ಹೋರಾಟಕ್ಕೆ ಬರಲ್ಲ ಎಂದಿದ್ದ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಇವತ್ತೇಕೆ ಬರುತ್ತಿದ್ದಾರೆ?. ಬಿಜೆಪಿಯಲ್ಲಿ ತೊಂದರೆ ಆಗುತ್ತಿದೆ ಅದಕ್ಕೆ ಮತ್ತೇ ಯತ್ನಾಳಗೆ ಈಗ ಸಮಾಜ ಬೇಕಾಗಿದೆ. ಬೇಕಾದಾಗ ಸಮಾಜವನ್ನು ಹಿಡಿಯುವುದು, ಬೇಡಾದಾಗ ಬಿಡುವುದು ಸರಿಯಲ್ಲ: ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ
ಬೆಳಗಾವಿ(ಡಿ.14): ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಸಮಸ್ಯೆ ಆಗುತ್ತಿರುವುದಕ್ಕೆ ಮತ್ತೇ ಪಂಚಮಸಾಲಿ ಸಮಾಜ ನೆನಪಾಗಿದೆ. ಬೇಕಾದಾಗ ಸಮಾಜವನ್ನು ಹಿಡಿಯುವುದು, ಬೇಡಾದಾಗ ಬಿಡುವುದು ಸರಿಯಲ್ಲ ಎಂದು ಹೇಳುವ ಶಾಸಕ ಬಸವನಗೌಡ ಪಾಟೀಲ ಯತ್ನಾಳಗೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಟಾಂಗ್ ನೀಡಿದ್ದಾರೆ
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋರಾಟಕ್ಕೆ ಬರಲ್ಲ ಎಂದಿದ್ದ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಇವತ್ತೇಕೆ ಬರುತ್ತಿದ್ದಾರೆ?. ಬಿಜೆಪಿಯಲ್ಲಿ ತೊಂದರೆ ಆಗುತ್ತಿದೆ ಅದಕ್ಕೆ ಮತ್ತೇ ಯತ್ನಾಳಗೆ ಈಗ ಸಮಾಜ ಬೇಕಾಗಿದೆ. ಬೇಕಾದಾಗ ಸಮಾಜವನ್ನು ಹಿಡಿಯುವುದು, ಬೇಡಾದಾಗ ಬಿಡುವುದು ಸರಿಯಲ್ಲ. ಕಾಂಗ್ರೆಸ್‌ನಲ್ಲಿ ನಮ್ಮ ಸಮಾಜದ ಹಲವು ನಾಯಕರಿದ್ದೇವೆ, ಮೀಸಲಾತಿಗೆ ಹೋರಾಡುತ್ತೇವೆ. ನಾವು ಅಧಿಕಾರ ಕಳೆದುಕೊಂಡರೂ ಚಿಂತೆಯಿಲ್ಲ, ಹೋರಾಟ ಮಾಡಿ ಮೀಸಲಾತಿ ಪಡೆಯುತ್ತೇವೆ ಎಂದರು.
ಭ್ರೂಣ ಲಿಂಗ ಪತ್ತೆ ಕುರಿತು ಮಾಹಿತಿ ನೀಡುವವರಿಗೆ ಸರ್ಕಾರದಿಂದ ಬಂಪರ್ ಬಹುಮಾನ: ಸಚಿವ ದಿನೇಶ್
ಕಾಂಗ್ರೆಸ್ ಸರ್ಕಾರ ಮೀಸಲಾತಿ ಕೊಡಲ್ಲ ಎಂಬುದು ಯತ್ನಾಳ ಕಟ್ಟಿರುವ ಕಥೆ ಅಷ್ಟೇ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಲ್ಲ ಎಂದು ಸಿಎಂ ಎಲ್ಲಿಯೂ, ಯಾರಿಗೂ ಹೇಳಿಲ್ಲ. ಸರ್ಕಾರ ಬಂದು ಏಳು ತಿಂಗಳಾಗಿವೆ, ನಮಗೆ ಸ್ವಲ್ಪ ಸಮಯಾವಕಾಶ ಕೊಡಬೇಕು ಅಲ್ಲವೇ ಹಿಂದಿನ ಸರ್ಕಾರದ 2ಸಿ, 2ಡಿ ಮೀಸಲಾತಿ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ಸಮಯ, ಸಂದರ್ಭ ನೋಡಿಕೊಂಡು ನಾವು ಸದನದಲ್ಲಿ ಹೋರಾಟ ಮಾಡುತ್ತೇವೆ ಎಂದರು. ಸದನದಲ್ಲಿ ಪ್ರಸ್ತಾಪ ಮಾಡುತ್ತಿಲ್ಲ ಎನ್ನುತ್ತಾರೆ, ಆದರೆ ಬೊಮ್ಮಾಯಿ ತಾಯಿ ಮೇಲೆ ಪ್ರಮಾಣ ಮಾಡಿದ್ದರಲ್ಲ. ಹಿಂದಿನ ಸರ್ಕಾರದಲ್ಲಿ ಇದೇ ಯತ್ನಾಳ 2ಎ ಮೀಸಲಾತಿ ಕೊಡಿಸಬೇಕಿತ್ತು ಎಂದು ಪ್ರಶ್ನಿಸಿದರು.
ಚುನಾವಣೆ ಹೊತ್ತಲ್ಲಿ ಮತ್ತೆ ಪಂಚಮಸಾಲಿ ಹೋರಾಟ ಕಿಚ್ಚು
ಕಾಂಗ್ರೆಸ್ ಶಾಸಕರು ಸದನದಲ್ಲಿ ಧ್ವನಿ ಎತ್ತುತ್ತಿಲ್ಲ ಎಂಬ ಕೂಡಲಸಂಗಮ ಸ್ವಾಮೀಜಿ ಬೇಸರ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ವಿಜಯಾನಂದ ಕಾಶಪ್ಪನವರ, ಹಿಂದೆ ಜಗದೀಶ್ ಶೆಟ್ಟರ, ಬಿಎಸ್‌ವೈ ಭರವಸೆ ನೀಡಿದ್ದರೂ ಮೀಸಲಾತಿ ಕೊಡಲಿಲ್ಲ. ಬಸವರಾಜ ಬೊಮ್ಮಾಯಿ ಮೀಸಲಾತಿ ಸಂಬಂಧ ತಾಯಿ ಮೇಲೆ ಆಣೆ ಮಾಡಿದ್ದರು ಎಂದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಏಳು ತಿಂಗಳಾಗಿದ್ದು, ಸಿಎಂ ಸ್ಪಂದಿಸುತ್ತಿದ್ದಾರೆ, ನಿನ್ನೆಯೂ ನಮ್ಮ ನಿಯೋಗಕ್ಕೆ ಭೇಟಿಯಾಗಿ ಸುದೀರ್ಘ ಚರ್ಚಿಸಿದ್ದಾರೆ
ಬೆಂಗಳೂರಲ್ಲಿ ಅಧಿಕಾರಿಗಳ ಸಭೆ ನಡೆಸಿ ಮೀಸಲಾತಿಗೆ ಏನೆಲ್ಲ ಕ್ರಮ ಕೈಗೊಳ್ಳಬೇಕೆಂದು ಚರ್ಚಿಸುವೆ ಎಂದಿದ್ದಾರೆ. ನಮ್ಮ ಸಮಾಜದ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಗೌರವ ಇದೆ ಎಂದು ತಿಳಿಸಿದರು.