* ಕಲಾವಿದನ ಕೈ ಚಳಕ- ರವಿ ಕಾಣದನ್ನು ಈ ಕಲಾವಿದ ಕಂಡ..!
* ಮಹಾರಾಷ್ಟ್ರದ ಟ್ರೈಬಲ್ ಆರ್ಟ್ ಮೂಲಕ ಗಮನಸೆಳೆದ ಕಲಾವಿದ
* ಆತನ ಕುಂಚದಲ್ಲಿ ಅರಳುತ್ತಿರುವ ಕಲೆಯ ವೈಶಿಷ್ಟ್ಯ ಇಲ್ಲಿದೆ ನೋಡಿ
ವರದಿ: ಗುರುರಾಜ್ ಹೂಗಾರ್
ಹುಬ್ಬಳ್ಳಿ, (ಮೇ.23): ಮೈಸೂರು ಶೈಲಿ, ತಂಜಾವೂರು ಶೈಲಿ, ರಾಜಸ್ಥಾನಿ ಶೈಲಿ, ಹೀಗೆ ಹಲವು ರೀತಿಯ ಚಿತ್ರಕಲೆಗಳು ಕಲಾವಿದರ ಕುಂಚದಲ್ಲಿ ಅರಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಕಲಾವಿದರು ಮಹಾರಾಷ್ಟ್ರದ ಟ್ರೈಬಲ್ ಆರ್ಟ್ ಮೂಲಕ ಜನಮನ ಸೇಳೆಯುತ್ತಿದ್ದಾರೆ, ಇಷ್ಟಕ್ಕೂ ಯಾರು ಆ ಕಲಾವಿದ, ಆತನ ಕುಂಚದಲ್ಲಿ ಅರಳುತ್ತಿರುವ ಕಲೆಯ ವೈಶಿಷ್ಟ್ಯ ಎಂಥಹದ್ದು ಅಂತೀರಾ ಇಲ್ಲಿದೆ ನೋಡಿ.
ಕೈಯಲ್ಲಿ ಬಣ್ಣದ ಕುಂಚ ಹಿಡಿದು ಸರಾಗವಾಗಿ ಯಾವುದೇ ಸ್ಕೇಚ್ ಇಲ್ಲದೇ ಚಿತ್ರ ಬಿಡಿಸುವ ಇವರು ರವೀಂದ್ರ ಹಳಿಜೋಳ. ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿರುವ ಇವರು. ಮಹಾರಾಷ್ಟ್ರದ ಟ್ರೈಬಲ್ ಆರ್ಟ್ ರಾಜ್ಯದ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.
undefined
ಕಲೆಯ ಮೂಲಕ ತಮ್ಮ ವೃತ್ತಿಯ ಬದುಕಿನ ಮತ್ತೊಂದು ಆಯಾಮವನ್ನು ಆರಂಭ ಮಾಡಿರುವ ಇವರು, ರವಿ ಕಾಣದನ್ನು ಕವಿ ಕಂಡ, ಕವಿ ಕಾಣದನ್ನು ಕಲಾವಿದಕಂಡ ಎಂಬಂತೆ ಹಲವಾರು ಅದ್ಬುತ ಛಾಯಾಚಿತ್ರ ಸೆರೆ ಹಿಡಿಯುವ ಛಾಯಾಗ್ರಾಹಕನಲ್ಲಿ ಒಬ್ಬ ಅದ್ಬುತ ಕಲಾವಿದನಾಗಿ ರೂಪುಗೊಂಡಿದ್ದು ವಿಶೇಷ.. ಈಗಾಗಲೇ ಚಿತ್ರಕಲಾ ವಿಭಾಗದಲ್ಲಿ ಪದವಿ ಪಡೆದು ಗೋಲ್ಡ್ ಮೆಡಲ್ ಪಡೆದಿರುವ ರವಿಕುಮಾರ್ ಈಗ ಯುವ ಪೀಳಿಗೆಗೆ ಇಂತಹದೊಂದು ಅದ್ಬುತ ಕಲೆಯನ್ನು ಪರಿಚಯಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಹುಬ್ಳೀಲಿ ಝಗಮಗಿಸಿದ ಜಗಜಟ್ಟಿಗಳ ಕಾದಾಟ: ಕುಸ್ತಿಪಟುಗಳ ಆರ್ಭಟ..!
ಈಗಾಗಲೇ ಹಲವಾರು ಚಿತ್ರಕಲೆಯನ್ನು ಬಿಡಿಸಿರುವ ರವೀಂದ್ರ ಅವರು ಮಹಾರಾಷ್ಟ್ರದ ಟ್ರೈಬಲ್ ಆರ್ಟ್ ಚಿತ್ರಗಳನ್ನು ಅದ್ಬುತವಾಗಿ ಚಿತ್ರಿಸುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಒಂದು ಚಿತ್ರ ನೂರು ಅರ್ಥವನ್ನು ಹೇಳುವಂತ, ಈ ಕಲಾವಿದನ ಕೈಯಲ್ಲಿ ಅರಳಿದ ಚಿತ್ರಗಳು ಹತ್ತಾರು ಅರ್ಥಗರ್ಭಿತ ವಿಚಾರಗಳನ್ನು ಹೊರಸೂಸುತ್ತೆ. ಗೋಡೆಯ ಮೇಲೆಬಿಡಿಸಿದ ನೃತ್ಯ ಮಾಡುವ ಸರಣಿ ಬೊಂಬೆಗಳ ಚಿತ್ರಕಲೆ ನೋಡುಗರನ್ನು ಮುಖವಿಸ್ಮಿತರನ್ನಾಗಿಸುತ್ತದೆ. ಇದುವರೆಗೆ ಐದು ಸಾವಿರಕ್ಕೂ ಅಧಿಕ ಆರ್ಟ್ ಬಿಡಿಸಿರುವ ರವಿ, ಹತ್ತಾರು ಕಲಾಸ್ತಕರ ಬಾಳಿಗೆ ದಾರಿ ದೀಪವಾಗಿದ್ದಾರೆ. ಫೈನ್ ಆರ್ಟ್ ಕಲಿಯಬೇಕು ಅಂತ ಬಯಸಿ ಬರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವುದರ ಜೊತೆ, ತಾವೇ ಖುದ್ದಾಗಿ ಕಲಾ ಶಿಬಿರಗಳನ್ನ ಏರ್ಪಡಿಸಿ ಹೊಸ ಆಯಾಮದ ಕಲೆಯನ್ನು ಪರಿಚಯಿಸುವ ಕೆಲಸವನ್ನು ರವಿ ಮಾಡುತ್ತಿದ್ದಾರೆ.
ಒಟ್ಟಾರೆ ಬಹುಮುಖ ಪ್ರತಿಭೆಗಯೂಳ್ಳ ರವಿ ಹುಬ್ಬಳ್ಳಿ ಯವರು ಅನ್ನೊದು ವಾಣಿಜ್ಯನಗರದ ಜನರಿಗೆ ಹೆಮ್ಮೆಯ ಸಂಗತಿ. ರವಿ ಅವರ ಕಲಾ ಸೇವೆ ಹೀಗೆ ಮುಂದುವರೆಯಲಿ, ಇನ್ನಷ್ಟು ಅದ್ಬುತ ಕಲಾಕೃತಿಗಳು ಇವರ ಕುಂಚದಲ್ಲಿ ಮೂಡಿಬರಲಿ ಅನ್ನೊದು ನಮ್ಮ ಆಶಯ..