ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಆ. 13 ರಿಂದ ಆ. 15ರವರೆಗೆ ಭೇಟಿ ನೀಡುವ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಬಿಎಂಆರ್‌ಸಿಎಲ್ ರಿಯಾಯಿತಿ ದರದ ಪ್ರಯಾಣ ವ್ಯವಸ್ಥೆಯನ್ನು ಕಲ್ಪಿಸಿದೆ.
ಬೆಂಗಳೂರು (ಅ.12): ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ವಾರಾಂತ್ಯ ಮತ್ತು ಸ್ವಾತಂತ್ರ್ಯ ದಿನದಂದು (ಆ. 13 ರಿಂದ ಆ. 15ರವರೆಗೆ) ಭೇಟಿ ನೀಡುವ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ರಿಯಾಯಿತಿ ದರದ ಪ್ರಯಾಣ ವ್ಯವಸ್ಥೆಯನ್ನು ಕಲ್ಪಿಸಿದೆ. ನಿಗದಿತ ಮೂರು ದಿನಗಳಂದು ಬೆಳಿಗ್ಗೆ 10 ಗಂಟೆ ಯಿಂದ ರಾತ್ರಿ 8 ಗಂಟೆ ರವರೆಗೆ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಟಿಕೆಟ್ ದರ 30 ರೂ. ಇರುತ್ತದೆ. ಇದಕ್ಕಾಗಿ ಪೇಪರ್ ಟಿಕೆಟ್ ಪರಿಚಯಿಸಿದೆ. ಆ ದಿನದಲ್ಲಿ ಒಂದು ಬಾರಿ ಲಾಲ್‌ಬಾಗ್‌ನಿಂದ ಯಾವುದೇ ನಿಲ್ದಾಣಕ್ಕೆ ಪ್ರಯಾಣಿಸಬಹುದು. ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಎಲ್ಲ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪೇಪರ್ ಟಿಕೆಟ್‌ಗಳನ್ನು ಪ್ರಯಾಣಿಕರು ಖರೀದಿಸಬಹುದು. ಲಾಲ್‌ಬಾಗ್ ನಿಲ್ದಾಣದಲ್ಲಿ ಈ ಪೇಪರ್ ಟಿಕೆಟ್ ರಾತ್ರಿ 8ರವರೆಗೆ ಲಭ್ಯ ಇರಲಿದೆ ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ. ಅನ್ಯ ನಿಲ್ದಾಣದಿಂದ ಲಾಲ್‌ಬಾಗ್ ನಿಲ್ದಾಣಕ್ಕೆ ಟೋಕನ್ ಮತ್ತು ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸಿ ಪ್ರಯಾಣ ಮಾಡ ಬಹುದಾಗಿದೆ.
ಸೋಲಾರ್‌ನಿಂದ ಮೆಟ್ರೋಗೆ ಭಾರಿ ಹಣ ಉಳಿತಾಯ, ವರ್ಷದಲ್ಲಿ 1.17 ಕೋಟಿ ವಿದ್ಯುತ್ ಬಿಲ್ ಉಳಿತಾಯ:
ತನ್ನ ಐದು ನಿಲ್ದಾಣಗಳಲ್ಲಿ ಸೋಲಾರ್ ಅಳವಡಿಸಿ ಬೆಂಗಳೂರು ಮೆಟ್ರೋ ನಿಗಮವು ಬರೋಬ್ಬರಿ .1.17 ಕೋಟಿ ವಿದ್ಯುತ್ ಬಿಲ್ ಉಳಿತಾಯ ಮಾಡಿದೆ. ಕಳೆದ ವರ್ಷದ ಜನವರಿ 15ರಂದು ಲೋಕಾರ್ಪಣೆಗೊಂಡ ಹಸಿರು ಮಾರ್ಗದ ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ, ಮತ್ತು ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದಲ್ಲಿ ಅಳವಡಿಸಲಾಗಿರುವ ಸೋಲಾರ್ ವ್ಯವಸ್ಥೆಯಿಂದ ಕೇವಲ ಒಂದೂವರೆ ವರ್ಷದಲ್ಲಿ ಇಷ್ಟೊಂದು ಪ್ರಮಾಣದ ದುಡ್ಡು ನಿಗಮಕ್ಕೆ ಉಳಿತಾಯವಾಗಿದೆ.
56 ಕಿ.ಮೀ. ಮೆಟ್ರೋ ಜಾಲ ಹೊಂದಿದ್ದರೂ ಸದ್ಯ ನಷ್ಟದಲ್ಲೇ ಕಾರ್ಯ ನಿರ್ವಹಿಸುತ್ತಿರುವ ಹಾಗೆಯೇ ಪ್ರಯಾಣೇತರ ಆದಾಯ ಹೆಚ್ಚಿಸಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿರುವ ಮೆಟ್ರೋ ನಿಗಮಕ್ಕೆ ಸೌರಶಕ್ತಿಯನ್ನು ಬಳಸಿ ಹಣ ಉಳಿಸುವ ಪ್ರಯತ್ನ ಫಲ ನೀಡಿರುವುದು ಸಂತಸ ತಂದಿದೆ.
ಈ ಐದು ನಿಲ್ದಾಣಗಳಲ್ಲಿ ಬೆಳಕಿನ ವ್ಯವಸ್ಥೆ, ಎಸ್ಕಲೇಟರ್, ಹವಾನಿಯಂತ್ರಣ ವ್ಯವಸ್ಥೆ ಮುಂತಾದವುಗಳಿಗೆ ಸೌರಶಕ್ತಿಯನ್ನೇ ಬಳಸುತ್ತದೆ. ನಮ್ಮ ನಿಲ್ದಾಣಗಳ ವಿದ್ಯುತ್ ಬೇಡಿಕೆಯನ್ನು ನಾವು ಸೌರಶಕ್ತಿಯಿಂದ ಈಡೇರಿಸಿಕೊಳ್ಳಲು ಸಮರ್ಥರಾಗಿದ್ದೇವೆ. ದಟ್ಟಮೋಡ ಮತ್ತು ಮಳೆ ಇದ್ದ ಸಂದರ್ಭದಲ್ಲಿ ಮಾತ್ರ ಸೌರಶಕ್ತಿ ಉತ್ಪಾದನೆ ಕಡಿಮೆ ಇರುತ್ತದೆ ಎಂದು ಮೆಟ್ರೋ ಅಧಿಕಾರಿ ಯಶವಂತ್ ಚೌವಾಣ್ ತಿಳಿಸುತ್ತಾರೆ.
ಐದು ನಿಲ್ದಾಣಗಳಿಂದ ಈವರೆಗೆ 1885 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗಿದೆ. ಯುನಿಟ್‌ಗೆ .6.20 ನಂತೆ .1.17 ಕೋಟಿ ಉಳಿಸಲಾಗಿದೆ. ತಿಂಗಳಿಗೆ 10ರಿಂದ 11 ಲಕ್ಷ ರು. ವಿದ್ಯುತ್ ಉಳಿಸುತ್ತಿದ್ದೇವೆ ಎಂದು ಅವರು ಹೇಳಿದರು.
2ನೇ ಹಂತದಲ್ಲಿ ನಮ್ಮಮೆಟ್ರೋ ಸೂಪರ್ ಫಾಸ್ಟ್: ಓಡಲಿದೆ 2 ನಿಮಿಷಕ್ಕೊಂದು ಟ್ರೈನ್
ಯೋಜನೆ ಯಶಸ್ಸಿ ಆಗಿರುವ ಹಿನ್ನೆಲೆಯಲ್ಲಿ ನಿರ್ಮಾಣದ ಹಂತದಲ್ಲಿರುವ ಹಲವು ನಿಲ್ದಾಣಗಳಲ್ಲಿ ಸೌರಶಕ್ತಿ ಅಳವಡಿಸಲು ಮೆಟ್ರೋ ನಿಗಮ ಮುಂದಾಗಿದೆ. ಒಟ್ಟು 40 ನಿಲ್ದಾಣಗಳಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲು ತೀರ್ಮಾನಿಸಲಾಗಿದೆ. ಆದರೆ ಈಗಾಗಲೇ ಚಾಲ್ತಿಯಲ್ಲಿರುವ ಹಂತ ಒಂದರ ನಿಲ್ದಾಣಗಳ ವಿನ್ಯಾಸ ಸೋಲಾರ್ ಅಳವಡಿಕೆಗೆ ಪೂರಕವಾಗಿಲ್ಲ ಎಂದು ಅವರು ತಿಳಿಸಿದರು.
ಪ್ರಯಾಣಿಕರ ಗಮನಕ್ಕೆ: ಮೆಟ್ರೋ ಸಂಚಾರದ ಸಮಯ ಬದಲಾವಣೆ
ಸದ್ಯ, ಬಿಎಂಆರ್‌ಸಿಎಲ್ ಪ್ರತಿ ತಿಂಗಳು .6 ಕೋಟಿಗಳಷ್ಟು ವಿದ್ಯುತ್ ಬಿಲ್ ಅನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಗೆ ಪಾವತಿಸುತ್ತಿದೆ. 2025ರ ಹೊತ್ತಿಗೆ 175 ಕಿ.ಮೀ. ಮೆಟ್ರೋ ಮಾರ್ಗ ವಿಸ್ತರಣೆಗೊಳ್ಳಲಿದ್ದು, ಆಗ ತಿಂಗಳ ವಿದ್ಯುತ್ ಬಿಲ್ .25 ಕೋಟಿ ತಲುಪಬಹುದು. ಆದ್ದರಿಂದ ಹೆಚ್ಚು ಹೆಚ್ಚು ನಿಲ್ದಾಣಗಳಲ್ಲಿ ಸೋಲಾರ್ ಬಳಸಿ ವಿದ್ಯುತ್ ಬಿಲ್ ಕಡಿಮೆ ಮಾಡುವ ಗುರಿ ಹೊಂದಿದ್ದೇವೆ ಎಂದು ಮೆಟ್ರೋದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.