ಮಹಾರಾಷ್ಟ್ರದ ಶಿರಡಿಯಲ್ಲಿ ಹಳ್ಳಿಹಕ್ಕಿ, ಗೆಲುವಿಗಾಗಿ ಸಾಯಿಬಾಬನ ಮೊರೆ

By Suvarna News  |  First Published Dec 7, 2019, 12:56 PM IST

ಬೈ ಎಲೆಕ್ಷನ್ ಮುಗಿದಿದ್ದು, ಇದೀಗ ಅಭ್ಯರ್ಥಿಗಳ ಟೆಂಪಲ್ ರನ್ ಜೋರಾಗಿದೆ. ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್‌. ವಿಶ್ವನಾಥ್ ಅವರು ಮಹಾರಾಷ್ಟ್ರದ ಶಿರಡಿ ಸಾಯಿಬಾಬನ ದರ್ಶನ ಪಡೆದು ಗೆಲುವಿಗಾಗಿ ಪ್ರಾರ್ಥಿಸಿದ್ದಾರೆ.


ಮೈಸೂರು(ಡಿ.07): ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಡಿ.09ರಂದು ಫಲಿತಾಂಶ ಪ್ರಕಟವಾಗಲಿದೆ. ಡಿಸೆಂಬರ್ 5ರಂದು ಚುನಾವಣೆಯ ನಂತರ ಅಭ್ಯರ್ಥಿಗಳು ಸ್ವಲ್ಪ ರಿಲಾಕ್ಸ್ ಆಗಿದ್ದು, ಈಗ ಟೆಂಪಲ್ ರನ್ ಆರಂಭವಾಗಿದೆ.

ಡಿಸೆಂಬರ್ 9ರಂದು ಹುಣಸೂರು ಬೈಎಲೆಕ್ಷನ್ ಫಲಿತಾಂಶ ಹಿನ್ನೆಲೆ ಕ್ಷೇತ್ರದ ಅಭ್ಯರ್ಥಿಗಳಿಂದ ಟೆಂಪಲ್ ರನ್ ಮುಂದುವರಿದಿದೆ. ಬಿಜೆಪಿ ಅಭ್ಯರ್ಥಿ ಎ.ಹೆಚ್.ವಿಶ್ವನಾಥ್ ಮಹಾರಾಷ್ಟ್ರದ ಶಿರಡಿಗೆ ಭೇಟಿ ನೀಡಿದ್ದಾರೆ.

Latest Videos

undefined

ಹೈದರಾಬಾದ್ ಎನ್‌ಕೌಂಟರ್: ಘಟನೆ ಸಂತೋಷವಲ್ಲ, ಸಮಾಧಾನ ತಂದಿದೆ ಎಂದ ಯದುವೀರ್

ವಿಶ್ವನಾಥ್ ಅವರು ಗೆಲುವಿಗಾಗಿ ಶಿರಡಿ ಸಾಯಿಬಾಬಾನ ಮೊರೆ ಹೋಗಿದ್ದು, ವಿಶೇಷ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಾಯಿಬಾಬಾನ ದರ್ಶನ ಪಡೆದು ವಿಶ್ವನಾಥ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಲಿದ್ದಾರೆ. ಭಾನುವಾರ ಮೈಸೂರಿಗೆ ಆಗಮಿಸಲಿದ್ದು ಅದಕ್ಕೂ ಮೊದಲು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿರುವ ಕಾಂಗ್ರೆಸ್ ಅಭ್ಯರ್ಥಿ

ಕಾಂಗ್ರೆಸ್ ಅಭ್ಯರ್ಥಿ ಹೆಚ್. ಪಿ. ಮಂಜುನಾಥ್ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ದೇವರಳ್ಳಿ ಸೋಮಶೇಖರ್ ತುಮಕೂರಿನ ತುರುವೇಕೆರೆಯ ಮನೆ ದೇವರ ದರ್ಶನಕ್ಕೆ ತೆರಳಿದ್ದಾರೆ. ದೇವರಹಳ್ಳಿ ಸೋಮಶೇಖರ್ ಬೇಟೆರಾಯ ಹಾಗೂ ಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಎನ್‌ಕೌಂಟರ್ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದ ಕಾನೂನು ಸಚಿವ

ಸದ್ಯ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಸ್ಟಾಂಗ್ ರೂಂ ಹುಣಸೂರು ಪಟ್ಟಣದ ಡಿ.ದೇವರಾಜ ಅರಸು ಕಾಲೇಜಿನಲ್ಲಿದ್ದು, ಡಿ.ದೇವರಾಜ ಅರಸು ಕಾಲೇಜಿನಲ್ಲೇ ಮತ ಎಣಿಕೆ ನಡೆಯಲಿದೆ. ಡಿ.9ರಂದು ಬೆಳಗ್ಗೆ 7ರಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. ಮಧ್ಯಾಹ್ನದ ವೇಳೆ ಅಭ್ಯರ್ಥಿಗಳ ಸಂಪೂರ್ಣ ಭವಿಷ್ಯ ಬಯಲಾಗಲಿದೆ.

click me!