Praveen Nettar Murder Case: ಹತ್ಯೆ ಖಂಡಿಸಿ ಬಜರಂಗದಳ ಕಾರ್ಯಕರ್ತರ ಪ್ರತಿಭಟನೆ

By Kannadaprabha News  |  First Published Jul 29, 2022, 2:02 PM IST

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯನ್ನ\ ಖಂಡಿಸಿ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು..ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಹಿಂದೂ ಕಾರ್ಯಕರ್ತರ ಮೇಲೆ ಪದೇ ಪದೆ ಹಲ್ಲೆ ಪ್ರಕರಣಗಳು ನಡೆಯುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.


ರಾಣಿಬೆನ್ನೂರು (ಜು.29) : ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರಿಯಲ್ಲಿ ನಡೆದ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರವೀNf ಹತ್ಯೆ ಖಂಡಿಸಿ ಸ್ಥಳೀಯ ಭಜರಂಗ ದಳದ ಕಾರ್ಯಕರ್ತರು ಬುಧವಾರ ರಾತ್ರಿ ನಗರದ ಪೊಸ್ಟ್‌ ಸರ್ಕಲ್‌ ಬಳಿ ಮೊಂಬತ್ತಿ ಬೆಳಗಿಸುವ ಮೂಲಕ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಂಘಟನೆಯ ಮುಖಂಡ ಅಜೇಯ ಮಠದ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಹಿಂದೂ ಕಾರ್ಯಕರ್ತರ ಮೇಲೆ ಪದೇ ಪದೆ ಹಲ್ಲೆ ಪ್ರಕರಣಗಳು ನಡೆಯುತ್ತಿರುವುದು ವಿಷಾಧಕರ ಸಂಗತಿ. ಈ ಹಿಂದೆ ಶಿವಮೊಗ್ಗದಲ್ಲಿ ನಡೆದ ಹರ್ಷನ ಕೊಲೆಯೇ ಹಿಂದೂಗಳ ಕೊನೆಯ ಕೊಲೆಯಾಗಲಿದೆ ಎಂದುಕೊಂಡಿದ್ದು ಸುಳ್ಳಾಗಿದ್ದು ಇದೀಗ ಪ್ರವೀಣ ಹತ್ಯೆಯಾಗಿದೆ. ಹಿಂದು ಕಾರ್ಯಕರ್ತರ ಹತ್ಯೆಯ ಹಿಂದೆ ಪಿಎಫ್ ಐ, ಎಸ್‌ಡಿಪಿಐ ಮತಾಂಧ ಸಂಘಟನೆಗಳು ಇವೆಯೆಂಬುದು ಜಗಜ್ಜಞಾಹೀರು ಆಗಿದ್ದರೂ ರಾಜ್ಯ ಸರ್ಕಾರ ಭಯೋತ್ಪಾದಕ ಸಂಘಟನೆಗಳನ್ನು ಬ್ಯಾನ್ ಮಾಡುತ್ತಿಲ್ಲ. ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರೂ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರಾಗಿದ್ದಾರೆ.

ದೂಸ್ರಾ ಮಾತಾಡಿದ್ರೆ ಕೈ ಕಟ್‌, ಇಲ್ದಿದ್ರೆ ಕೊಲೆ; ಸಾಮಾಜಿಕ ಸಂಘಟನೆ ಹೆಸರಿನ ಪಿಎಫ್‌ಐನ ಅಸಲಿ ಮುಖ!

Tap to resize

Latest Videos

undefined

ಎನ್‌ಐ ವರದಿ ಪ್ರಕಾರ ಪಿಎಫ್‌ಐ(PFI) ಹಾಗೂ ಎಸ್‌ಡಿಪಿಐ(SDPI) ಸಂಘಟನೆಗಳು ಭಯೋತ್ಪಾದ(Terrorist) ಸಂಘಟನೆಗಳು ಎಂದು ಕ್ಲೀನ್‌ ಚೀಟ್‌(Clean Chit) ಕೊಟ್ಟರೂ ಸರ್ಕಾರ ಯಾಕೆ ಇವುಗಳನ್ನು ನಿಷೇಧ(Ban) ಮಾಡುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದರೂ ಇಂಥ ಭಯೋತ್ಪಾದಕ ಸಂಘಟನೆಗಳಿಂದ ನಮ್ಮ ಕಾರ್ಯಕರ್ತು ಹತ್ಯೆಯಾಗುತ್ತಿದ್ದಾರೆ. ನಮ್ಮದೇ ಸರ್ಕಾರ ಇದ್ದೂ ರಕ್ಷಣೆ ಮಾಡಲಾಗುತ್ತಿಲ್ಲವೆಂದರೆ ಏನರ್ಥ?

ಪ್ರವೀಣ(Praveen) ಕೊಲೆಗೂ ವಾರದ ಹಿಂದೆ ನಡೆದ ಕೊಲೆಗೂ ಯಾವುದೇ ಸಂಬಂಧವಿಲ್ಲ. ವಾರದ ಹಿಂದೆ ನಡೆದ ಕೊಲೆ ನಂತರ ಪ್ರವೀಣ್‌ನಿಗೆ ಹಲವಾರು ಬೆದರಿಕೆ ಕರೆಗಳು ಬಂದರೂ ಕೂಡ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂಬುದು ಸ್ಪಷ್ಟ... ಪೊಲೀಸ್‌ ಗುಪ್ತಚರ ಇಲಾಖೆ ಸಂಪೂರ್ಣ ನಿರ್ಲಕ್ಷ್ಯತನದಿಂದ ಪ್ರವೀಣ್‌ ಸಾವನ್ನಪ್ಪಿದ್ದಾರೆ. ಆದಷ್ಟುಶೀಘ್ರ ಪ್ರವೀಣ ಹತ್ಯೆ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪಿಎಫ್ಐ ಅನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲು ಆಗ್ರಹಿಸಿದ ಸೂಫಿ ಇಸ್ಲಾಮಿಕ್ ಬೋರ್ಡ್

ಡಾ. ಬಸವರಾಜ ಕೇಲಗಾರ, ಪ್ರಕಾಶ ಬುರಡಿಕಟ್ಟಿ, ನಾಗರಾಜ ಕೊರವರ, ಮಾಲತೇಶ ಗೌಡರ, ಮಹೇಶ ಚಕ್ರಸಾಲಿ, ಮಂಜುನಾಥ ಉಪ್ಪಾರ, ರಾಘವೇಂದ್ರ ಬಗಾಡೆ, ಮನೋಜ ಡೊಳ್ಳಿನ, ಕಿರಣ ಲಮಾಣಿ ಮತ್ತಿತರರಿದ್ದರು.

click me!