ಚಿತ್ರಮಂದಿರದಲ್ಲಿ ರಾಷ್ಟ್ರಗೀತೆಗೆ ಅಗೌರವ: ನಮ್ಮಿಂದ ತಪ್ಪಾಗಿದೆ ಎಂದು ಮುಸ್ಲಿಂ ದಂಪತಿ ಕ್ಷಮೆ

By Kannadaprabha News  |  First Published Jul 23, 2024, 7:26 AM IST

ತಮ್ಮ ಮಡಿಲಲ್ಲಿ ತಿಂಡಿ ಇದ್ದುದ್ದರಿಂದ ಎದ್ದೇಳಲು ಆಗಿಲ್ಲ. ನಮ್ಮಿಂದ ತಪ್ಪಾಗಿದೆ ಎಂದು ಮುಸ್ಲಿಂ ದಂಪತಿ ಕ್ಷಮೆ ಕೋರಿದ್ದಾರೆ. ಹೀಗಾಗಿ, ಪೊಲೀಸರು ಮುಚ್ಚಳಿಕೆ ಬರಿಸಿಕೊಂಡು ದಂಪತಿಯನ್ನು ಕಳುಹಿಸಿದ್ದಾರೆ.


ಮೈಸೂರು(ಜು.23): ರಾಷ್ಟ್ರಗೀತೆಗೆ ದಂಪತಿ ಅಗೌರವ ತೋರಿರುವ ಘಟನೆ ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಡಿ.ಆರ್.ಸಿ ಚಿತ್ರಮಂದಿರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಅಲ್ಲದೆ, ತಮ್ಮ ತಪ್ಪಿನ ಅರಿವಾಗಿ ಮುಸ್ಲಿಂ ದಂಪತಿ ಕ್ಷಮೆ ಕೇಳಿದ ಪ್ರಸಂಗ ಸಹ ಜರುಗಿದೆ.

ಭಾನುವಾರ ರಾತ್ರಿ ಬ್ಯಾಡ್ ನ್ಯೂಸ್ ಚಿತ್ರ ವೀಕ್ಷಣೆ ಮುಸ್ಲಿಂ ದಂಪತಿ ಡಿ.ಆರ್.ಸಿ. ಚಿತ್ರಮಂದಿರಕ್ಕೆ ಬಂದಿದ್ದು, ಚಿತ್ರ ಆರಂಭವಾಗುವ ಮೊದಲೇ ಚಿಪ್ಸ್, ಪಾಪ್ ಕಾರ್ನ್ ಸೇರಿದಂತೆ ಇನ್ನಿತರ ತಿಂಡಿ ಇರಿಸಿಕೊಂಡು ಕುಳಿತ್ತಿದ್ದಾರೆ. ಈ ವೇಳೆ ಚಿತ್ರ ಆರಂಭಕ್ಕೂ ಮೊದಲು ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವಾಗ ತಿಂಡಿ ಇರಿಸಿಕೊಂಡಿದ್ದರಿಂದ ಇಬ್ಬರೂ ಎದ್ದೇಳಲಿಲ್ಲ.

Latest Videos

undefined

ರಾಷ್ಟ್ರಗೀತೆಗೆ ಮುಸ್ಲಿಂ ದಂಪತಿ ಅಗೌರವ ಪ್ರಕರಣ; ಸ್ಥಳಕ್ಕೆ ಪೊಲೀಸರು ಭೇಟಿ, ಸಿಸಿಟಿವಿ ಪರಿಶೀಲನೆ

ಇದಕ್ಕೆ ಅವರ ಪಕ್ಕದಲ್ಲಿದ್ದ ಹಿಂದೂ ದಂಪತಿ ಆಕ್ಷೇಪ ವ್ಯಕ್ತಪಡಿಸಿ, ಪ್ರಶ್ನಿಸಿದ್ದಾರೆ. ಇದರ ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಿದ ಚಿತ್ರಮಂದಿರದ ಸಿಬ್ಬಂದಿ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಜಯಲಕ್ಷ್ಮೀಪುರಂ ಠಾಣೆಯ ಪೊಲೀಸರು, ಮುಸ್ಲಿಂ ದಂಪತಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ದಾರೆ. ಅಲ್ಲದೆ, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದಾರೆ.

ಈ ವೇಳೆ ತಮ್ಮ ಮಡಿಲಲ್ಲಿ ತಿಂಡಿ ಇದ್ದುದ್ದರಿಂದ ಎದ್ದೇಳಲು ಆಗಿಲ್ಲ. ನಮ್ಮಿಂದ ತಪ್ಪಾಗಿದೆ ಎಂದು ಮುಸ್ಲಿಂ ದಂಪತಿ ಕ್ಷಮೆ ಕೋರಿದ್ದಾರೆ. ಹೀಗಾಗಿ, ಪೊಲೀಸರು ಮುಚ್ಚಳಿಕೆ ಬರಿಸಿಕೊಂಡು ದಂಪತಿಯನ್ನು ಕಳುಹಿಸಿದ್ದಾರೆ.

ಈ ರೀತಿ ಆಗದಂತೆ ನೋಡಿಕೊಳ್ಳಬೇಕಿದೆ: ಪ್ರತಾಪ್ ಸಿಂಹ

ಡಿ.ಆರ್.ಸಿ ಚಿತ್ರಮಂದಿರಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿರುವ ವಿಚಾರ ಸಂಬಂಧ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ, ಯಾರಲ್ಲಿ ಜನ್ಮ ಭೂಮಿ, ಪವಿತ್ರ ಭೂಮಿ ಇದೇ ಎಂಬ ಭಾವನೆ ಇರುವುದಿಲ್ಲವೋ. ಮದರ್ ಲ್ಯಾಂಡ್ ಇದೇನೇ, ಹುಟ್ಟಿದ ಭೂಮಿನೂ ಇದೇನೇ, ಹೋಲಿ ಲ್ಯಾಂಡ್ ಕೂಡ ಇದೇನೇ ಎಂಬ ಭಾವನೆ ಇರುವುದಿಲ್ಲವೋ ಅಂತಹವರಿಂದ ಈ ರೀತಿ ಆಗುತ್ತದೆ. ಹೋಲಿ ಲ್ಯಾಂಡ್ ಅರಬ್ ನಲ್ಲಿ ಇದೆ ಎಂದು ಭಾವಿಸುತ್ತಾರೋ ಅವರಿಂದ ಈ ರೀತಿ ಆಗುತ್ತದೆ. ಚಿತ್ರಮಂದಿರದಲ್ಲಿದ್ದ ಇತರರು ಕಿವಿ ಹಿಂಡುವ ಕೆಲಸ ಮಾಡಬೇಕಿತ್ತು. ಆದರೆ, ಯಾರು ಕೂಡ ಆ ಕೆಲಸ ಮಾಡಿಲ್ಲ. ಇನ್ನು ಮುಂದೆಯಾದರೂ ಈ ರೀತಿ ಆಗದಂತೆ ನೋಡಿಕೊಳ್ಳಬೇಕಿದೆ ಎಂದರು.

click me!