ರಾಷ್ಟ್ರಧ್ವಜ ಎಲ್ಲರಿಗೆ ಸೇರಿದ್ದು​​​​​​: ಗೃಹ ಸಚಿವ ಆರಗ ಜ್ಞಾನೇಂದ್ರ

By Kannadaprabha News  |  First Published Aug 16, 2022, 1:53 PM IST

ಆರ್‌ಎಸ್‌ಎಸ್‌ಗೆ ರಾಷ್ಟ್ರಧ್ವಜ, ರಾಷ್ಟ್ರಾಭಿಮಾನದ ಬಗ್ಗೆ ಯಾರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ. ವ್ಯಕ್ತಿ ನಿರ್ಮಾಣ ಕೆಲಸವನ್ನು ಆರ್‌ಎಸ್‌ಎಸ್‌ ಹಗಲು ರಾತ್ರಿ ಮಾಡುತ್ತಿದೆ ಎಂದ ಜ್ಞಾನೇಂದ್ರ


ತುಮಕೂರು(ಆ.16):  ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಶಾಂತಿಯುತವಾಗಿ ಧ್ವಜಾರೋಹಣ ನಡೆದಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಅವರು ತುಮಕೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಲ್ಲಿನ ಜನ ಬಹಳ ಒಳ್ಳೆಯವರಿದ್ದಾರೆ. ಯಾವುದೇ ರಗಳೆಯೂ ಇಲ್ಲದೇ ಅದು ರೆವಿನ್ಯೂ ಜಾಗ ಅಂತಾ ಗೊತ್ತಾಗಿದೆ. ಶಾಸಕ ಜಮೀರ್‌ ಅಹಮದ್‌ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಣ್ಣ ಪುಟ್ಟ ಸಂಗತಿಗಳು ನಡೆಯಬಾರದು ಅಂತಾ ಭದ್ರತೆ ಕೊಡಲಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ಇದೊಂದು ರಾಷ್ಟ್ರೀಯ ಉತ್ಸವ. ಪ್ರತಿಯೊಬ್ಬ ಭಾರತೀಯ ಕೂಡ ಇದರಲ್ಲಿ ಭಾಗವಹಿಸಬೇಕು. ಎಲ್ಲರ ಮನಸ್ಸಿನಲ್ಲೂ ದೇಶಭಕ್ತಿ ಮೂಡಿಸ ಬೇಕು ಎಂಬುದು ಸರ್ಕಾರದ ಆಸೆ. ಸಣ್ಣ ಪುಟ್ಟರಗಳೆ ನಡೆದರೆ ಅದಕ್ಕೆ ಹೆಚ್ಚಿನ ಪ್ರಾಧ್ಯಾನತೆ ಹೋಗಿಬಿಡುತ್ತೆ. ಅದಕ್ಕೆ ಬಂದೋಬಸ್ತ್‌ ಮಾಡಿದ್ದೆವು ಎಂದರು.

ಕಾಂಗ್ರೆಸ್‌ ಧ್ವಜ ಕಾಂಗ್ರೆಸ್‌ಗೆ ಸೇರಿದ್ದು. ರಾಷ್ಟ್ರಧ್ವಜ ದೇಶದ ಪ್ರತಿಯೊಬ್ಬ ನಾಗರೀಕನಿಗೆ ಸೇರಿದ್ದು, ಹಾಗಾಗಿ ಹೀಗಾಗಿ ಕಾಂಗ್ರೆಸ್‌ನವರು ವಾದ ಮಾಡುವ ಅವಶ್ಯಕತೆ ಇಲ್ಲ. ಸ್ವಾತಂತ್ರ್ಯ ಹೋರಾಟದ ಕ್ರೆಡಿಟ್‌ ಕಾಂಗ್ರೆಸ್‌ಗೆ ಹೋಗಬೇಕು. ಎಲ್ಲದೂ ಅವರಿಗೆ ಹೋಗಬೇಕು. ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಸ್ವತಂತ್ರ ಬಂದ ಬಳಿಕ ನಾಲ್ಕು ತಲೆಮಾರುಗಳಿಗೆ ತಿನ್ನುವಷ್ಟು ಗಳಿಸಿದ್ದೇವೆ ಎಂದು ಹೇಳಿದ್ದರು. ಆ ಕ್ರೆಡಿಟ್‌ ಕೂಡ ಕೂಡ ಅವರಿಗೆ ಹೋಗಬೇಕು ಎಂದರು.

Tap to resize

Latest Videos

ತುಮಕೂರು: ಮಧುಗಿರಿ ಬಿಜೆಪಿ ಘಟಕದಿಂದ ರಾಷ್ಟ್ರಧ್ವಜಕ್ಕೆ ಅಪಮಾನ

ಆರ್‌ಎಸ್‌ಎಸ್‌ ಕಚೇರಿ ಮೇಲೆ ಎಲ್ಲ ಸಮಯ ಧ್ವಜ ಹಾರಿದೆ: 

ಆರ್‌ಎಸ್‌ಎಸ್‌ ಕಚೇರಿಗಳ ಮೇಲೆ ರಾಷ್ಟ್ರಧ್ವಜ ಹಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಗೃಹಸಚಿವರು, ಆರ್‌ಎಸ್‌ಎಸ್‌ಗೆ ರಾಷ್ಟ್ರಧ್ವಜ, ರಾಷ್ಟ್ರಾಭಿಮಾನದ ಬಗ್ಗೆ ಯಾರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ. ವ್ಯಕ್ತಿ ನಿರ್ಮಾಣ ಕೆಲಸವನ್ನು ಆರ್‌ಎಸ್‌ಎಸ್‌ ಹಗಲು ರಾತ್ರಿ ಮಾಡುತ್ತಿದೆ ಎಂದರು.

ನಾವೆಲ್ಲ ಆರ್‌ಎಸ್‌ಎಸ್‌ ಗರಡಿಯಿಂದ ಬಂದವರು. ವ್ಯಕ್ತಿ ಅಥವಾ ರಾಷ್ಟ್ರದ ವಿಷಯಾ ಬಂದಾಗ ದೇಶ ಮೊದಲು ಅನ್ನೋ ಸಂಸ್ಕಾರ ಕೊಟ್ಟಸಂಸ್ಥೆ. ಆರ್‌ಆರ್‌ಎಸ್‌ ಕಚೇರಿ ಮೇಲೆ ಎಲ್ಲಾ ಸಮಯದಲ್ಲೂ ರಾಷ್ಟ್ರಧ್ವಜ ಹಾರಿದೆ. ಆರ್‌ಎಸ್‌ಎಸ್‌ಗೆ ತ್ರಿವರ್ಣಧ್ವಜದ ಮೇಲೆ ಗೌರವವಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಮಾಧುಸ್ವಾಮಿ ತಿಳುವಳಿಕೆಯಿರುವವರು:

ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೋ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಗೃಹಸಚಿವರು, ಅವರು ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಮಾಧುಸ್ವಾಮಿ ತಿಳುವಳಿಕೆ ಇರುವವರು ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಒಳ್ಳೆಯ ಕೆಲಸ ನಡೆಯುತ್ತಿವೆ ಎಂದರು.

ಸಿಎಂ ಬದಲಾವಣೆ: ಈ ಹಿಂದೆ ಮುಖ್ಯಮಂತ್ರಿ ಬದಲಿಸಿದ ಉದಾಹರಣೆ ಕೊಟ್ಟ ಬಿಜೆಪಿ ನಾಯಕ

ದೇಶಭಕ್ತಿ ಇರುವ ಸಚಿವ ನಾಗೇಶ್‌: ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ರಾಷ್ಟ್ರಧ್ವಜದ ವಿಷಯದಲ್ಲಿ ತಪ್ಪೆಸಗಿಲ್ಲ. ದೂರು ಕೊಟ್ಟಿರುವ ಹಾಗೆ ಏನೂ ನಡೆದಿಲ್ಲ ಎಂಬ ಮಾಹಿತಿ ಸಿಕ್ಕಿದೆ. ರಾಷ್ಟ್ರ ವಿರೋಧಿ ಕೃತ್ಯ ಆದರೆ ಕ್ರಮ ಕೈಗೊಳ್ಳಬಹುದು. ಆ ರೀತಿ ಯಾವುದು ಆಗಿಲ್ಲ. ಶಿಕ್ಷಣ ಸಚಿವರ ವಿರುದ್ದ ಕ್ರಮ ಕೈಗೊಳ್ಳಲು ಹಿಂದೇಟು ಹಾಕಲ್ಲ. ರಾಷ್ಟ್ರ ವಿರೋಧಿ ಕೃತ್ಯ ಆದರೆ ಕ್ರಮ ಕೈಗೊಳ್ಳಬಹುದು. ಒಂದು ಧ್ವಜದ ಹಿಂದೆ ಇನ್ನೊಂದು ದೊಡ್ಡ ಧ್ವಜ ಇದ್ದರೆ ಅದರಿಂದ ರಾಷ್ಟ್ರಕ್ಕೇನು ತೊಂದರೆಯಾಗಲ್ಲ.ಒಂದೇ ದಾರದಲ್ಲಿ ಮೇಲೆ ಕೆಳಗೆ ಹಾರಿಸಬಾರದು ಎಂಬ ನಿಯಮವಿದೆ.

ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿಲ್ಲ ಎಂದು ಸಚಿವರೇ ಹೇಳಿದ್ದಾರೆ. ರಾಷ್ಟ್ರಧ್ವಜಕ್ಕೆ ಅಪಮಾನ ನಡೆದಿರುವಂತಹದು ಏನು ಆಗಿಲ್ಲ. ಸಚಿವ ಬಿ.ಸಿ ನಾಗೇಶ್‌ ದೇಶ ಭಕ್ತಿ ಇರುವ ವ್ಯಕ್ತಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 

click me!