ಕನ್ನಡ ಶ್ರೀಮಂತ ಭಾಷೆಯಾಗಿದೆ. ಪಂಪ, ರನ್ನ, ರಾಘವಾಂಕ ರಿಂದ ಈಗಿನ ನೂತನ ಸಾಹಿತಿಗಳವರೆಗೂ ದೊಡ್ಡ ಕೊಡುಗೆ ನೀಡಿದ್ದಾರೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಬಂದಿದ್ದು ಕನ್ನಡಕ್ಕೆ: ಸಿಎಂ ಬೊಮ್ಮಾಯಿ
ಬೆಳಗಾವಿ(ಡಿ.28): ಕನ್ನಡಕ್ಕೆ ಉಜ್ವಲ ಭವಿಷ್ಯ ಇದೆ. ಸಂಸ್ಕೃತಿ, ಭಾಷೆಗೂ ಬಹಳ ನಿಕಟ ಸಂಬಂಧವಿದೆ. ಒಂದು ಭಾಷೆ ನಾಡಿಗೂ, ದೇಶಕ್ಕೂ ಮುಖ್ಯ. ಸಂಸ್ಕೃತಿ ಇಲ್ಲದೇ ನಾವು ಮನುಷ್ಯರಾಗಿ ಬಳಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಳಗಾವಿಯಲ್ಲಿ ಕನ್ನಡ ಭವನ ರಂಗಮಂದಿರ ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂಸಾರದಲ್ಲಿ ಮನುಷ್ಯ ಹಾಗೂ ಪ್ರಾಣಿಗೆ ಇರುವ ವ್ಯತ್ಯಾಸ ಇಷ್ಟೇ. ನಮಗೆ ಹೆಚ್ಚಿನ ಬುದ್ದಿಶಕ್ತಿ ಅಭಿವ್ಯಕ್ತ ಮಾಡುವ ಶಕ್ತಿ ಕೊಟ್ಟಿದ್ದಾನೆ. ಭಗವಂತ ಕೊಟ್ಟ ಶಕ್ತಿ ಹೇಗೆ ಬಳಕೆ ಮಾಡುತ್ತೇವೆ ಎನ್ನುವುದು ಮುಖ್ಯ. ಇದರ ಮೇಲೆ ನಮ್ಮ ಕ್ರಿಯೆ, ಪ್ರತಿಕ್ರಿಯೆ ಸಂಸ್ಕೃತಿ ನಿಂತಿದೆ. ಮನು ಕುಲದ ಅಭಿವೃದ್ಧಿಯಲ್ಲಿ ಭಾಷೆ ಬಹಳ ಮುಖ್ಯ ಕೆಲಸ. ಮನುಷ್ಯರಲ್ಲಿ ತತ್ವ ಆದರ್ಶ, ಆದ್ಯಾತ್ಮ ಶಕ್ತಿ ಅಳವಡಿಸಿಕೊಳ್ಳಲು ಭಾಷೆ ಉಪಯುಕ್ತವಾಗಿದೆ ಎಂದರು.
undefined
ಸದನದಲ್ಲಿ ಪ್ರತಿಧ್ವನಿಸಿದ ಕುಕ್ಕರ್ ಸ್ಫೋಟ: ಸಿ.ಟಿ. ರವಿ-ಡಿಕೆಶಿ ಮಾತಿನ ಚಕಮಕಿ
ಕನ್ನಡ ಶ್ರೀಮಂತ ಭಾಷೆಯಾಗಿದೆ. ಪಂಪ, ರನ್ನ, ರಾಘವಾಂಕ ರಿಂದ ಈಗಿನ ನೂತನ ಸಾಹಿತಿಗಳವರೆಗೂ ದೊಡ್ಡ ಕೊಡುಗೆ ನೀಡಿದ್ದಾರೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಬಂದಿದ್ದು ಕನ್ನಡಕ್ಕೆ. ಅತ್ಯಂತ ಪ್ರಾಚೀನ ಭಾಷೆ ಕನ್ನಡ, ತಮಿಳು ವರು ತಮ್ಮದು ಎನ್ನುತ್ತಾರೆ ಆದರೆ ಇತ್ತೀಚೆಗೆ ಶಿಲೆ ಸಿಕ್ಕಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯ ಕನ್ನಡವನ್ನು ಶ್ರೀಮಂತಗೊಳಿಸಿದೆ. ಇದನ್ನ ಇಡೀ ನಾಡಿಗೆ ಅಷ್ಟೇ ಅಲ್ಲ ದೇಶಕ್ಕೆ ತಿಳಿಸಬೇಕು. ಸಂಕೋಚಿತ ಮನೋಭಾವದಿಂದ ಹೊರ ಬರಬೇಕು. ಸ್ವಾತಂತ್ರ್ಯ ಬಳಿಕ ಇಂಗ್ಲಿಷ ಮಾತನಾಡುವ ವ್ಯಾಮೋಹ ಬಹಳಿತ್ತು. ಎಲ್ಲ ಭಾಷೆ ಕಲಿಬೇಕು ಆದರೆ ನಮ್ಮತನ ಬಿಟ್ಟುಕೊಡಬಾರದು. ನಾನು ಸಿಎಂ ಆಗಿರಬಹುದು. ನನ್ನ ಕರ್ನಾಟಕ ಸಿಎಂ, ಕನ್ನಡ ಮುಖ್ಯಮಂತ್ರಿ ಎನ್ನುತ್ತಾರೆ ಎಂದರು.
ಕನ್ನಡ ದಿನನಿತ್ಯ ಬಳಕೆ ಮಾಡಿದರೆ ಬೆಳವಣಿಗೆ ಆಗುತ್ತದೆ. ನಮ್ಮ ಕನ್ನಡಕ್ಕೆ ಅಂತರ್ಗತವಾದ ಶಕ್ತಿ ಇದೆ. ಈ ಭೂಮಿಯಲ್ಲಿ ಯಾವುದೇ ಶಕ್ತಿಗೂ ಕನ್ನಡ ಅಳಿಸಲು ಸಾಧ್ಯವಿಲ್ಲ. ಕನ್ನಡ ಭಾಷೆಯ ಶಕ್ತಿ ಬಳಸಿದ್ರೆ ಕನ್ನಡವೂ ಬೆಳೆಯುತ್ತದೆ. ನಾವು ಬೆಳೆಯುತ್ತೇವೆ. ಕನ್ನಡ ಭಾಷೆಗೆ ಆತಂಕ ಬಂದಿದೆ ಅಂತಾರೆ ಆದ್ರೆ ಅವರ ಆತಂಕವನ್ನು ಕನ್ನಡ ಆತಂಕ ಎನ್ನುತ್ತಾರೆ. ಸಕಾರಾತ್ಮಕ ಮುಂದೆ ಹೋದಾಗ ನಮಗೆ ಉತ್ತಮ ಭವಿಷ್ಯ ಇದೆ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿ ಯಾವುದೇ ದೇಶಕ್ಕೆ ಹೋಗಿ, ಆದರೆ, ಆ ಸಾಧನೆ ಕನ್ನಡದಿಂದ ಇದೇ ಎನ್ನುವುದನ್ನು ಮರೆಯಬಾರದು ಎಂದು ಹೇಳಿದರು.
ಗಡಿಭಾಗದಲ್ಲಿ ಹತ್ತು ಹಲವು ಸಮಸ್ಯೆ ಹುಟ್ಟುಹಾಕುವ ಕೆಲಸ ನಡೆಯುತ್ತಿದೆ. ಆ ಕಡೆಯವರು ರಾಜಕೀಯಕ್ಕೋಸ್ಕರ ಮಾತನಾಡುತ್ತಾರೆ. ಕನ್ನಡ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಮೀಸಲಿಡಲಾಗಿದೆ. ಬೆಳಗಾವಿಯವರಿಗೆ ಗಡಿ ವಿಚಾರ ಕೇಳಿದರೆ ಇಡೀ ಜಗತ್ತು ಮಾತನಾಡುತ್ತದೆ. ಇದು ನಮ್ಮ ನಿಮ್ಮ ಪ್ರಶ್ನೆ ಅಲ್ಲ, ಕೆಲವರು ಅಲ್ಲಿ ಯವರು ಮಾತಾಡುತ್ತಾರೆ. ಕನ್ನಡ ಗಟ್ಟಿಮಾಡಲು ನಾವು ಸದಾ ಸಿದ್ದ ಇದ್ದೇವೆ. ಅರ್ಜಿ ಕೊಟ್ಟು ಹುಟ್ಟಲು ಸಾಧ್ಯವಿಲ್ಲ. ಹೀಗಾಗಿ ನಾವು ಕನ್ನಡ ನಾಡಲ್ಲಿ ಹುಟ್ಟಿದ್ದೇವೆ ಅಂದರೆ ನಾವು ಕನ್ನಡಿಗರು. ಅರ್ಜಿ ಕೊಟ್ಟು ಹುಟ್ಟಿದರೆ ಬೇರೆ. ಹುಟ್ಟು ಆಕಸ್ಮಿಕ ಸಾವು ನಿಶ್ವಿತ. ಮೃತ್ಯುಂಜಯ ಎಂದು ಹೆಸರಿಟ್ಟು ಕೊಳ್ಳಬಹುದು ಆದರೆ ಮೃತ್ಯು ಜಯಿಸಲು ಸಾಧ್ಯವಿಲ್ಲ ಎಂದರು.
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅಕ್ಷರಶಃ ಪಾಲನೆ ಮಾಡಬೇಕು. ಗಡಿಭಾಗದ ಅಭಿವೃದ್ಧಿ ಶಾಲೆಗಳ ಅಭಿವೃದ್ಧಿ ಚಿಂತೆಯ ಅವಶ್ಯಕತೆ ಇಲ್ಲ. ಈಗಾಗಲೇ ಗಡಿಭಾಗದ ಅಭಿವೃದ್ಧಿಗೆ ನೂರು ಕೋಟಿ ಅನುದಾನ ನೀಡಲಾಗಿದೆ. ಗಡಿ ಆಚೆಗಿನ ಕನ್ನಡ ಶಾಲೆಗಳ ಅಭಿವೃದ್ಧಿ ಗೆ ಕೆಲಸ ನಡೆಯುತ್ತಿದೆ. ಸಾಹಿತ್ಯ ಸಮ್ಮೇಳನ ಆದ ಮೇಲೆ ಗಡಿಪ್ರಾಧಿಕಾರದ ಅಧ್ಯಕ್ಷರು ಇಲ್ಲಿ ಬರುತ್ತಾರೆ. ಕನ್ನಡಕ್ಕೆ ಏನು ಬೇಕು ಅದನ್ನ ಬರುವ ಬಜೆಚ್ ನಲ್ಲಿ ಮಂಡಿಸಲಾಗುವುದು. ನಮ್ಮ ಹತ್ತಿರ ಇರೋದು ನಾಗರಿಕತೆ, ನಾವು ಏನು ಆಗಿದೀವೆ ಅದು ಸಂಸ್ಕೃತಿ. ಇದು ಕನ್ನಡಿಗರ ದೇಹ, ಕನ್ನಡದಲ್ಲಿ ಒಳ್ಳೆಯ ತನ ಇದೆ. ಕನ್ನಡದ ಸಾಕ್ಷಿಪ್ರಜ್ಞೆ ಮಾನವೀಯ ಮಾನವೀಯತೆಯಿಂದ ಕೂಡಿದ್ದು, ಹಿಂದಿನ ಪೀಳಿಗೆ ಇವನ್ನೆಲ್ಲ ಉಳಿಸಿ ಬೆಳೆಸಿ ಕೊಟ್ಟಿದ್ದಾರೆ ಎಂದರು.
ಕೋವಿಡ್ ಸಿದ್ಧತೆ: ರಾಜ್ಯ ವ್ಯಾಪಿ ತಾಲೀಮು, ಸಚಿವ ಸುಧಾಕರ್
ನಾವು ಮುಂದಿನ ಪೀಳಿಗೆಗೆ ಮತ್ತಷ್ಟುಉತ್ಕೃಷ್ಟಮಾಡಿಕೊಡಬೇಕು. ಎಲ್ಲರೂ ನಮ್ಮ ನಮ್ಮ ಕೆಲಸ ಮಾಡಿದ್ರೆ ಕನ್ನಡದ ಅಂತಗ್ರತ ಶಕ್ತಿ ಹೆಚ್ಚುತ್ತದೆ. ಪ್ರಭಾಕರ ಕೋರೆ ಕೈ ಹಾಕಿದರೆ ತಾವು ತಲೆ ಕೆಡಿಸಿಕೊಳ್ಳುತ್ತಾರೆ, ಬೇರೆಯವರ ತಲೆ ಕೆಡಿಸಿಕೊಳ್ಳುತ್ತಾರೆ. ಇಡೀ ಪ್ರದೇಶಕ್ಕೆ ಅನುಕೂಲವಾದ ಕೆಲಸ ಮಾಡುತ್ತಾ ಬಂದಿದ್ದಾರೆ. ನಿಮ್ಮ ನೇತೃತ್ವದಲ್ಲಿ ಇನ್ನೊಂದು ವಿಶ್ವಕನ್ನಡ ಸಮ್ಮೇಳನ ಮಾಡೋಣ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಕಸಾಪ ಜಿಲ್ಲಾಧ್ಯಕ್ಷ ಮಂಗಲ ಮೆಡಗುಡ್, ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ಸಂಸದೆ ಮಂಗಲ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಮೊದಲಾದವರು ಉಪಸ್ಥಿತರಿದ್ದರು.