ಕೋಟೆನಾಡು ಚಿತ್ರದುರ್ಗದಲ್ಲಿ ಕಳ್ಳರ ಹಾವಳಿಯಿಂದ ಅಡಿಕೆ ಬೆಳೆಗಾರರು ನಿದ್ದೆಗೆಡುವಂತಾಗಿದೆ. ಅಡಿಕೆ ಬೆಳೆಯನ್ನೇ ಟಾರ್ಗೆಟ್ ಮಾಡಿರುವ ಕಳ್ಳರು ಕಟಾವಿಗೆ ಬಂದ ಅಡಿಕೆ ಬೆಳೆಯನ್ನ ದೋಚಿ ಎಸ್ಕೇಪ್ ಆಗಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಸಾಂಪ್ರದಾಯಿಕ ಧಾನ್ಯ ಹಾಗೂ ತರಕಾರಿಗಳನ್ನು ಬೆಳೆದ ಕೋಟೆನಾಡಿನ ರೈತರು ಬೆಲೆ ಸಿಗಲಾರದೇ ಕಂಗಾಲಾಗಿ ಸಾಲ ಸೂಲ ಮಾಡಿ ಲಕ್ಷ-ಲಕ್ಷ ಬಂಡವಾಳ ಹಾಕಿ ಅಡಿಕೆ ಗಿಡ ಬೆಳೆದಿದ್ದರು. ಅಡಿಕೆ ಮಾರಾಟವಾದ್ರೆ ಅಪಾರ ಲಾಭ ಬರುವ ನಿರೀಕ್ಷೆಯಲ್ಲಿದ್ದರು. ಆದರೆ ಫಲಕ್ಕೆ ಬಂದ ಅಡಿಕೆಯನ್ನೇ ಟಾರ್ಗೆಟ್ ಮಾಡಿರುವ ಕಳ್ಳರು ಕಟಾವಿಗೆ ಬಂದ ಅಡಿಕೆ ಬೆಳೆಯನ್ನ ದೋಚಿ ಎಸ್ಕೇಪ್ ಆಗಿದ್ದಾರೆ. ಈ ಕುರಿತು ಒಂದು ವರದಿ .
ಕೋಟೆನಾಡು ಚಿತ್ರದುರ್ಗ ತಾಲೂಕಿನ ಬ್ಯಾಲಹಾಳ್ ಗ್ರಾಮದಲ್ಲಿ ಈ ದುಷ್ಕೃತ್ಯ ಕಂಡು ಬಂದಿದೆ. ಪರಿಣಾಮ ಅಡಿಕೆ ಗೊಂಚಲು ಇಲ್ಲದೇ ಮರಗಳು ಖಾಲಿ ಖಾಲಿಯಾಗಿವೆ. ಈ ಗ್ರಾಮದ ರೈತ ಮಹಿಳೆ ಲತಾ ಎನ್ನುವವರಿಗೆ ಸೇರಿದ ,1000 ಅಡಿಕೆ ಮರಗಳು ಫಸಲಿಗೆ ಬಂದಿದ್ದವು. ಅಡಿಕೆ ಕೊಯ್ದು ಬರುವ ಅಪಾರ ಲಾಭದಿಂದ ಸಾಲ ತೀರಿಸುವ ನಿರೀಕ್ಷೆಯಲ್ಲಿದ್ರು. ಆದ್ರೆ ದಿನ ಬೆಳಗಾಗುವುದರೊಳಗೆ ಅವರ ನಿರೀಕ್ಷೆ ಹುಸಿಯಾಗಿದೆ. ಫಸಲಿಗೆ ಬಂದ ಅಡಿಕೆಗೆ ಸ್ಕೆಚ್ ಹಾಕಿರೋ ಕಳ್ಳರು ರಾತ್ರೋರಾತ್ರಿ 3ಲಕ್ಷ ರೂಪಾಯಿ ಮೌಲ್ಯದ ಅಡಿಕೆಯನ್ನು ದೋಚಿ ಪರಾರಿಯಾಗಿದ್ದಾರೆ. ಹೀಗಾಗಿ ಬೆವರು ಸುರಿಸಿ ಬೆಳೆದಿದ್ದ ಅಡಿಕೆ ಬೆಳೆಯನ್ನು ಕಳೆದುಕೊಂಡ ರೈತರು ಕಂಗಾಲಾಗಿ ಕಣ್ಣೀರಿಡ್ತಿದ್ದಾರೆ.
Crime News: ಜಮೀನಿಗೆ ನುಗ್ಗಿ 200 ಅಡಿಕೆ ಸಸಿ ಕತ್ತರಿಸಿ ಹಾಕಿದ ದುಷ್ಕರ್ಮಿಗಳು; ರೈತ ಮಹಿಳೆ ಕಂಗಾಲು
ಇನ್ನು ಈ ಭಾಗದ ಯಾವ ರೈತರ ತೋಟದಲ್ಲಿ ಅಡಿಕೆ ಫಸಲು ಕಟಾವಿಗೆ ಬರುತ್ತೋ ಅಂತಹ ತೋಟಗಳನ್ನೇ ಟಾರ್ಗೆಟ್ ಮಾಡುವ ಖದೀಮರು, ರಾತ್ರಿ ವೇಳೆ ವಾಹನಗಳಲ್ಲಿ ಬಂದು ಲಕ್ಷ ಲಕ್ಷ ಮೌಲ್ಯದ ಅಡಿಕೆಯನ್ನೇ ದೋಚಿ ಹೋಗ್ತಿದ್ದಾರೆ. ಅಲ್ಲದೇ ಈ ಭಾಗದ ಹಲವು ಹಳ್ಳಿಗಳಲ್ಲೂ ಕಳೆದ ಒಂದು ತಿಂಗಳಿಂದ ನಿರಂತರವಾಗಿ ತೋಟಕ್ಕೆ ಕನ್ನ ಹಾಕ್ತಿರೋ ಕಳ್ಳರು, ಅಕ್ಕಪಕ್ಕದ ಹತ್ತಾರು ಗ್ರಾಮಗಳಲ್ಲಿ ಅಡಿಕೆ ತೋಟಗಳಿಗೆ ಕನ್ನ ಹಾಕಿ ಅಡಿಕೆ ಕದ್ದು ಎಸ್ಕೇಪ್ ಆಗಿದ್ದಾರೆ. ಹೀಗಾಗಿ ಕೂಡಲೇ ಅಡಿಕೆ ಕಳ್ಳರನ್ನು ಬಂಧಿಸುವಂತೆ ರೈತರು ಆಗ್ರಹಿಸಿದ್ದಾರೆ.
Chitradurga; ಜಿಟಿ ಜಿಟಿ ಮಳೆಗೆ ಅಡಿಕೆ, ಈರುಳ್ಳಿ ಬೆಳೆ ಸಂಪೂರ್ಣ ನಾಶ
ಒಟ್ಟಾರೆ ಕೋಟೆನಾಡು ಚಿತ್ರದುರ್ಗದಲ್ಲಿ ದಿನಕ್ಕೊಂದು ಹಳ್ಳಿಯಲ್ಲಿ ದಿನಕ್ಕೊಂದು ಕಡೆ ಅಡಿಕೆ ಕಳ್ಳತನ ಎನ್ನುವಂತಾಗಿದೆ. ಹಗಲಿರುಳು ಬೆವರು ಸುರಿಸಿ ಕಷ್ಟ ಪಡುವ ರೈತನ ಪಾಲಿಗೆ ಮುಳ್ಳಾಗಿರುವ ಅಡಿಕೆ ಕಳ್ಳರ ಕೃತ್ಯಕ್ಕೆ ಪೊಲೀಸರು ಕಡಿವಾಣ ಹಾಕಬೇಕಿದೆ. ಆ ಮೂಲಕ ಕೋಟೆನಾಡಿನ ರೈತರಲ್ಲಿ ಮೂಡಿರುವ ಆತಂಕವನ್ನು ಹೋಗಲಾಡಿಸಬೇಕಿದೆ.