Chamarajnagar: ವಿದ್ಯುತ್‌ ಸ್ಪರ್ಶಿಸಿ 11 ತಿಂಗಳ ಮಗು ಸಾವು

By Kannadaprabha News  |  First Published May 23, 2022, 10:43 AM IST

ಮಳೆ ಬರುತ್ತಿದೆ. ಗ್ರೌಂಡಿಂಗ್ ಆಗಿ ವಿದ್ಯುತ್ ಸ್ಪರ್ಶವಾಗಿ ಸಾಯುವವರ ಸಂಖ್ಯೆಯೂ ವರದಿಯಾಗುತ್ತಿದೆ. ಈ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನಲ್ಲಿ 11 ವರ್ಷದ ಮಗುವೊಂದು ಅಸು ನೀಗಿದೆ. 


ಯಳಂದೂರು (ಮೇ 23): ವಿದ್ಯುತ್‌ ಪ್ರವಹಿಸಿ 11 ತಿಂಗಳ ಮಗು ಮೃತಪಟ್ಟಿರುವ ಘಟನೆ ಭಾನುವಾರ ಜರುಗಿದೆ. ಗ್ರಾಮದ ಲಕ್ಷ್ಮೀ, ರಂಗಸ್ವಾಮಿ ದಂಪತಿ ಮಗು ಗಗನ್‌ (11ತಿಂಗಳು) ಮೃತಪಟ್ಟಬಾಲಕ. ಬಾಲಕನ ಪೋಷಕರು ಸ್ನಾನ ಮಾಡಿಸಿ ಮಲಗಿಸಿದ್ದರು. ನಂತರ ನಿದ್ರೆಯಿಂದ ಎದ್ದು ಪಕ್ಕದಲ್ಲೇ ಇದ್ದ ವಿದ್ಯುತ್‌ ಸ್ವಿಚ್‌ನ ಸಾಕೆಟ್‌ನ ತೂತಿಗೆ ಬೆರಳು ತೂರಿಸಿದ್ದು ಶಾಕ್‌ನಿಂದ ಕಿರುಚಿದ್ದಾನೆ. ಕೂಡಲೇ ಮಗುವಿನ ಅತ್ತೆ ಪವಿತ್ರ ಮಗುವಿಗೆ ಬಿಡಿಸಲು ಯತ್ನಿಸಿದ್ದಾರೆ. ಇವರಿಗೂ ಶಾಕ್‌ ಹೊಡೆದಿದೆ ಕೂಡಲೇ ಮೇನ್‌ ಸ್ವಿಚ್‌ ಆಫ್‌ ಮಾಡಲಾಗಿದೆ. ತಕ್ಷಣ ಇಬ್ಬರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಸೇರಿಸಲಾಯಿತಾದರೂ ಗಗನ್‌ ಮೃತಪಟ್ಟಿದ್ದಾನೆ. ಅತ್ತೆ ಪವಿತ್ರ ಚೇತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

ಎಲ್ಲೆಡೆ ಮಳೆ ಸುರಿಯುತ್ತಿರುವುದರಿಂದ ವಿದ್ಯುತ್ ವಿದ್ಯುತ್ ಗ್ರೌಂಡಿಂಗ್‌ನಿಂದ ಅನಾಹುತ ಸಂಭವಿಸುತ್ತಿರುವ ಸಂಖ್ಯೆಯೂ ಹೆಚ್ಚುತ್ತಿದೆ. ಈ ಬೆನ್ನಲ್ಲೇ ಈ ಪುಟ್ಟ ಮಗುವಿನ ಸಾವು ನೋವು ತಂದಿದೆ. 
 

Tap to resize

Latest Videos

undefined

ವಿದ್ಯುತ್ ತಗುಲಿ ಸಾವನ್ನಪ್ಪಿದ ಬೆಸ್ಕಾಂ ಸಿಬ್ಬಂದಿ
ಬೆಂಗಳೂರು: ಬೆಸ್ಕಾಂ ಸಿಬ್ಬಂದಿ ಪ್ರಸನ್ನ ಕುಮಾರ್  ವಿದ್ಯುತ್ ಕಂಬದಲ್ಲಿ‌ ಕೆಲಸ ಮಾಡ್ತಿರುವ ವೇಳೆ ಕೊನೆಯುಸಿರೆಳೆದಿದ್ದಾರೆ. ಬೆಸ್ಕಾಂ ಲೈನ್ಮೆನ್ ಆಗಿ ಕೆಲಸ ಮಾಡ್ತಿದ್ದರು ನಿಧನರಾದ 30 ವರ್ಷದ ಪ್ರಸನ್ನ ಕುಮಾರ್. ಮೇ 22ರಂದು ರಾತ್ರಿ ಕೊತ್ತನೂರು ಬಳಿ ವಿದ್ಯುತ್ ಕಂಬಕ್ಕೆ ಹತ್ತಿ ಕೆಲಸ ಮಾಡ್ತಿದ್ದ ವೇಳೆ ಮೇಲಿಂದ ಬಿದ್ದು ಈ ದುರ್ಘಟನೆ ಸಂಭವಿಸಿದೆ.

ಚಿತ್ರದುರ್ಗ ಮೂಲಕ ಪ್ರಸನ್ನಕುಮಾರ್ ಏಳು ವರ್ಷದಿಂದ‌ ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದರು. ಪ್ರಸನ್ನ ಕುಮಾರ್ ಮೃತದೇಹ ಕೆಜೆ ಹಳ್ಳಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿನಸಲಾಗಿದ್ದು, ಹೆಣ್ಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್‌ ಬಾಕಿ ಬಿಲ್‌ ಪಾವತಿಗೆ ಸೂಚನೆ
ಕೊಪ್ಪಳ: ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿಯ ಕೊಪ್ಪಳ (Koppala), ಯಲಬುರ್ಗಾ ಹಾಗೂ ಕುಕನೂರ ತಾಲೂಕುಗಳ ನಗರ ಮತ್ತು ಗ್ರಾಮೀಣ ಭಾಗದ ಗೃಹಬಳಕೆ, ವಾಣಿಜ್ಯ ಮತ್ತು ಕೈಗಾರಿಕೆಗಳ ವಿದ್ಯುತ್‌ ಕಂದಾಯ ಬಾಕಿ ವಸೂಲಾತಿಯಲ್ಲಿ ಹಿನ್ನಡೆಯಾಗಿದ್ದು, ಬಾಕಿ ಪಾವತಿಸದೇ ಇರುವ ಸುಮಾರು 1438 ಗ್ರಾಹಕರು ಮೇ 23ರೊಳಗೆ ವಿದ್ಯುತ್‌ ಬಾಕಿ ಮೊತ್ತವನ್ನು ಪಾವತಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು (ವಿ) ತಿಳಿಸಿದ್ದಾರೆ.'

ಸಂಪ್ ಕ್ಲೀನ್ ಮಾಡುವಾಗ ತಂದೆ-ಮಗ ಸಾವು

ಕೊಪ್ಪಳ (Koppala), ಯಲಬುರ್ಗಾ (Yalaburga) ಹಾಗೂ ಕುಕನೂರ ತಾಲೂಕುಗಳ ವಿದ್ಯುತ್‌ ಬಿಲ್‌ (Electricity Bill) ಪಾವತಿಸದ ಎಲ್ಲ ಗ್ರಾಹಕರು ತಕ್ಷಣವೇ ಬಾಕಿ ಇರುವ ಸಂಪೂರ್ಣ ಮೊತ್ತವನ್ನು ಮೇ 23ರೊಳಗೆ ಪಾವತಿಸುವುದು ಕಡ್ಡಾಯವಾಗಿದೆ. ಮೇ 24ರಿಂದ ವಿದ್ಯುತ್‌ ಸಂಪರ್ಕ ಕಡಿತ ಅಭಿಯಾನ ಕೈಗೊಳ್ಳಲಾಗಿದ್ದು, ಬಾಕಿ ಪಾವತಿಸದ ಸ್ಥಾವರಗಳ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿ ಕಂಪನಿಯ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಮತ್ತು ಗ್ರಾಪಂಗಳ ಸಾರ್ವಜನಿಕ ಬೀದಿದೀಪ ಹಾಗೂ ಕುಡಿಯುವ ನೀರಿನ ಸ್ಥಾವರಗಳ ಏ. 2022 ಅಂತ್ಯಕ್ಕೆ ಇದ್ದ ವಿದ್ಯುತ್‌ ಬಿಲ್‌ ಬಾಕಿಯನ್ನು ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಾವತಿ ಮಾಡುವಂತೆ ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರೆಂಟ್ ಶಾಕ್‌ಗೆ ಕೃಷಿ ದಂಪತಿ ಬಲಿ
 

click me!