ವಾಲ್ಮೀಕಿ ಆಯ್ತು ಇದೀಗ ದೇವರಾಜ ಅರಸು ನಿಗಮದಲ್ಲಿ ಹಗರಣ?: ರಾತ್ರೋ ರಾತ್ರಿ ಕಡತಕ್ಕೆ ಬೆಂಕಿ ಇಟ್ಟಿದ್ಯಾರು?

By Girish GoudarFirst Published Jul 23, 2024, 11:06 AM IST
Highlights

ದೇವರಾಜ ಅರಸು ನಿಗಮದ್ದು ಎಂದು ಹೇಳಲಾದ ದಾಖಲೆಗಳನ್ನು ಸುಡುತ್ತಿರುವ ವಿಡಿಯೋ ಜತೆಗೆ ದೂರು ಉಮೇಶ್ ನೀಡಿದ್ದಾರೆ. ಸರ್ಕಾರದ ಅನುಮತಿ ಇಲ್ಲದೆ, ಖಾಸಗಿ ಜಾಗದಲ್ಲಿ ರಾತ್ರೋ ರಾತ್ರಿ ಕಡತ ನಾಶ ಮಾಡಲಾಗಿದೆ ಎಂದು ಉಮೇಶ್ ಆರೋಪಿಸಿದ್ದಾರೆ. 
 

ಹಾಸನ(ಜು.23):  ರಾಜ್ಯದಲ್ಲಿ ವಾಲ್ಮೀಕಿ ನಿಗಮದಲ್ಲಿನ ಹಗರಣದ ಬಳಿಕ ಇದೀಗ ಮತ್ತೊಂದು ನಿಗಮದಲ್ಲಿ ಭಾರೀ ಅವವ್ಯಹಾರವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೌದು, ಹಾಸನದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ಭಾರಿ ಅವ್ಯವಹಾರ ನಡೆದಿದೆಯಾ?. ರಾತ್ರೋ ರಾತ್ರಿ ಇಲಾಖೆ ಕಡತ ಸುಟ್ಟ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ಹೌದು, ಗ್ರಾ.ಪಂ ಸದಸ್ಯ, ಜೆಡಿಎಸ್ ಮುಖಂಡ ಉಮೇಶ್ ಹಾಸನ ಜಿಲ್ಲಾಧಿಕಾರಿಗೆ ಈ ಬಗ್ಗೆ ದೂರು ನೀಡಿದ್ದಾರೆ.  

ದೇವರಾಜ ಅರಸು ನಿಗಮದ್ದು ಎಂದು ಹೇಳಲಾದ ದಾಖಲೆಗಳನ್ನು ಸುಡುತ್ತಿರುವ ವಿಡಿಯೋ ಜತೆಗೆ ದೂರು ಉಮೇಶ್ ನೀಡಿದ್ದಾರೆ. ಸರ್ಕಾರದ ಅನುಮತಿ ಇಲ್ಲದೆ, ಖಾಸಗಿ ಜಾಗದಲ್ಲಿ ರಾತ್ರೋ ರಾತ್ರಿ ಕಡತ ನಾಶ ಮಾಡಲಾಗಿದೆ ಎಂದು ಉಮೇಶ್ ಆರೋಪಿಸಿದ್ದಾರೆ. 

Latest Videos

ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಈಗ ಖೈದಿ ನಂ. 7140..!

ದೇವರಾಜ ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕ ನಾಗೇಂದ್ರ ವಿರುದ್ಧ ಆರೋಪಿಸಲಾಗಿದೆ. ಕೆಲ ಮಧ್ಯವರ್ತಿಗಳ ಜೊತೆ ಸೇರಿ ದೇವರಾಜ ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕ ನಾಗೇಂದ್ರ ಅವರು ಸರ್ಕಾರಿ ಯೋಜನೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. 

ರಾಜ್ಯದಲ್ಲಿ ನಿಗಮಗಳ ಗೋಲ್ಮಾಲ್ ಸರಣಿಯಾಗಿ ಹೊರ ಬರುತ್ತಿರುವ ಹಿನ್ನೆಲೆಯಲ್ಲಿ  ರಾತ್ರೋ ರಾತ್ರಿ ಕಡತ ನಾಶ ಮಾಡಲಾಗಿದೆ ಎಂದು ದೂರು ನೀಡಲಾಗಿದೆ. ಜುಲೈ 7 ರಿಂದ 10 ರ ಅವಧಿಯಲ್ಲಿ ಅರಸೀಕೆರೆ ತಾಲ್ಲೂಕಿನಲ್ಲಿ ಹಬ್ಬನಘಟ್ಟ ಗ್ರಾಮದ ಖಾಸಗಿ ಜಾಗದಲ್ಲಿ ಕಡತ ಸುಡಲಾಗಿದೆ ಎಂದು ಆರೋಪಿಸಲಾಗಿದೆ. 

ಪ್ರಕರಣ ಸಂಬಂಧ ತನಿಖೆ ನಡೆಸಲು ಸೋಮವಾರ ಕುರುವಂಕ ಗ್ರಾಪಂ ಸದಸ್ಯ ಬೈರಗೊಂಡನಹಳ್ಳಿಯ ಉಮೇಶ್ ಅವರು ಡಿಸಿಗೆ ದೂರು ನೀಡಿದ್ದಾರೆ.  

click me!