ಯಾದಗಿರಿ: ಫ್ರೀ ಶಸ್ತ್ರಚಿಕಿತ್ಸೆ ಮೂಲಕ ಬಡವರ ಪಾಲಿನ ದೇವರಾಗಿದ್ದ ಮಾಜಿ ಶಾಸಕ ಡಾ.ಮುದ್ದಾಳ್ ಇನ್ನಿಲ್ಲ..!

Published : Jul 23, 2024, 07:47 AM ISTUpdated : Jul 23, 2024, 10:49 AM IST
ಯಾದಗಿರಿ: ಫ್ರೀ ಶಸ್ತ್ರಚಿಕಿತ್ಸೆ ಮೂಲಕ ಬಡವರ ಪಾಲಿನ ದೇವರಾಗಿದ್ದ ಮಾಜಿ ಶಾಸಕ ಡಾ.ಮುದ್ದಾಳ್ ಇನ್ನಿಲ್ಲ..!

ಸಾರಾಂಶ

ಯಾದಗಿರಿ ಮಾಜಿ ಶಾಸಕ, ಉಚಿತ ಚಿಕಿತ್ಸೆಗಳ ಮೂಲಕ 'ಬಡವರ ಪಾಲಿನ ದೇವರು' ಎಂದೇ ಖ್ಯಾತರಾದ ಡಾ.ವೀರಬಸವಂತರೆಡ್ಡಿ ಮುದ್ದಾಳ್‌ ನಿಧನ 

ಯಾದಗಿರಿ(ಜು.23): ಯಾದಗಿರಿ ಮಾಜಿ ಶಾಸಕ, ಉಚಿತ ಚಿಕಿತ್ಸೆಗಳ ಮೂಲಕ 'ಬಡವರ ಪಾಲಿನ ದೇವರು' ಎಂದೇ ಖ್ಯಾತರಾದ ಡಾ.ವೀರಬಸವಂತರೆಡ್ಡಿ ಮುದ್ದಾಳ್‌ (73) ಸೋಮವಾರ ಕೊನೆಯುಸಿರೆಳೆದಿದ್ದಾರೆ. 

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮದೇ ವಿಬಿಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 1952 ಡಿ.31ರಂದು ಮುತ್ನಾಳ್ ಗ್ರಾಮ ದಲ್ಲಿ ಜನಿಸಿದ ವೀರಬಸವಂತ ರೆಡ್ಡಿ ಮಹಾದೇವಪ್ಪ ರಾಂಪೂರೆ ಕಾಲೇಜಲ್ಲಿ ಎಂಬಿಬಿಎಸ್, ಎಂಎಸ್ ಪದವಿ ಪೂರೈಸಿದ್ದರು. 

ರೇಣುಕಾಸ್ವಾಮಿ ಕೊಲೆ ಪ್ರಕರಣ: ಎ4 ಆರೋಪಿ ರಘು ತಾಯಿ ನಿಧನ

ಮುಂಬೈನ ಟಾಟಾ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವೈದ್ಯವೃತ್ತಿ ಆರಂಭಿಸಿದ ಅವರು, ನಂತರ ವಿಜಯಪುರದ ಬಿಎಲ್‌ಡಿಇ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಸುಲಭವಾಗಿ ಮಾಡಿ ಸಾವಿರಾರು ಜೀವ ಉಳಿಸಿದ್ದು, ಬಡರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು