ಆತ್ಮ ನಿರ್ಭರ್ ಭಾರತದ ಮೊದಲ ಸ್ವದೇಶಿ ಪಿಸ್ತೂಲ್ ನ್ನು ಹುಬ್ಬಳ್ಳಿ ಅಂಕುಶ ಕೊರವಿ ಅಭಿವೃದ್ಧಿ ಪಡಿಸಿದ್ದು, ಆ ಮೂಲಕ ಭಾರತೀಯ ಸೇನೆಗೆ, ರಾಷ್ಟ್ರದ ಸಶಸ್ತ್ರ ಪಡೆಗಳು ಹಾಗೂ ಪೊಲೀಸ್ ಇಲಾಖೆಗೆ ತನ್ನದೇ ಕೊಡುಗೆ ನೀಡಲು ಮುಂದಾಗಿದ್ದಾನೆ. ಈ ಅಟಲ್ ಪಿಸ್ತೂಲ್ ಪರಿಸ್ಥಿತಿಗೆ ಅನುಸಾರವಾಗಿ ಫೈರ್ ಕಂಟ್ರೋಲ್ ಹೊಂದಿದೆ.
ಹುಬ್ಬಳ್ಳಿ (ಸೆ.27): ಸಾಧಕನಿಗೆ, ಸಾಧಿಸಬೇಕು ಎಂಬ ಛಲ, ಪರಿಶ್ರಮ ಒಂದಿದ್ದರೆ ಸಾಕು ಎಂತಹ ಸಾಧನೆ ಬೇಕಾದ್ರು ಮಾಡಬಹುದು. ಅದಕ್ಕೆ ಹುಬ್ಬಳ್ಳಿಯ ಈ ಯುವಕನೇ ಸಾಕ್ಷಿ, ಇಂಜಿನಿಯರಿಂಗ್ ಪದವಿ ಪಡೆದಿರುವ ಈ ಯುವಕನ ಯಾರು ಮಾಡದ ಸಾಧನೆ ಈತ ಮಾಡಿದ್ದಾನೆ. ಈ ಯುವಕನ ಹೆಸರು ಅಂಕುಶ ಕೊರವಿ, ತಾನೇ ಹುಟ್ಟುಹಾಕಿದ ಅಸ್ತ್ರ ಡಿಫೆನ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಸ್ವದೇಶಿ ಪಿಸ್ತೂಲ್ ಅಭಿವೃದ್ಧಿ ಪಡಿಸುತ್ತಿದ್ದಾರೆ. ಆತ್ಮ ನಿರ್ಭರ್ ಭಾರತದ ಮೊದಲ ಸ್ವದೇಶಿ ಪಿಸ್ತೂಲ್ ನ್ನು ಅಂಕುಶ ಅಭಿವೃದ್ಧಿ ಪಡಿಸಿದ್ದು, ಆ ಮೂಲಕ ಭಾರತೀಯ ಸೇನೆಗೆ, ರಾಷ್ಟ್ರದ ಸಶಸ್ತ್ರ ಪಡೆಗಳು ಹಾಗೂ ಪೊಲೀಸ್ ಇಲಾಖೆಗೆ ತನ್ನದೇ ಕೊಡುಗೆ ನೀಡಲು ಮುಂದಾಗಿದ್ದಾನೆ. ದೇಶದಲ್ಲಿ ಈಗಾಗಲೇ ಭಾರತೀಯ ಸೇನೆ ಸೇರಿದಂತೆ ನಮ್ಮಪೊಲೀಸ್ರು ಬಳಸುವ ಪಿಸ್ತೂಲ್ ಗಿಂತು ಇದು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಅಟಲ್ ಪಿಸ್ತೂಲ್ ಪರಿಸ್ಥಿತಿಗೆ ಅನುಸಾರವಾಗಿ ಫೈರ್ ಕಂಟ್ರೋಲ್ ಹೊಂದಿದೆ. ಅಲ್ಲದೇ ಸಾಕಷ್ಟು ಅಧುನಿಕ ತಂತ್ರಜ್ಞಾನದ ಬಳಕೆಯಿಂದ ಹೊಸದಾಗು ಆವಿಷ್ಕಾರಿಸಲಾಗಿದ್ದು,ಈಗಾಗಲೇ ಡೈರೆಕ್ಟರ್ ಜನರಲ್ ಆಫ್ ಕ್ವಾಲಿಟಿ ಅಸುರೇನ್ಸ್ ನಲ್ಲಿ ಫೈರಿಂಗ್ ಮುಗಿದ್ದಿದ್ದು, ಇಲೀಗ ಸರ್ಟಿಫಿಕೇಟ್ ಫೈರಿಂಗ್ ಮಾತ್ರ ಬಾಕಿ ಇದೆ. ಅದೊಂದು ಮುಗಿದ್ರೆ ಸ್ವದೇಶೀ ಪಿಸ್ತೂಲ್ ದೇಶಿಯ ಸೇನೆ ಸೇರಲಿದೆ. ಅದಕ್ಕಾಗಿ ತಾವು ತಾಯರಿಸಿದ ಅಟಲ್ ಪಿಸ್ತೂಲ್ ಗೆ ಪೇಟೆಂಟ್ ಪಡೆಯ ಪ್ರಕ್ರಿಯೆ ಆರಂಭಿಸಿದ್ದಾರೆ ಅಂಕುಶ್!
ವಿದ್ಯಾರ್ಥಿಗಳ ಕಿತ್ತಾಟ, ಬುದ್ಧಿ ಹೇಳಿದ ಟೀಚರ್ ಮೇಲೆ 3 ಸುತ್ತು ಗುಂಡು ಹಾರಿಸಿದ 10ನೇ ತರಗತಿ ವಿದ್ಯಾರ್ಥಿ!
ನಿರಂತರವಾದ ಸಂಶೋಧನೆ, ಟ್ರೈಲ್ ಆಂಡ್ ಎರರ್ ಪದ್ದತಿ ಮೂಲಕ ವಿನೂತನ ತಂತ್ರಜ್ಞಾನ ಹೊಂದಿರುವ ಸ್ವದೇಶಿ ಪಿಸ್ತೂಲ್ ಸಿದ್ದವಾಗಿದ್ದು, ಈಗಾಗಲೇ ರಕ್ಷಣಾ ಇಲಾಖೆ ಇದನ್ನು ಟೇಸ್ಟ್ ಗೂ ಒಳಪಡಿಸಿದೆ. ವಿಶ್ವದಲ್ಲೇ ಈಗಾಗಲೇ ಬಳಕೆಯಲ್ಲಿರುವ ಪಿಸ್ತೂಲ್ ತಂತ್ರಜ್ಞಾನವನ್ನು ಆಧಾರವಾಗಿಟ್ಟುಕೊಂಡು, ಅದಕ್ಕಿಂತಲೂ ಸರಳ ಹಾಗೂ ವಿಭಿನ್ನ ತಂತ್ರಜ್ಞಾನ ಅಳವಡಿಸಿ ಈ ಪಿಸ್ತೂಲ್ ಸಿದ್ದಪಡಿಸಲಾಗಿದೆ. ಕೇವಲ ಪಿಸ್ತೂಲ್ ಮಾತ್ರವಲ್ಲ. ಇನ್ನು ಅನೇಕ ಶಸ್ತ್ರಾಸ್ತ್ರಗಳು ಅಭಿವೃದ್ಧಿ ಪಡಿಸಿ ಭಾರತೀಯ ಸೇನೆ ಒದಗಿಸುವ ಕನಸು ಕಟ್ಟಿಕೊಂಡಿರುವ ಅಂಕುಶ್ ಆ ನಿಟ್ಟಿನಲ್ಲಿ ಸಂಶೋಧನೆ ಮುಂದುವರೆಸಿದ್ದಾರೆ.
Vijayapura: ಕಂಟ್ರೀ ಪಿಸ್ತೂಲ್ ಮಾಫಿಯಾ ಬೇಧಿಸಿದ ಪೊಲೀಸರು: ನಾಲ್ವರ ಬಂಧನ
ಒಟ್ಟಾರೆ ಹುಬ್ಬಳ್ಳಿಯ ಯುವ ಇಂಜಿನಿಯರ್ ಸಾಧನ ಸಮಾನ್ಯವಾದುದಲ್ಲ, ಎಲ್ಲರಿಗಿಂತಲೂ ವಿಭಿನ್ನ ಸಂಶೋಧನೆ ಮೂಲಕ ಎಲ್ಲರ ಗಮನ ಸೇಳೆದಿರುವ ಅಂಕುಶ್, ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗಲೇ ಇಂತಹದೊಂದು ಕಾರ್ಯಕ್ಕೆ ಮುಂದಾಗಿದ್ರು ಅನ್ನೊದು ಮತ್ತೊಂದು ವಿಶೇಷ,. ಇದೀಗ ಅವರ ಕನಸು ನನಸಾಗಿದ್ದು, ಭಾರತೀಯ ಸೇನೆ ಇವರ ಅಸ್ತ್ರಕ್ಕೆ ಅಧಿಕೃತ ಮುದ್ರೆ ಒತ್ತವುದಷ್ಟೇ ಬಾಕಿ ಇದೆ..