
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ವಿಜಯನಗರ, (ಮೇ.23) : ಪೂರ್ವ ಮುಂಗಾರು ಮಳೆ ಹಿನ್ನೆಲೆ ಹೊಸಪೇಟೆ ಬಳಿ ಇರೋ ರಾಜ್ಯದ ಎರಡನೇ ಅತಿದೊಡ್ಡ ಜಲಾಶಯ ಎನ್ನುವ ಖ್ಯಾತಿಪಡೆದಿರೋ ತುಂಗಭದ್ರಾ ಜಲಾಶಯಕ್ಕೆ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.. ಮಲೆನಾಡು ಸೇರಿದಂತೆ ತುಂಗಭದ್ರಾ ಜಲಾಯನ ಪ್ರದೇಶದಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಈ ಬಾರಿ ಮೇ ತಿಂಗಲ್ಲಿ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬಂದಿರೋದು ಈ ಬಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಸಾರ್ವಕಾಲಿಕ ದಾಖಲೆ
ಇನ್ನೂ ಕಳೆದೆರಡು ದಿನಗಳಲ್ಲಿ 13 ಟಿಎಂಸಿ ಗೂ ಹೆಚ್ಚು ನೀರು ಹರಿದು ಬಂದಿದ್ದು ಇದು ಸಾರ್ವಕಾಲಿಕ ದಾಖಲೆ ಎನ್ನಲಾಗ್ತಿದೆ.. ಯಾಕಂದ್ರೆ, ಮೇ ನಲ್ಲಿ ಇಷ್ಟೊಂದು ಪ್ರಮಾಣದ ನೀರು ಬಂದಿರೋದು ಇದೆ ಮೊದಲು ಎನ್ನುವುದು ನೀರಾವರಿ ತಜ್ಙರ ಅಭಿಪ್ರಾಯವಾಗಿದೆ. ಮೊನ್ನೆ 19.766 ಟಿಎಂಸಿ ಇದ್ದ ನೀರು ಇಂದು(ಸೋಮವಾರ) 31.481 ಟಿಎಂಸಿ ನೀರು ಸಂಗ್ರಹವಾಗಿದೆ . ಒಳಹರಿವಿನಲ್ಲೂ ಕೂಡ ಹೆಚ್ಚಳವಿದೆ ಕಳೆದರೆಡು ದಿನ 80 ಸಾವಿರ ಕ್ಯೂಸೆಕ್ ಒಳಹರಿವು ಇತ್ತು. ಸದ್ಯ 45,858 ಕ್ಯೂಸೆಕ್ ನೀರು ಒಳಹರಿವು ಇದೆ.. ಹವಮಾನ ಇಲಾಖೆ ಪ್ರಕಾರ ಇನ್ನೇರಡು ದಿಗಳ ಕಾಲ ಮಲೆನಾಡು ಸೇರಿದಂತೆ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರೋ ಮಳೆಯಿಂದಾಗಿ ಮತ್ತಷ್ಟು ಅಪಾರ ಪ್ರಮಾಣದ ನೀರು ತುಂಗಭದ್ರಾ ಜಲಾಶಯಕ್ಕೆ ಹರಿದು ಬರೋ ಸಾಧ್ಯತೆ ಇದ್ದು, ಮುಂಗಾರು ಆರಂಭಕ್ಕೆ ಮುನ್ನವೇ ಈ ಬಾರಿ ಜಲಾಶಯ ಬಹುತೇಕ ಆರ್ಧಕ್ಕೂ ಹೆಚ್ಚು ತುಂಬುತ್ತದೆ ಎನ್ನಲಾಗ್ತಿದೆ. ಇದರ ಜೊತೆ ಮುಂಗಾರ ಆರಂಭವಾದ್ರೇ ಜೂನ್ ಎರಡನೇ ವಾರದಷ್ಟೊತ್ತಿಗೆ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ.
ಡ್ಯಾಂ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ: 1,600 ಅಡಿ ತಲುಪಿದ ತುಂಗಭದ್ರಾ ನೀರಿನ ಮಟ್ಟ
100 ಟಿಎಂಸಿ ಸಾಮಾರ್ಥ್ಯದ ಜಲಾಶಯ
ಇನ್ನೂ 100.855 ಟಿಎಂಸಿ ಸಾಮರ್ಥ್ಯವಿರೋ ತುಂಗಭದ್ರಾ ಜಲಾಶಯದಲ್ಲಿ ಸದ್ಯ 31.481 ಟಿಎಂಸಿ ನೀರು ಸಂಗ್ರಹವಿದೆ.. ಕಳೆದ ವರ್ಷಕ್ಕೆ ಹೊಲಿಕೆ ಮಾಡಿದ್ರೆ ನಾಲ್ಕು ಪಟ್ಟು ನೀರು ಸದ್ಯ ಜಲಾಯದಲ್ಲಿ ಹೆಚ್ಚಾಗಿದೆ. (ಕಳೆದ ವರ್ಷ ಈ ಹೊತ್ತಿಗೆ ಕೇವಲ 7.033 ಟಿಎಂಸಿ ನೀರು ಸಂಗ್ರಹವಿತ್ತು..) ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗಿ ಜೂನ್ ಮೂರನೇ ವಾರದಲ್ಲಿ ಇಷ್ಟೊಂದು ನೀರು ಬರುತ್ತಿತ್ತು..ಆದ್ರೇ ಈ ಬಾರಿ ಮೇ ಮೂರನೇ ವಾರಕ್ಕೆ ದಾಖಲೆ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರೋ ಸಂತಸ ಮೂಡಿಸಿದೆ.
ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಸಂತಸ
ಇನ್ನೂ ಪೂರ್ವ ಮುಂಗಾರು ಮಳೆ ಮಲೆನಾಡು ಸೇರಿದಂತೆ ಅಲ್ಲಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿದ್ದು, ಹಲವು ಕಡೆಗಳಲ್ಲಿ ಕಟಾವಿಗೆ ಬಂದಿದ್ದ ಬೆಳೆಯನ್ನೆಲ್ಲ ಹಾಳು ಮಾಡಿದೆ. ಆದ್ರೇ, ಇದೇ ನೀರನ್ನು ಅವಲಂಬಿತವಾಗಿ (ಕೆಳಭಾಗದ ರೈತರು) ಮುಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ
10ಕ್ಕೂ ಹೆಚ್ಚು ಜಿಲ್ಲೆಗಳು ಆಧಾರವಾಗಿರೋ ಜಲಾಶಯ
ರಾಜ್ಯದ ಬಳ್ಳಾರಿ , ರಾಯಚೂರು, ಕೊಪ್ಪಳ ವಿಜಯನಗರ ಜಿಲ್ಲೆ ಸೇರಿದಂತೆ ಆಂಧ್ರದ ಅನಂತಪುರ ಕರ್ನೂಲ್ ಸೇರಿ ಒಟ್ಟು ಹತ್ತಕ್ಕೂ ಹೆಚ್ಚು ಜಿಲ್ಲೆಯ ಜನರು ಇದೇ ಜಲಾಶಯದ ನೀರಿನ ಮೇಲೆ ಅವಲಂಬನೆ ಹೊಂದಿದ್ದಾರೆ. ಕುಡಿಯೋ ನೀರು ಸೇರಿದಂತೆ ಮೂರು ಲಕ್ಷಕ್ಕೂ ಹೆಕ್ಟರ್ ಪ್ರದೇಶಕ್ಕೆ ನೀರು ಒದಗಿಸಲಿರೋ ಜಲಾಶಯ ಅವಧಿಗೂ ಮುನ್ನ ತುಂಬುವ ಭರವಸೆ ಇದೆ. ಆದ್ರೇ, ಮುಂಗಾರ ಅವಧಿ ಪೂರ್ವ ಅಬ್ಬರಿಸಿದ್ದು, ನಂತರ ದಿನಗಳಲ್ಲಿ ಮಳೆ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆಯೆ ಕಾದು ನೋಡಬೆಕಿದೆ.