ಇಂದಿಗೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದೆ. ಇಂಥ ಹಳ್ಳಿಗಳಿಗೆ ಜಲ ಜೀವನ್ ಮಿಷನ್ ಯೋಜನೆ ಮೂಲಕ ಶುದ್ಧ ಕುಡಿಯುವ ನೀರು ತಲುಪುವಂತಾದರೆ ಮಹತ್ವಾಕಾಂಕ್ಷಿ ಯೋಜನೆ\ಯೊಂದು ಸಾರ್ಥಕ.
ಹಾನಗಲ್ಲ (ಜು.29) : ಹಿಂದೆ ಕೃಷ್ಣ ಭೈರೇಗೌಡ ಅವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಸಚಿವರಾಗಿದ್ದ ಸಂದರ್ಭದಲ್ಲಿ ಚಿಂತಿಸಿ, ಯೋಜಿಸಿದ್ದ ಮಹತ್ವಾಕಾಂಕ್ಷೆಯ ಕುಡಿಯುವ ನೀರು ಪೂರೈಕೆ ಯೋಜನೆ ಇದೀಗ ಮನೆ, ಮನೆಗೆ ಗಂಗೆ ಯೋಜನೆಯಾಗಿ ರೂಪಾಂತರಗೊಂಡು ಜಲ ಜೀವನ್ ಮಿಷನ್ ಅಡಿ ರಾಷ್ಟ್ರವ್ಯಾಪಿ ಕಾರ್ಯಗತಗೊಳ್ಳುತ್ತಿದೆ ಎಂದು ಶಾಸಕ ಶ್ರೀನಿವಾಸ್ ಮಾನೆ ಹೇಳಿದರು.
ತಾಲೂಕಿನ ಬ್ಯಾತನಾಳ(Byatanaala) ಗ್ರಾಮದಲ್ಲಿ ಮನೆ, ಮನೆಗೆ ಗಂಗೆ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
undefined
ಕಲುಷಿತ ನೀರು ಸೇವಿಸಿ ಸರಣಿ ಸಾವು : ಅಧಿಕಾರಿಗಳು ಮಾತ್ರ ಡೋಂಟ್ ಕೇರ್
ಇಂದಿಗೂ ಕೂಡ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸ್ಥಿತಿ ಸರಿಯಾಗಿಲ್ಲ. ಕುಡಿಯುವ ನೀರಿಗಾಗಿ ಹಾಹಾಕಾರ ಇದೆ. ಶುದ್ಧ ನೀರು(Drinking Water) ಪೂರೈಕೆ ಸಮರ್ಪಕವಾಗಿಲ್ಲ. ಅಶುದ್ಧ ಕುಡಿಯುವ ನೀರಿನಿಂದ ಅನೇಕ ಸಾಂಕ್ರಾಮಿಕ ರೋಗ ರುಜಿನಗಳ ಹರಡುವಿಕೆಯಿಂದ ನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಮನೆ, ಮನೆಗೆ ಗಂಗೆ ಯೋಜನೆ ಅನುಷ್ಠಾನಗೊಂಡ ನಂತರ ಜನತೆಗೆ ನದಿ ನೀರು ಲಭಿಸಲಿದೆ. ಯೋಜನೆಯಡಿ ಪೈಪಲೈನ್ ಅಳವಡಿಸಿ, ಜಲಾಗಾರ ನಿರ್ಮಿಸಿ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಸಲಾಗುವುದು. ನೀರಿನ ಅಪವ್ಯಯವೂ ನಿಯಂತ್ರಣಕ್ಕೆ ಬರಲಿದೆ. ಡಿಸೆಂಬರ್ ಅಂತ್ಯಕ್ಕೆ ಹಾನಗಲ್ಲ ತಾಲೂಕಿನಲ್ಲಿ ಯೋಜನೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದ ಅವರು ನೀರು ಜೀವಾಮೃತ, ಜೀವದ ಮೂಲ ಹಾಗಾಗಿ ಮಿತ ಬಳಕೆಗೆ ಪ್ರತಿಯೊಬ್ಬರಲ್ಲಿಯೂ ಸಹ ಅರಿವು ಮೂಡಬೇಕಿದೆ. ಮುಂದಿನ ಪೀಳಿಗೆ ವರೆಗೂ ನಾವೆಲ್ಲ ಕೈ ಜೋಡಿಸಿ ಅಮೂಲ್ಯ ನೀರನ್ನು ಜೋಪಾನವಾಗಿ ಸಂರಕ್ಷಿಸಬೇಕಿದೆ. ಎಲ್ಲರ ಸಹಭಾಗಿತ್ವದಿಂದ ಮಾತ್ರ ಈ ಸದುದ್ದೇಶ ಈಡೇರಲಿದೆ ಎಂದರು.
ರಾಯಚೂರು: ಹಳ್ಳ ಹಿಡಿದ ಜಲಜೀವನ ಮಿಷನ್ ಕಾಮಗಾರಿ
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಗೀತಾ ಸಣಕಂಬಿ(Geeta Sanakmbi), ಸದಸ್ಯರಾದ ಬಸವರಾಜ ಸಿದ್ದಪ್ಪ ಕಾನಮನಿ(Basavaraj Siddappa Kaanmani), ಗೋಪಾಲ ಕಾನಮನಿ(Gopal Kaanmani), ಗಿರಿಜಮ್ಮ ಹಕ್ಲಣ್ಣನವರ(Girijamma Haklannanavr), ನಾಗಮ್ಮ ತಾವರಗೊಪ್ಪ(Nagamma Tavaragoppa), ಅಕ್ಕಮ್ಮ ದಿಬ್ಬಣ್ಣನವರ, ಮುಖಂಡರಾದ ರಮೇಶ ದಾಸಪ್ಪ ಮುದಿಯಣ್ಣನವರ, ಚಂದ್ರಪ್ಪ ಜಾಲಗಾರ, ಯಲ್ಲಪ್ಪ ಕಲ್ಲೇರ ಫಯಾಜ್ ಲೋಹಾರ, ಮಂಜುನಾಥ ಗೂರನವರ, ಆರೀಪ್ ಲೋಹಾರ, ಭೀಮಪ್ಪ ಲಮಾಣಿ, ಶಿವರುದ್ರಪ್ಪ ಸಣ್ಣಕಂಬಿ, ಲೊಕೇಶ ಅಗಸಿಬಾಗಿಲು, ಪರಮೇಶ ಸಿಗಡಿ, ಫಕ್ಕೀರಪ್ಪ ತಾವರಗೊಪ್ಪ, ಕೃಷ್ಣಪ್ಪ ಮಡ್ಲೂರ, ಬಸಣ್ಣ ಗದ್ದಿಕೇರಿಮಠ, ಮೂಖಪ್ಪ ತಾವರಗೊಪ್ಪ, ಗೋಪಾಲ ಮಡ್ಲೂರ, ಶಂಭಣ್ಣ ಪೂಜಾರ, ಶರಣಕುಮಾರ ಭಜಂತ್ರಿ, ದಿನೇಶ ಕಾನಮನಿ ಮೊದಲಾದವರು ಇದ್ದರು.