ಧಾರವಾಡ ಲೋಕೋಪಯೋಗಿ ಇಲಾಖೆಗೆ ಅಂಟಿದ ವಾಸ್ತು ದೋಷ!

By Gowthami K  |  First Published Aug 12, 2022, 6:05 PM IST

ಧಾರವಾಡ ಲೋಕೊಪಯೋಗಿ ಇಲಾಖೆಯಲ್ಲಿ ಭಾರಿ ಅವ್ಯವಹಾರದ ವಾಸನೆ ಕಂಡುಬರುತ್ತಿದೆ.  ಕಟ್ಟಡಗಳನ್ನು ಆಗಾಗ ಕಟ್ಟಲಾಗುತ್ತಿದೆ ವಾಸ್ತು ದೋಷ ಇದೆಯಾ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.


ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್  ಸುವರ್ಣ ನ್ಯೂಸ್  

ಧಾರವಾಡ (ಅ.12): ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನೋ ಹಾಗೆ ಆಗಿದೆ. ಧಾರವಾಡ ಜಿಲ್ಲಾಡಳಿತದಲ್ಲಿ ಯಸ್ ಎನ್ ಪ್ರಕರಣ ಅನ್ನೊದಾದ್ರೆ ಧಾರವಾಡ ಲೋಕೊಪಯೋಗಿ ಇಲಾಖೆಯಲ್ಲಿ ಭಾರಿ ಅವ್ಯವಹಾರದ ವಾಸನೆ ಕಂಡುಬರುತ್ತಿದೆ ಎಂದರೆ ತಪ್ಪಾಗಲಾರದು. ಸರಕಾರಿ ಕಟ್ಟಡಗಳನ್ನ ಕೋಟ್ಯಾಂತರ ಹಣ ಖರ್ಚು ಮಾಡಿ ಸರಕಾರ ನಿರ್ಮಾಣ ಮಾಡುತ್ತದೆ. ಆದರೆ ಲೋಕೋಪಯೋಗಿ ಇಲಾಖೆಯ ಇಇ ಆದ ಡಾ.ಟಿ ಎಸ್ ಮುರಳಿಧರ್ ಅವರು ಅಧಿಕಾರ ವಹಿಸಿಕ್ಕೊಂಡು ಎರಡು ತಿಂಗಳು ಕಳೆದಿಲ್ಲ. ಅಷ್ಟರಲ್ಲೆ ಅವರು ಸುಮಾರು 20 ಲಕ್ಷ ಕ್ಕೂ ಹೆಚ್ಚು ಸರಕಾರಿ ಹಣವನ್ನ ರಿನಿವೇಶನ್ ಎಂಬ ಹೆಸರಿನಲ್ಲಿ ಹಣ ಪೋಲು ಮಾಡುತ್ತಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. ಚೆನ್ನಾಗಿ ಇರೋ ಎಇಇ ಕಚೇರಿಯ ಮತ್ತು ತಮ್ಮ ಕ್ವಾಟರ್ಸನ್ನ ರಿನಿವೇಶನ್ ಮಾಡುತ್ತಿದ್ದಾರೆ. ಆದರೆ ಇವನ್ನೆಲ್ಲ ಮಾಡಬೇಕಾದರೆ ಟೆಂಡರ್ ಕರೆಯಬೇಕು, ಗುತ್ತಿಗೆದಾರರಿಗೆ ಹಂಚಬೇಕು, ಸರಕಾರದಿಂದ ಅನುಮತಿ ಪಡೆಯಬೇಕು ಆದರೆ ಅವೆಲ್ಲವನ್ನ ಗಾಳಿಗೆ ತೂರಿ ರಿನಿವೇಶನ್ ಮಾಡುತ್ತಿದ್ದಾರೆ ಎಂದು ಕೇಳಿ ಬಂದಿದೆ. ಇನ್ನು ಅಧಿಕಾರಿಗಳು ಎರಡು ವರ್ಷಗೆ ಬದಲಾವಣೆ ಆಗ್ತಾರೆ ಆದರೆ ತಮಗೆ ಹೇಗೆ ಬೇಕೋ ಹಾಗೆ ಆಪಿಸ್  ನ ಒಳಾಂಗಣವನ್ನ ಒಡೆದು ವಾಸ್ತು ಪ್ರಕಾರ ಸರಕಾರಿ ದುಡ್ಡಲ್ಲ ಕೋಠಡಿಗಳನ್ನ ನಿರ್ಮಾಣ ಮಾಡಿಕ್ಕೊಳ್ಳುತ್ತಿದ್ದಾರೆ. 

Tap to resize

Latest Videos

 ಇನ್ನು ಲೋಕೋಪಯೋಗಿ ಕಚೇರಿಗೆ ವಾಸ್ತುದೋಷ ಇದೆನಾ ಅನ್ನುವ ಮಾತುವಳು ಕೇಳಿ ಬಂದಿವೆ. ಕಳೆದ ಎರಡು ತಿಂಗಳ ಹಿಂದೆ ಅಧಿಕಾರ ವಹಿಸಿಕ್ಕೊಂಡಿರುವ ಇಇ ಡಾ.ಮುರಳಿ ಅವರು ಯಾವುದೆ ಟೆಂಡರ್ ಕರಿಯದೆ ಕಚೇರಿಯ ಕೆಲಸ ಮಾಡುತ್ತಿರುವದರ ಬಗ್ಗೆ ಆರೋಪ ಕೇಳಿಬಂದಿದೆ. ಆದರೆ ಇಲ್ಲಿ ಹೇಳೋರಿಲ್ಲ, ಕೇಳೋರಿಲ್ಲ, ಈ ಅಧಿಕಾರಿಗೆ ಎನ್ನಲಾಗುತ್ತಿದೆ. ಸುಮಾರು 20 ಲಕ್ಷ ಹಣ ಖರ್ಚು ಮಾಡಿ ವಾಸ್ತು ಬದಲಾವಣೆ ಮಾಡುತ್ತಿರುವ ಇ ಇ ಮುರಳಿ ಅವರಿಗೆ ಈ ಕುರಿತು ಮಾಹಿತಿ ಕೇಳಿದ್ರೆ ಹರಕೆ ಉತ್ತರ ನೀಡುತ್ತಿದ್ದಾರೆ.

ಸುಮಾರು 20 ಲಕ್ಷಕ್ಕೂ ಹೆಚ್ಚು ಹಣ ಬಳಕೆ ಮಾಡಿ ಕಚೇರಿ ಮತ್ತು ಕ್ವಾಟರ್ಸ್ ವಾಸ್ತು ಅದಲು ಬದಲು ಮಾಡುತ್ತಿದ್ದಿರಿ ಇದರ ಬಗ್ಗೆ ಕರೆದಿರುವ ಟೆಂಡರ್ ಕಾಪಿ, ವರ್ಕ ಆರ್ಡರ್, ದಾಖಲಾತಿಗಳನ್ನ ಕೇಳಿದರೆ ಕೇವಲ ನಮ್ಮ‌ ಹತ್ರ ಇವೆ ಎಂದು ಹರಕೆ ಉತ್ತರವನ್ನ ಕೊಡುತ್ತಾನೆ ಬಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯೇ ಕೇಳಿದ್ರೆ ಈ ಹಿಂದೆ ಟೆಂಡರ್ ಕರೆಯಲಾಗಿದೆ  ಎಂದು ಹೇಳುತ್ತಿದ್ದಾರೆ. ಕಳೆದ ವಾರದಿಂದ ದಾಖಲಾತಿ ಕೇಳಿದ್ರು ಮಾಹಿತಿ ನೀಡದ ಲೋಕೋಪಯೋಗಿ ಇಲಾಖೆ ಇ,ಇ ಅವರು ಯಾಕೆ ಈ ರೀತಿ ಸರಕಾರಿ‌ ದುಡ್ಡನ್ನ‌ ಪೋಲು ಮಾಡುತ್ತಿದ್ದಾರೆ ಎಂದು ಮಾತನಾಡುತ್ತಿದ್ದಾರೆ ಜನರು ಸರಕಾರದ ದುಡ್ಡು ಪೋಲು ಮಾಡುತ್ತಿರುವ ಅಧಿಕಾರಿಗಳು ಯಾಕೆ ದಾಖಲಾತಿಯನ್ನ ಬಿಡುಗಡೆ ಮಾಡುತ್ತಿಲ್ಲ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ. ಅಧಿಕಾರಿಗಳು ಎಂಬ ಕಳಂಕವನ್ನ‌ ಹಾಕಿಕ್ಕೊಂಡಿದ್ದಾರೆ.

ಲೋಕೋಪಯೋಗಿ ಇಲಾಖೆ ಎಎಇಇ ಗೆ ಬೂಟಿನಿಂದ ಹೊಡೆಯುತ್ತೇನೆಂದ ಉಮೇಶ್ ಕತ್ತಿ!

ಚೆನ್ನಾಗಿರೋ ಕಟ್ಟಡಗಳನ್ನು ಆಪೀಸ್ ಪ್ರಿಮಾಯ್ ಸಿಸ್ ವಸ್ತು ಹೇಸರಲ್ಲಿ ಯಾಕೆ ಸರಕಾರಿ ಹಣವನ್ನ‌ ಪೋಲು ಮಾಡುತ್ತಿದ್ದಾರೆ. ಇನ್ನು ಉತ್ತರ ಕರ್ನಾಟಕದಲ್ಲಿ ಗುತ್ತಿಗೆದಾರರು ಬಿಲ್ ಆಗ್ತಿಲ್ಲ ಅಂತ ಪರದಾಡುತ್ತಿದ್ದರೆ ಇನ್ನು ಕೆಲ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕ್ಕೊಂಡ್ರೆ ಇವರು ಇರೋ ಹಣದಲ್ಲಿ ಕಚೇರಿಯನ್ನು ತಮಗರ ಹೆಗೆ ಬೆಕೋ ಹಾಗೆ ಕಣ ಖರ್ಚು ಮಾಡಿ ರಿನಿವೇಶನ್ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಜ್ಞಾ ವಂತರ ಮಾತಾಗಿದೆ.

click me!