ಒಂದಲ್ಲ, ಎರಡಲ್ಲ, ಮೂರು ಬಾರಿ ನಾಮಪತ್ರ ಸಲ್ಲಿಸಿದ BJP ಅಭ್ಯರ್ಥಿ

By Kannadaprabha News  |  First Published Nov 19, 2019, 8:42 AM IST

ಉಪಚುನಾಣೆ ಸಮೀಪಿಸಿದ್ದು, ನ.18ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಉಪ ಚುನಾವಣೆ ನಡೆಯಲಿರುವ ಹಲವು ಕ್ಷೇತ್ರಗಳಲ್ಲಿ ಅದ್ಧೂರಿಯಾಗಿ ನಾಮಪತ್ರ ಸಲ್ಲಿಕೆ ಕಾರ್ಯ ನಡೆದಿದೆ. ಮೈಸೂರಿನ ಹುಣಸೂರಿನಲ್ಲಿ ಮಾತ್ರ ಒಬ್ಬರೇ ಅಭ್ಯರ್ಥಿ ಮೂರು ಬಾರಿ ನಾಮಪತ್ರ ಸಲ್ಲಿಸಿದ್ದಾರೆ. ಯಾಕೆ, ಹೇಗೆ..? ಇಲ್ಲಿದೆ ವಿವರ.


ಮೈಸೂರು(ನ.19): ಉಪಚುನಾಣೆ ಸಮೀಪಿಸಿದ್ದು, ನ.18ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಉಪ ಚುನಾವಣೆ ನಡೆಯಲಿರುವ ಹಲವು ಕ್ಷೇತ್ರಗಳಲ್ಲಿ ಅದ್ಧೂರಿಯಾಗಿ ನಾಮಪತ್ರ ಸಲ್ಲಿಕೆ ಕಾರ್ಯ ನಡೆದಿದೆ. ಮೈಸೂರಿನ ಹುಣಸೂರಿನಲ್ಲಿ ಮಾತ್ರ ಒಬ್ಬರೇ ಅಭ್ಯರ್ಥಿ ಮೂರು ಬಾರಿ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ವಿಶ್ವನಾಥ್‌ ಮೂರು ಬಾರಿ ನಾಮಪತ್ರ ಸಲ್ಲಿಸಿದ ಘಟನೆ ನಡೆದಿದೆ. ಮೊದಲ ಬಾರಿ 12.30ಕ್ಕೆ ಬಿಜೆಪಿ ಎಸ್ಟಿಮೋರ್ಚಾ ಅಧ್ಯಕ್ಷ ಅಪ್ಪಣ, ನಗರಸಭಾ ಮಾಜಿ ಸದಸ್ಯ ಸತೀಶ್‌ ಕುಮಾರ್‌, ತಾಲೂಕು ಬಿಜೆಪಿ ಅಧ್ಯಕ್ಷ ಯೋಗಾ ನಂದಕುಮಾರ್‌, ಜಿಪಂ ಮಾಜಿ ಸದಸ್ಯ ರಮೇಶ್‌ ಕುಮಾರ್‌ ಇವರೊಂದಿಗೆ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

Tap to resize

Latest Videos

ಮೈಸೂರು ಜಿಲ್ಲೆ ಇಬ್ಭಾಗ? ವಿಶ್ವನಾಥ್ ಹೇಳಿದ ಹೊಸ ಜಿಲ್ಲೆ ರಹಸ್ಯ

2ನೇಬಾರಿಗೆ 2.30ರ ಸುಮಾರಿಗೆ 2.30. ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೆ ಮೆರವಣಿಗೆ ನಡೆಸಿ ಮಾಜಿ ಸಚಿವ ಅಪ್ಪಚ್ಚು ರಂಜನ್‌, ಸಂಸಂದ ಪ್ರತಾಪ್‌ ಸಿಂಹ, ಕೋಟೆ ಶಿವಣ್ಣ ಇವರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ.

3 ನೇ ಬಾರಿಗೆ ಸುಮಾರು 2.55ಕ್ಕೆ ಮಾಜಿ ಸಚಿವ ವಿಜಯಶಂಕರ್‌, ವಕೀಲ ರಾಮಕೃಷ್ಣ, ಅಪ್ಪಚ್ಚು ರಂಜನ್‌ ಇವರೊಂದಿಗೆ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಡಿಸೆಂಬರ್ 5ರಂದು ಉಪಚುನಾವಣೆ ನಡೆಯಲಿದ್ದು 9ರಂದು ಫಲಿತಾಂಶ ಪ್ರಕಟವಾಗಲಿದೆ.

'ಶಾಸಕನಾಗಿ ಮಸಿ ಬಳಿದಿದ್ದು ಸಾಕು, ಮಂತ್ರಿಯಾಗಿ ಜಿಲ್ಲೆ ಮಾರೋದ್ಬೇಡ'..!

click me!