ನಿಪ್ಪಾಣಿ, ಕಾರವಾರ ಸೇರಿದಂತೆ ಕೆಲ ಜಿಲ್ಲೆಗಳನ್ನು ಕೇಂದ್ರಾಡಳಿತ ಪ್ರದೇಶವಾಗಿಸಬೇಕು ಎಂಬ ಮಹಾರಾಷ್ಟ್ರದ ಉದ್ದವ್ ಠಾಕ್ರೆ ಹೇಳಿಕೆ ಬಾಲಿಶತನದಿಂದ ಕೂಡಿದೆ. ಮುಂಬೈನಲ್ಲಿ ಮರಾಠಿ ಭಾಷೆ ಮಾತನಾಡುವ ಜನರು ಎಷ್ಟಿದ್ದಾರೆಂದು ಕೇಳಿದರೆ ಅವರೇ ಗೊಂದಲಕ್ಕೀಡಾಗುತ್ತಾರೆ.
ಹುಬ್ಬಳ್ಳಿ (ಡಿ.28): ನಿಪ್ಪಾಣಿ, ಕಾರವಾರ ಸೇರಿದಂತೆ ಕೆಲ ಜಿಲ್ಲೆಗಳನ್ನು ಕೇಂದ್ರಾಡಳಿತ ಪ್ರದೇಶವಾಗಿಸಬೇಕು ಎಂಬ ಮಹಾರಾಷ್ಟ್ರದ ಉದ್ದವ್ ಠಾಕ್ರೆ ಹೇಳಿಕೆ ಬಾಲಿಶತನದಿಂದ ಕೂಡಿದೆ. ಮುಂಬೈನಲ್ಲಿ ಮರಾಠಿ ಭಾಷೆ ಮಾತನಾಡುವ ಜನರು ಎಷ್ಟಿದ್ದಾರೆಂದು ಕೇಳಿದರೆ ಅವರೇ ಗೊಂದಲಕ್ಕೀಡಾಗುತ್ತಾರೆ. ಮಾತನಾಡುವ ಮುನ್ನ ಆಲೋಚನೆ ಮಾಡಿ ಮಾತನಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಕಿವಿಮಾತು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಠಾಕ್ರೆ ಹೇಳಿಕೆ ಕುರಿತು ಮಾತನಾಡಿದ ಅವರು, ಅಂತಾರಾಜ್ಯ ಗಡಿ ವಿವಾದ ಇತ್ಯರ್ಥವಾಗಿದ್ದರೂ ಅದರ ಬಗ್ಗೆ ಮಹಾರಾಷ್ಟ್ರದವರು ಮತ್ತೆ ಮತ್ತೆ ಕ್ಯಾತೆ ತೆಗೆಯುತ್ತಿರುವುದು ರಾಜಕೀಯ ಪ್ರೇರಿತವೇ ಹೊರತು ಇನ್ನೇನೂ ಅಲ್ಲ. ಸ್ವಾರ್ಥಕ್ಕಾಗಿ ರಾಜಕೀಯ ಮಾಡುವ ವ್ಯಕ್ತಿಗಳು ಸಮಾಜಕ್ಕೆ ಭಾರವಾಗಿದ್ದಾರೆ ಎಂದರು.
ಮೂಗಿಗೆ ತುಪ್ಪ : ಇವರಿಗೆ ಅಧಿಕಾರದಲ್ಲಿದ್ದಾಗ ಒಕ್ಕಲಿಗರ ಮೀಸಲಾತಿ ನೆನಪಾಗಲಿಲ್ಲ. ನಾವು ಸಮಾಜದ ಅಭಿವೃದ್ಧಿ ಬಯಸುವವರು. ಹಾಗಾಗಿ ಮೀಸಲಾತಿ ನೀಡುವ ಕುರಿತು ಚಿಂತನೆ ನಡೆಸುತ್ತಿದ್ದೇವೆ ಎಂದರು. ನಾವು ಮೂಗಿಗೆ ತುಪ್ಪ ಸವರುವವರಲ್ಲ, ಬಾಯಿಗೆ ಕೊಡುತ್ತೇವೆ. ತುಪ್ಪ ಹಚ್ಚುವುದು, ತುಷ್ಟೀಕರಣದ ರಾಜಕೀಯ ಮಾಡುವುದು ಕಾಂಗ್ರೆಸ್ಸಿನ ಸಂಸ್ಕೃತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರಗೆ ತಿರುಗೇಟು ನೀಡಿದರು. ಕೋವಿಡ್ ಹೆಸರಿಟ್ಟುಕೊಂಡು ಅವಧಿಗೆ ಮುನ್ನವೇ ಚುನಾವಣೆ ನಡೆಸಲು ಸರ್ಕಾರ ತಯಾರಿ ನಡೆಸಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯಿಸಿ, ಭಾರತವಷ್ಟೇ ಅಲ್ಲ, ಇಡೀ ವಿಶ್ವದಲ್ಲಿಯೇ ಕೋವಿಡ್ ಹೊಸ ತಳಿಗಳು ಮತ್ತೆ ಮತ್ತೆ ಬರುತ್ತಿದ್ದು, ಇಂಥ ಸ್ಥಿತಿಯಲ್ಲಿಯೂ ಇವರಿಗೆ ರಾಜಕೀಯ, ಚುನಾವಣೆ ಬಿಟ್ಟರೆ ಬೇರೇನೂ ಇಲ್ಲವೇ ಎಂದು ಅಶ್ವತ್ಥನಾರಾಯಣ ಕುಟುಕಿದರು.
ಸಚಿವ ಅಶ್ವತ್ಥ್ ನಾರಾಯಣ ಮಾದರಿ ಪ್ರತಿನಿಧಿ: ಬಿ.ಎಸ್.ಯಡಿಯೂರಪ್ಪ
ಗಡಿ ವಿಚಾರ, ಮಹಾಜನ್ ವರದಿಯೇ ಅಂತಿಮ: ನಾವು ಒಕ್ಕೂಟದ ವ್ಯವಸ್ಥೆಯಲ್ಲಿದ್ದೇವೆ. ಮಹಾರಾಷ್ಟ್ರ-ಕರ್ನಾಟಕ ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮವಾಗಿದೆ. ನಾವು ಮೊದಲು ಭಾರತೀಯರು, ನಂತರ ಕನ್ನಡಿಗರು, ಅವರು ಮರಾಠಿಗರು. ಕಾನೂನಿಗೆ ಎಲ್ಲರೂ ಗೌರವ ಕೊಡಬೇಕು ಎಂದು ಸಚಿವ ಸುಧಾಕರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಗಡಿಯಲ್ಲಿನ ಹಳ್ಳಿ ಬೇಕು ಎಂದು ಮಹಾರಾಷ್ಟ್ರದ ಮುಖಂಡರು ರಾಜಕೀಯ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಕಾನೂನಾತ್ಮಕವಾಗಿ ಅವರ ಮಾತಿಗೆ ಬೆಲೆ ಇಲ್ಲ. ಈಗಾಗಲೇ ಒಂದಿಂಚೂ ಭೂಮಿ ನೀಡಲ್ಲ ಎಂದು ನಮ್ಮ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ನೆಲದ ಸಮಸ್ಯೆ ಬಂದಾಗ ಒಂದಾಗಿರಬೇಕು. ಅದರಂತೆ ಎಲ್ಲ ಪಕ್ಷಗಳು ಒಂದಾಗಿದ್ದೇವೆ. ನಮ್ಮ ಒಂದಿಂಚೂ ಭೂಮಿಯೂ ಹೋಗುವುದಿಲ್ಲ. ಅದರ ಬಗ್ಗೆ ಯಾರಿಗೂ ಆತಂಕ ಬೇಡ ಎಂದರು.
ಡಿಗ್ರಿ, ಪೀಜಿ: ಕನ್ನಡ, ಇಂಗ್ಲಿಷ್ ಬೆರೆಸಿ ಪರೀಕ್ಷೆ ಬರೆಯಲು ಅಸ್ತು!
ಅವಧಿ ಪೂರ್ವ ಚುನಾವಣೆ ಕುರಿತು ಡಿ.ಕೆ. ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಹಳ ಕಡೆ ಜ್ಯೋತಿಷ್ಯ ಕೇಳುತ್ತಾರೆ. ಆದರೆ ಯಾವಾಗ ಜ್ಯೋತಿಷಿ ಆದರೂ ಎಂದು ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು. ನಾವು ಕಾಂಗ್ರೆಸ್ಸಿನವರಿಗೆ ಯಾವುದೇ ತೊಂದರೆ ಮಾಡಿಲ್ಲ. ವಿರೋಧ ಪಕ್ಷದ ನಾಯಕರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ರಾರಯಲಿ ಮಾಡಲಿ, ಮಹದಾಯಿ ಬಗ್ಗೆ ಕಳೆದ ಆರು ವರ್ಷಗಳಲ್ಲಿ ಕಾಂಗ್ರೆಸ್ ಸಾಧನೆ ಏನು ಎಂಬುದನ್ನು ಅವರು ಮಾಡುತ್ತಿರುವ ಪ್ರತಿಭಟನಾ ಸಮಾವೇಶದಲ್ಲಿ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ಕೊರೋನಾ ವಿಷಯದಲ್ಲಿ ಸರ್ಕಾರ ಭಯ ಹುಟ್ಟಿಸುತ್ತಿದೆ ಎನ್ನುವ ಡಿಕೆಶಿ ಹೇಳಿಕೆಗೆ, ಅವರಷ್ಟುಧೈರ್ಯ ನಮಗೆ ಇಲ್ಲ. ಅದಕ್ಕೆ ಅವರು ಕಳೆದ ಬಾರಿ ಎರಡು ಸಲ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಕುಟುಕಿದರು.