದಲ್ಲಿ ಮತಗಳ ಲೆಕ್ಕಚಾರ ನಡೆಯುತ್ತದೆ. ಯಾರು ಗೆಲ್ಲುತ್ತಾರೆಂಬ ಬಿಡ್ಡಿಂಗ್‌ ನಾವೆ ಗೆಲ್ಲುತ್ತೇವೆ ಎಂಬ ವಾದ ವಿವಾದಗಳು, ಹಳ್ಳಿಕಟ್ಟೆಗಳಲ್ಲಿ, ಹೋಟೆಲ್‌ಗಳಲ್ಲಿ ಹಾಗೂ ಪಂಚಾಯಿತಿ ಕಟ್ಟೆಗಳಲ್ಲಿ ಚರ್ಚೆ ಪ್ರಾರಂಭವಾಗಲಿದೆ. ಏನೇನು ಬೆಡ್ಡಿಂಗ್‌ ಮಾಡುತ್ತಾರೆ ಕಾದು ನೋಡಬೇಕಿದೆ ಎನ್ನುವ ಬಗ್ಗೆ ಸ್ಥಳೀಯವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮತ ಚಲಾಯಿಸಿ ನಿಲ್ಬೇಡಿ, ಹೋಗಿ ಎಂದಿದ್ದಕ್ಕೇ ಪ್ರತಿಭಟನೆ

ಕಳೆದ 40 ವರ್ಷಗಳ ರಾಜಕೀಯ ಜೀವನದಲ್ಲಿ ಸೋಲು-ಗೆಲುವು ಎರಡನ್ನು ನೋಡಿದ್ದೇನೆ. ಆದರೆ ಯಾವತ್ತು ಕೂಡ ಧೃತಿಗೇಟ್ಟಿಲ್ಲ. ಈ ಉಪ ಚುನಾವಣೆ ಸ್ವಾಭಿಮಾನದ ಚುನಾವಣೆಯಾಗಿದ್ದು, ಕ್ಷೇತ್ರದ ಜನರು ನನ್ನನ್ನು ಕೈಬಿಟ್ಟಿಲ್ಲ. ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುತ್ತಾರೆ. ಕ್ಷೇತ್ರದ ಅಭಿವೃದ್ಧಿ ಮುಖ್ಯವಾಗಿರುತ್ತದೆ. ಹಾಗಾಗಿ ನಾನು ಗೆದ್ದೆ ಗೆಲ್ಲುತ್ತೇನೆ. ಜೊತೆಗೆ ನಾನು ಈ ಹಿಂದೆ ಏನು ಮಾಡಿದ್ದೀನಿ, ಮುಂದೆ ಏನುಮಾಡುತ್ತೀನಿ ಎಂಬ ಕನಸುಗಳ ಬಗ್ಗೆ ತಿಳಿಸಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಎಚ್‌. ವಿಶ್ವನಾಥ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಾಸಕ ಅನಿಲ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ವಿರುದ್ಧ ಕೇಸ್‌

ಈ ಬಾರಿಯ ಚುನಾವಣೆಯಲ್ಲಿ ಮತದಾರರೇ ನನ್ನ ಬೆನ್ನೆಲುಬಾಗಿರುವುದು ಹೆಮ್ಮೆ ಎನಿಸಿದೆ. ತಮಗೆ ಇದು ನಾಲ್ಕನೇ ಚುನಾವಣೆಯಾಗಿದ್ದು, ಕಳೆದ ಮೂರು ಚುನಾವಣೆಗಳಲ್ಲಿ ಎರಡು ಬಾರಿ ಗೆದ್ದು, ಒಂದು ಬಾರಿ ಸೋತಿರುವ ನಾನು ಈ ಬಾರಿಯ ಚುನಾವಣೆಯಲ್ಲಿ ಕಾರ್ಯಕರ್ತರು, ಮತದಾರರು ಸಹ ತಮ್ಮನ್ನು ಬೆಂಬಲಿಸುತ್ತಿರುವುದು ಸಂತಸ ಮೂಡಿಸಿದೆ. ಸದ್ಯದಲ್ಲೇ ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಕಾರ್ಯಕರ್ತರೊಡನೆ ಚರ್ಚಿಸಿ ತಾಲೂಕನ್ನು ಕಾಂಗ್ರೆಸ್‌ ತೆಕ್ಕೆಗೆ ತೆಗೆದುಕೊಂಡು ಹೋಗುವ ಭರವಸೆ ಮೂಡಿದೆ. ಚುನಾವಣೆ ನಡೆದ ಮತ್ತೆ ಒಂದೂವರೆ ವರ್ಷದಲ್ಲೇ ಚುನಾವಣೆ ಬಂದಿರುವುದು ಬೇಸರ ತಂದಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಚ್‌.ಪಿ. ಮಂಜುನಾಥ್‌ ಹೇಳಿದ್ದಾರೆ.

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಮುಖಕ್ಕೆ ಇರಿದ..!

ಹುಣಸೂರು ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆಯಾಗಿದ್ದು, ಕ್ಷೇತ್ರದ ಮತದಾರರು ನನ್ನನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ನಾನೆ ಗೆಲ್ಲುತ್ತೇನೆ. ನನಗೆ ಇದು ಮೊದಲ ಚುನಾವಣೆಯಾಗಿದ್ದು, ಈ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು, ಕುಮಾರಣ್ಣನ ಆರ್ಶೀವಾದ ಮತ್ತು ಅವರ ಅಧಿಕಾರದಲ್ಲಿದ್ದಾಗ ಸರ್ಕಾರದಲ್ಲಿ ಮಾಡಿದ ಸಾಧನೆ ನೋಡಿ ನನಗೆ ಮತ ನೀಡಿ ಗೆಲ್ಲಿಸುವ ವಿಶ್ವಾಸವಿದೆ ಎಂದು ಜೆಡಿಎಸ್ ಅಭ್ಯರ್ಥಿ ಸೋಮಶೇಖರ್‌ ಹೇಳಿದ್ದಾರೆ.

click me!