ಸ್ಪಾರ್ಕರ್ ಕ್ಯಾಂಡಲ್ ಫ್ಯಾಕ್ಟರಿ ಅಗ್ನಿದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಸರಕಾರದಿಂದ ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಗಾಯಗೊಂಡಿದ್ದ 8 ಜನರ ಪೈಕಿ ಮೂವರು ಸಾವಿನಪ್ಪಿದ್ದು, ಇನ್ನುಳಿದ ಐವರಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಹುಬ್ಬಳ್ಳಿ (ಜು.24): ಹುಬ್ಬಳ್ಳಿಯ ಹೊರವಲಯದ ತಾರಿಹಾಳ ಕೈಗಾರಿಕ ಪ್ರದೇಶದಲ್ಲಿ ನಡೆದ ಭಾರಿ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರಕಾರದಿಂದ ತಲಾ ಐದು ಲಕ್ಷ ಪರಿಹಾರ ಘೋಷಿಸಲಾಗಿದೆ. ಇನ್ನು ಮೃತರ ಸಂಖ್ಯೆ 3 ಕ್ಕೆ ಏರಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅನಧಿಕೃತ ಫ್ಯಾಕ್ಟರಿ ಮಾಲೀಕನ ಮೇಲೆ ಕಠಿಣ ಕ್ರಮದ ಜರುಗಿಸಿ ಎಂಬ ಅಗ್ರಹ ಬಲವಾಗಿ ಕೇಳಿ ಬಂದಿದೆ. ಬರ್ತಡೇ ಸೇರಿದಂತೆ ಸಭೆ ಸಮಾರಂಭಗಳಲ್ಲಿ ಕೇಕ್ ಮೇಲೆ ಬೆಳಗಿಸುವ ಸ್ಪಾರ್ಕರ್ ಕ್ಯಾಂಡಲ್ ಉತ್ಪಾದನಾ ಘಟಕದಲ್ಲಿ ಸ್ಪೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 8 ಜನರ ಪೈಕಿ ಮೂವರು ಸಾವಿನಪ್ಪಿದ್ದು, ಇನ್ನೂಳಿದ ಐವರಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರಿದಿದೆ. ಗದಗ ಮೂಲದ ವಿಜಯಲಕ್ಷ್ಮಿ ನಿನ್ನೆ ತಡರಾತ್ರಿ ಸಾವಿನಪ್ಪಿದ್ರೆ, ಕಲಘಟಗಿ ಮೂಲದ ಮಾಳೇಶ್ ಹಾಗೂ ತಾರಿಹಾಳದ ಗೌರಮ್ಮ ಇಂದು ಬೆಳಗ್ಗೆ ಮೃತಪಟ್ಟಿದ್ದು, ಮೃತ ಕುಟುಂಬಸ್ಥರ ಆಕ್ರನಂದನ ಮುಗಿಲು ಮುಟ್ಟಿದೆ. ಇನ್ನೂ ದುರಂತ ನಡೆದ ಫ್ಯಾಕ್ಟರಿ ಜಾಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಭೇಟಿ ನೀಡಿ ಪೊಲೀಸರಿಂದ ಘಟನೆ ಬಗ್ಗೆ ಮಾಹಿತಿ ಪಡೆದರು.
ಬಳಿಕ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ. ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಸಮಾಧಾಪಡಿಸಿದ ಸಚಿವರು, ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗರ ತಲಾ ಐದು ಲಕ್ಷ ರೂಪಾಯಿ ಪರಿಹಾರ ಜೊತೆಗೆ ಮೃತರ ಮಕ್ಕಳ ಆರೈಕೆ ಹಿನ್ನಲೆ ಬಾಲವಿಕಾಸ ಯೋಜನೆಯಡಿ ಮೂರು ವರ್ಷ ಅನುದಾನ ಒದಗಿಸುವ ಭರವಸೆ ನೀಡಿದರು. ನಡೆಯಬಾರದ ದುರಂತ ನಡೆದು ಹೋಗಿದೆ. ಕಾರ್ಖಾನೆ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿರುವ ಅನಧಿಕೃತ ಫ್ಯಾಕ್ಟರಿಗಳ ಬಗ್ಗೆ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಖಡಕ್ ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ.
ಇನ್ನೂ ಮೃತ ವಿಜಯಲಕ್ಷ್ಮಿ ಪತಿ ವೀರಭದ್ರ ದೂರಿನ ಆಧಾರದ ಮೇಲೆ IPC 286,337,338,304,Explosive act 1908 ಅಡಿ ಕೇಸ್ ದಾಖಲಿಸಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು,ಫ್ಯಾಕ್ಟರಿ ಮ್ಯಾನೇಜರ್ ಮಂಜುನಾಥ ಎಂಬುವವರನ್ನು ಬಂಧನ ಮಾಡಿದ್ದಾರೆ. ತಲೆ ಮರೆಸಿಕೊಂಡಿರುವ ಮಾಲೀಕ ಅಬ್ದುಲ್ಲ ಖಾದೀರ್ ಶೇಕ್ ಹಾಗೂ ಆತನ ಪತ್ನಿ ತಬ್ಸುಮ್ ಶೇಕ್ ಗಾಗಿ ತೀವ್ರ ಹುಡುಕಾಟ ನಡೆದಿದ್ದು, ಈ ಕಾರ್ಯಚರಣೆಗೆ ಮೂರು ಪೊಲೀಸ್ ತಂಡಗಳು ರಚನೆಯಾಗಿವೆ.
ಹುಬ್ಬಳ್ಳಿಯ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ: ಮೃತರ ಸಂಖ್ಯೆ ಮೂರಕ್ಕೇರಿಕೆ
ಇನ್ನೂ ಮೃತರ ಕುಟುಂಬಸ್ಥರು ಸೇರಿ ಗಾಯಗಳು ಕುಟುಂಬಸ್ಥರು ಫ್ಯಾಕ್ಟರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹೊರಗಡೆ ಕ್ಯಾಂಡಲ್ ತಯಾರಿಸುವ ಫ್ಯಾಕ್ಟರಿ ಅಂತ ಹೇಳಿ ಒಳಗಡೆ ಅನಧಿಕೃತವಾಗಿ ಮದ್ದು ಸಂಗ್ರಹಿಸಿ ಸ್ಪಾರ್ಕರ್ ತಯಾರಿಸಲಾಗುತ್ತಿತ್ತು. ನಮ್ಮ ಮನೆಯವರಿಗೆ ಈ ಸ್ಥಿತಿಗೆ ಕಾರಣವಾಗಿರುವ ಮಾಲೀಕನಿಗೆ ತಕ್ಕ ಶಿಕ್ಷೆಯಾಗಬೇಕೆಂದು ಬಲವಾಗಿ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳುವ ಬರದಲ್ಲಿ ಅಪಾಯದ ಅರಿವು ಇಲ್ಲದೇ ಮುಗ್ಧರ ಜೀವ ಬಲಿಪಡೆದ ಕಾರ್ಖಾನೆ ಮಾಲೀಕರಿಗೆ ತಕ್ಕಾ ಶಾಸ್ತ್ರಿ ಆಗಬೇಕಿದೆ.