ಟ್ಯೂಷನ್ ಗೆ ಹೋಗುವ ಬಾಲಕಿಯೇ ಕಿಡ್ನ್ಯಾಪ್ ಆದಳು : ಪೋಷಕರೇ ಎಚ್ಚರ!

Published : Dec 07, 2019, 12:28 PM IST
ಟ್ಯೂಷನ್ ಗೆ ಹೋಗುವ ಬಾಲಕಿಯೇ ಕಿಡ್ನ್ಯಾಪ್ ಆದಳು : ಪೋಷಕರೇ ಎಚ್ಚರ!

ಸಾರಾಂಶ

ಟ್ಯೂಷನ್ ಗೆಂದು ತೆರಳುತ್ತಿದ್ದ ಬಾಲಕಿಯೇ ಕಿಡ್ನಾಪ್ ಆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪೋಷಕರೇ ನಿಮ್ಮ ಮಕ್ಕಳು ಎಷ್ಟು ಸುರಕ್ಷಿತ ಎನ್ನುವುದು ಗಮನಿಸಿ 

ಬೆಂಗಳೂರು [ಡಿ.07]: ಶಾಲಾ ಬಾಲಕಿಯೋರ್ವಳನ್ನು ಕಿಡ್ನ್ಯಾಪ್ ಮಾಡಿ ಆಕೆಯ ಆಕೆಯ ಬಳಿ ಇದ್ದ ಚಿನ್ನದ ಕಿವಿಯೋಲೆ ಬೆಳ್ಳಿ ಕಾಲು ಗೆಜ್ಜೆ ಕಸಿದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಡಿಸೆಂಬರ್ 3 ರಂದು ಸಂಜೆ ವೇಳೆ ಬೆಂಗಳೂರಿನ ಮೈಸೂರು ಸರ್ಕಲ್ ನ ಎಂಎನ್ ಲೈನ್ ರಸ್ತೆಯಲ್ಲಿ ಟ್ಯೂಷನ್ ಗೆ ತೆರಳುತ್ತಿದ್ದ 12 ವರ್ಷದ ಬಾಲಕಿಯನ್ನು ಕಿಡ್ನಾಪ್ ಮಾಡಿ ಕರೆದೊಯ್ದು ಕಳ್ಳನೋರ್ವ ಚಿನ್ನ ಹಾಗೂ ಬೆಳ್ಳಿ ಬಿಚ್ಚಿಸಿಕೊಂಡಿದ್ದ. 

ಯಾರೂ ಇಲ್ಲದ ಜಾಗಕ್ಕೆ ಕರೆದೊಯ್ದು ಈ ಕೃತ್ಯ ಎಸಗಿದ್ದು, ಬಾಲಕಿ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದು ರಸ್ತೆಯಲ್ಲಿ ಸಿಕ್ಕ ಪೊಲೀಸ್ ಪೇದೆಯೋರ್ವರ ಬಳಿ ಘಟನೆಯ ಬಗ್ಗೆ ವಿವರಿಸಿದ್ದಳು. 

ಗಣೇಶನ ಪೂಜೆಗೆ ಆಗಮಿಸಿದ ಇಲಿಗಳು : ಭಕ್ತರಲ್ಲಿ ಮೂಡಿದ ಅಚ್ಚರಿ...

ಬಳಿಕ ಅಪಹರಣವಾಗಿ ತಪ್ಪಿಸಿಕೊಂಡು ಬಂದ ಬಾಲಕಿಯ ತಂದೆಯನ್ನು ಕರೆಸಿಕೊಂಡು ಬಳಿಕ ಕಿಡ್ನ್ಯಾಪ್ ಮಾಡಿ ಕಳ್ಳತನ ಮಾಡಿದ್ದ ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಭದ್ರತಾ ಕರ್ತವ್ಯದ ನಡುವೆಯೂ ಮಗುವನ್ನು ಎತ್ತಿ ಆಡಿಸಿದ ಎಸ್‌ಪಿ...

ಹಾಡಹಗಲಲ್ಲೇ ಇಂತಹ ಘಟನೆಗಳು ನಡೆಯುತ್ತಿದ್ದು ಶಾಲೆಗೆ ತೆರಳುವ ನಿಮ್ಮ ಮಕ್ಕಳು ಎಷ್ಟು ಸುರಕ್ಷಿತ ಎನ್ನುವುದು ಪೋಷಕರು ಗಮನಿಸುವುದು ಅಗತ್ಯ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!