
ಚನ್ನಪಟ್ಟಣ (ಆ.12) : ರೈತರ ಪಾಲಿಗೆ ಕಂಟಕಪ್ರಾಯವಾಗಿ ಸಮಸ್ಯೆ ಸೃಷ್ಟಿಸುತ್ತಿರುವ ಆನೆಗಳ ಸ್ಥಳಾಂತರ ಕಾರ್ಯಾಚರಣೆ ಮಾವುತರ ಪ್ರತಿಭಟನೆ ಹಿನ್ನೆಲೆ ತಡವಾಗಿದ್ದು, ಶೀಘ್ರವೇ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಆನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಲವಾರು ಸಭೆಗಳನ್ನು ನಡೆಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೂ ಸಭೆ ನಡೆಸಿದ್ದೇನೆ. ನನ್ನ ಮನವಿ ಮೇರೆಗೆ ಸಮಸ್ಯೆ ಸೃಷ್ಟಿಸಿರುವ ಕಾಡಾನೆ ಸಾಗಹಾಕುವ ಕಾರ್ಯಾಚರಣೆಗೆ ಅನುಮತಿ ನೀಡಲಾಗಿದ್ದು, ಬಂಡಿಪುರದಿಂದ ಸಾಕಾನೆಗಳನ್ನ ತಂದು ಆನೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ದಸರಾ ಬಹಿಷ್ಕರಿಸಲು ಆನೆ ಮಾವುತ, ಕಾವಡಿಗರ ಸಂಘ ನಿರ್ಧಾರ
ಮಾವುತರ ಪ್ರತಿಭಟನೆ ಹಿನ್ನೆಲೆ ಕಾರ್ಯಾಚರಣೆ ತಡವಾಗಿದೆ. ಮಾವುತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ ಹಿನ್ನೆಲೆ ಸಮಸ್ಯೆಯಾಗಿದೆ. ದಸರಾಕ್ಕೆ ಗಜಪಡೆ ಆಗಮಿಸುವ ನಿಟ್ಟಿನಲ್ಲಿ ಮಾವುತರ, ಸರ್ಕಾರದ ನಡುವಿನ ಮನಸ್ತಾಪಕ್ಕೆ ತೆರೆ ಬಿದ್ದಿದ್ದು, ಮಾವುತರು ಸಹ ಕಾಡನೆ ಸ್ಥಳಾಂತರ ಕಾರ್ಯಾಚರಣೆಗೆ ಒಪ್ಪಿಕೊಂಡಿದ್ದಾರೆ. ಆದಷ್ಟುಬೇಗ ಪಳಗಿದ ಆನೆಗಳು ತಾಲೂಕಿಗೆ ಆಗಮಿಸಲಿದ್ದು, ಕಾರ್ಯಾಚರಣೆ ಆರಂಭವಾಗಲಿದೆ ಎಂದು ಭರವಸೆ ನೀಡಿದರು.
ಅವೈಜ್ಞಾನಿಕ ಕಾಮಗಾರಿಯಿಂದ ಸಮಸ್ಯೆ:
ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಿರುವ ಡಿಬಿಎಲ್ ಕಂಪನಿ ಸರಿಯಾಗಿ ಕಾಮಗಾರಿ ನಡೆಸಿಲ್ಲ. ಅಂಡರ್ ಪಾಸ್‌ಗಳನ್ನು ಅವೈಜ್ಞಾನಿಕವಾಗಿ ಮಾಡಿದ್ದು, ಇದರಿಂದ ಸಮಸ್ಯೆಯಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಡಿಬಿಎಲ್ ಕಂಪನಿ ನಡೆಸಿರುವ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಇಂಜಿನಿಯರ್‌ಗಳೊಂದಿಗೆ ಮಾತನಾಡಿದ್ದೇನೆ ಎಂದರು.
ಸಾರ್ವಜನಿಕರಿಗೆ ಯಾತನೆ: ನೀವು ರಸ್ತೆ ಮಾಡಿ ಹೋಗುತ್ತೀರಿ, ರಸ್ತೆಯಲ್ಲಿ ಓಡಾಡಲು ಸಾರ್ವಜನಿಕರು ಯಾತನೆ ಅನುಭವಿಸಬೇಕು. ಮಳೆ ಬಂದ ವೇಳೆ ಯಾವೆಲ್ಲಾ ಸಮಸ್ಯೆಆಯ್ತು. ಮಳೆಯಿಂದಾದ ಅನಾಹುತದಲ್ಲಿ ಅಂಡರ್ ಪಾಸ್‌ಗಳಲ್ಲಿ ನೀರು ನಿಂತು ಸಮಸ್ಯೆ ಉದ್ಭವಿಸಿದೆ. ಕೆಳಹಂತದಲ್ಲಿ, ಹಳ್ಳಿಗಳಲ್ಲಿ ತೆರಳಲು ಸಮಸ್ಯೆಯಾಗಿದೆ. ಇದನ್ನು ಸರಿಪಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಸಬೂಬು ನೀಡಬೇಡಿ ಕೆಲಸ ಮಾಡಿ ಎಂದು ತಿಳಿಸಿದ್ದೇನೆ ಎಂದರು.
ಅವೈಜ್ಞಾನಿಕ ಡಿಸೈನ್: ಇವರು ಕಳಪೆ ಕಾಮಗಾರಿಗಿಂತ ಅವೈಜ್ಞಾನಿಕ ಡಿಸೈನ್‌ನಲ್ಲಿ ಕೆಲಸ ಮಾಡಿದ್ದಾರೆ. ಈ ಡಿಸೈನ್‌ನಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಹೇಳಿದ್ದೇನೆ. ಸಮಸ್ಯೆಯನ್ನು ಆದಷ್ಟುಶೀಘ್ರ ಸರಿಪಡಿಸುವಂತೆ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಎಲ್ಲ ವಿಚಾರಗಳಲ್ಲೂ ಸರ್ಕಾರದಿಂದ ತಾರಾತಮ್ಯ
ಈ ಸರ್ಕಾರ ಬರೀ ಮೊಟ್ಟೆವಿಚಾರದಲ್ಲ, ಎಲ್ಲ ವಿಚಾರಗಳಲ್ಲೂ ತಾರಾತಮ್ಯ ಮಾಡುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು., ಮಕ್ಕಳ ವಿಚಾರದಲ್ಲಿ ತಾರಾತಮ್ಯ ಮಾಡಬಾರದು. ಸರ್ಕಾರ ಒಂದರಿಂದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೂ ಮೊಟ್ಟೆನೀಡಲಿ. ಮೊಟ್ಟೆತಿನ್ನದ ಮಕ್ಕಳಿಗೆ ಬಾಳೆಹಣ್ಣು, ಡ್ರೆತ್ರೖಫ್ರೂಟ್ಸ್, ಸೇರಿದಂತೆ ಸಸ್ಯಾಹಾರದಲ್ಲಿ ಲಭ್ಯವಿರುವ ಪೌಷ್ಠಿಕಾಹಾರ ನೀಡಲಿ ಎಂದು ಸಲಹೆ ನೀಡಿದರು.
ಈ ಸಲ ಅದ್ಧೂರಿಯಾಗಿ ದಸರಾ ಮಹೋತ್ಸವ: ಸರ್ಕಾರದ ನಿರ್ಧಾರ
ನನ್ನ ಅವಧಿಯಲ್ಲಿ ಲಾಟರಿ ನಿಷೇಧ: ಹತ್ತನೇಯ ತರಗತಿಯವರೆಗೆ ಬಿಸಿಯೂಟ ವಿಸ್ತರಣೆ ಮಾಡಿದ್ದೆ. ನಾನು ಸಿಎಂ ಆಗಿದ್ದಾಗ ಯುವಕನೊಬ್ಬ ನನ್ನ ಮನೆ ಬಾಗಿಲ ಬಳಿ ಬಂದು, ಆನ್‌ಲೈನ್ ಲಾಟರಿ ವ್ಯಾಮೋಹದಿಂದ ಹಾಳಾಗಿದ್ದೇನೆ. ನನ್ನ ಜೀವನ ಹಾಳು ಮಾಡಿಕೊಂಡು ಸಾಲಗಾರ ಆಗಿದ್ದೇನೆ. ನೀವು ಹಣ ನೀಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಹೆದರಿಸಿದ. ಅವತ್ತೇ ತೀರ್ಮಾನ ಮಾಡಿ ಲಾಟರಿ ನಿಷೇಷೊಸಿದೆ.ಲಾಟರಿಯಿಂದ ಬರುವ ತೆರಿಗೆ ಹಣ ಬಿಸಿಯೂಟಕ್ಕೆ ನೀಡಿ, ಮಕ್ಕಳ ಬದುಕು ಕಟ್ಟುವುದಲ್ಲ ಎಂದು ಲಾಟರಿ ನಿಷೇಧ ಮಾಡಿದ್ದೇ ಇದು ಕುಮಾರಸ್ವಾಮಿ ಕೊಟ್ಟಂತಹ ಕಾರ್ಯಕ್ರಮ ಎಂದರು.
ಇವರಿಂದ ಕಲಿಯಬೇಕಿಲ್ಲ: ಯಾರೋ ಹೇಳುತ್ತಿದ್ದರಲ್ಲ ಎಲ್ಲಿದ್ದಿಯಪ್ಪ ಕುಮಾರಸ್ವಾಮಿ ಅಂತ. ಏಕವಚನದಲ್ಲಿ ಕರೆಯುವ ಇವರಿಗೆ ಏನು ಗೊತ್ತು ಜನರ ಬದುಕಿನ ವಿಚಾರ. ಬಿಬಿಎಂಪಿಯಲ್ಲಿ ಲೂಟಿ ಹೊಡೆದು, ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವರನ್ನ ಕಟ್ಟಿಕೊಂಡು ನನ್ನ ಸರ್ಕಾರ ತೆಗೆಯಲು ಏನೇನ್ ಆಟ ಆಡಿದರೂ ಎಂಬುದು ಗೊತ್ತಿಲ್ಲವೇ. ನಾನು ಕಾಣದ ವಿಚಾರವೇ. ಇವರಿಂದ ನಾನು ಬದುಕು ಕಲಿಯಬೇಕಿಲ್ಲ ಎಂದು ಅಶ್ವತ್ಥ ನಾರಾಯಣ್ ವಿರುದ್ಧ ವಾಗ್ದಾಳಿ ನಡೆಸಿದರು.