ಬಿಎಂಟಿಸಿಯಲ್ಲಿ ಉಚಿತ ಪ್ರಯಾಣಕ್ಕೆ ಸಖತ್ ರೆಸ್ಪಾನ್ಸ್

By Gowthami KFirst Published Aug 16, 2022, 4:14 PM IST
Highlights

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ರಜತ ಮಹೋತ್ಸವ ಹಿನ್ನೆಲೆಯಲ್ಲಿ ಒದಗಿಸಿದ್ದ ಉಚಿತ ಪ್ರಯಾಣಕ್ಕೆ ಸಾರ್ವಜನಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವರದಿ; ಮಮತಾ ಮರ್ಧಾಳ ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಆ16); ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಬಿಎಂಟಿಸಿ ರಜತ ಮಹೋತ್ಸವ ಹಿನ್ನಲೆ ಬಿಎಂಟಿಸಿ ಪ್ರಯಾಣಿಕರಿಗೆ ನಿಗಮ ಬಂಪರ್ ಗಿಫ್ಟ್ ನೀಡಿತ್ತು. ರಜಾದಿನವಾದ್ರೂ ಕೂಡ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಬಿಎಂಟಿಸಿ ಗೆ 25 ವರ್ಷ ತುಂಬಿದ ಹಿನ್ನೆಲೆ ಬೆಂಗಳೂರಿಗರಿಗೆ ಬಿಎಂಟಿಸಿ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ನಿಗಮ ಅವಕಾಶ ನೀಡಿತ್ತು. ರಜಾ ದಿನವಾದ್ದರಿಂದ ಕಡಿಮೆ ಸಂಖ್ಯೆಯಲ್ಲಿ ಜನ ಓಡಾಡ್ಬಹುದು ಎಂಬ ನಿರೀಕ್ಷೆ ನಿಗಮದ್ದಾಗಿತ್ತು. ಆದ್ರೆ ನಿಗಮದ ನಿರೀಕ್ಷೆಯನ್ನು ಪ್ರಯಾಣಿಕರು ಸುಳ್ಳು ಮಾಡಿದ್ದು ಕೋಟ್ಯಾಂತರ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದಾರೆ. ಇಡೀ ದಿನ ಒಂದು ರೂಪಾಯಿ ಬಸ್ ಚಾರ್ಜ್ ನೀಡದೆ ಪ್ರಯಾಣ ಮಾಡಿ ಖುಷಿಯಾಗಿದ್ದಾರೆ. ಯಶಸ್ವಿಯಾಗಿ 25 ವರ್ಷ ಪೂರೈಸಿದ ಬಿಎಂಟಿಸಿ ಸಂಭ್ರಮದಿಂದ  ರಜತ ಮಹೋತ್ಸವ ಆಚರಿಸಿಕೊಂಡಿದೆ. ಹೀಗಾಗಿ ಸಿಲಿಕಾನ್ ಸಿಟಿ ಮಂದಿಗೆ ನಿನ್ನೆ ಆಗಸ್ಟ್ 15 ರಂದು ಒಂದು ದಿನ ಪೂರ್ತಿ ಬಿಎಂಟಿಸಿಯಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದ್ರು ಉಚಿತ ಸಂಚಾರ ಮಾಲಡ್ಬಹುದಿತ್ತು. ಈ ಅವಕಾಶವನ್ನು ಜನ ತುಂಬಾ ಚೆನಾಗಿ ಬಳಕೆ ಮಾಡಿಕೊಂಡಿದ್ದಾರೆ. ಇಡೀ ದಿನ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಕರು ತುಂಬಿ ಹೋಗಿದ್ರು. ರಜಾದಿನವಾದ್ದರಿಂದ ಪ್ರಯಾಣಿಕರು ಕೊಂಚ ಕಡಿಮೆ ಇರಬಹುದು ಅನ್ನೋ ಭಾವನೆ ಎಲ್ಲರಲ್ಲು ಇತ್ತು. 

ಆದ್ರೆ ಇದು ಉಲ್ಟಾ ಆಗಿತ್ತು. ಒಂದೇ ದಿನಕ್ಕೆ ಬರೋಬ್ಬರಿ 35ಲಕ್ಷಕ್ಕೂ ಹೆಚ್ಚು ಜನ ಸಂಚಾರ ಮಾಡಿದ್ರು.  ಸಾಮಾನ್ಯವಾಗಿ ಬೇರೆ ದಿನಗಳಲ್ಲಿ 27ಲಕ್ಷ  ಜನ ಸಂಚರಿಸುತ್ತಿದ್ರು. ಮೂರುವರೆ ಕೋಟಿ ಆದಾಯ ಬರ್ತಿತ್ತು. ಆದ್ರೆ ನಿನ್ನೆ ಯಾವ ಬಿಎಂಟಿಸಿ ಬಸ್ ನೋಡಿದ್ರೂ ಕೂರಕ್ಕೂ ಜಾಗವಿಲ್ಲದಷ್ಟು ಜನಜಂಗುಳಿ ಉಂಟಾಗಿತ್ತು.

3 ವರ್ಷಕ್ಕೊಮ್ಮೆ ಬಸ್‌ ಟಿಕೆಟ್‌ ದರ ಪರಿಷ್ಕರಣೆ: ಸರ್ಕಾರಕ್ಕೆ ಸಮಿತಿ ಸಲಹೆ

ಕಬ್ಬನ್ ಪಾರ್ಕ್ ಲಾಲ್ಬಾಗ್ ಕಡೆಗಳಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಜನ ಪ್ರಯಾಣ ಬೆಳೆಸಿದ್ರು. ಲಾಲ್ಬಾಗ್ ಫಲಪುಷ್ಪಪ್ರದರ್ಶನ ಹಿನ್ನಲೆ ಬೆಂಗಳೂರಿಗರು ಸಸ್ಯಕಾಶಿಯತ್ತ ಪ್ರಯಾಣ ಬೆಳೆಸಿದ್ರು. ಎಸಿ ನಾನ್ ಎಸಿ ಯಾವುದೇ ಬಸ್ ಆದ್ರೂ ಕೂಡ ಫುಲ್ ರಶ್ ಆಗಿತ್ತು. ಜನ ಕೂಡ ಉಚುತ ಪ್ರಯಾಣ ಮಾಡುವ ಮೂಲಕ ಎಂಜಾಯ್ ಮಾಡಿದ್ರು.

Bengaluru ತಳ್ಳೋಗಾಡಿಯಾದ ಬಿಎಂಟಿಸಿ ಬಸ್, ಟ್ರಾಫಿಕ್ ಜಾಮ್ ..!

ಜತೆಗೆ, ನಗರದ ಪ್ರಮುಖ ನಿಲ್ದಾಣಗಳಾದ ಕೆಂಪೇಗೌಡ ಬಸ್‌ ನಿಲ್ದಾಣ, ಯಶವಂತಪುರ, ಮೈಸೂರು ರಸ್ತೆ ಸ್ಯಾಟಲೈಟ್‌ ಬಸ್‌ ನಿಲ್ದಾಣ, ವಿಜಯನಗರ, ಜಯನಗರ, ಯಲಹಂಕ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಜನ ಜಾತ್ರೆ ನಿರ್ಮಾಣವಾಗಿತ್ತು. ಅಲ್ಲದೆ, ಪ್ರತಿಯೊಂದು ಬಸ್‌ನಲ್ಲಿ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳಿಗೆ ಭಾಗವಹಿಸಲು ಉಚಿತವಾಗಿ ಪ್ರಯಾಣಿಸಿ ಖುಷಿ ಪಟ್ಟರು.

click me!