ಗುಡ್ ನ್ಯೂಸ್ : ಮನೆ ಬಾಗಿಲಿಗೆ ಆಸ್ಪತ್ರೆ ಸೇವೆ ಆರಂಭ

By Suvarna News  |  First Published Aug 17, 2020, 1:27 PM IST

ಜನತೆಗೆ ಇಲ್ಲಿದೆ ಗುಡ್ ನ್ಯೂಸ್. ಅದೇನೆಂದರೆ ಮನೆ ಬಾಗಿಲಿಗೆ ಇನ್ಮುಂದೆ ಆಸ್ಪತ್ರೆಯ ಸೌಲಭ್ಯಗಳು ದೊರೆಯಲಿವೆ. ಕೊರೋನಾ ಸಂದರ್ಭದಲ್ಲಿ ಇದು ಹೆಚ್ಚು ಅನುಕೂಲವಾಗಲಿದೆ.


ತರೀಕೆರೆ (ಆ.17): ಮಂಗಳೂರು ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ, ಪಟ್ಟಣದ ಸಂಜೀವಿನಿ ಹೆಲ್ತ್‌ಕೇರ್‌ನಿಂದ ವೈದ್ಯರೊಂದಿಗೆ ದೂರವಾಣಿ ಮತ್ತು ವೀಡಿಯೋ ಸಮಾಲೋಚನೆ ಕೊಠಡಿ, ಪ್ರಯೋಗಾಲಯ ಸೇವೆಗಳು, ಹಿರಿಯ ನಾಗರಿಕರಿಗೆ ಆರೈಕೆ ಸೇವಾ ಕೇಂದ್ರದ ಉದ್ಘಾಟನೆ ಮಾಡಲಾಗಿದೆ.

ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಧಾನಪರಿಷತ್‌ ಉಪಸಭಾಪತಿ ಎಸ್‌.ಎಲ್‌.ಧರ್ಮೇಗೌಡ ಮಾತನಾಡಿ, ತರೀಕೆರೆ ತಾಲೂಕಿನಲ್ಲಿ ಇಂತಹ ಒಂದು ಆಸ್ಪತ್ರೆ ಅಗತ್ಯವಿತ್ತು. ಈ ಆಸ್ಪತ್ರೆಯಲ್ಲಿ ಮನೆ ಬಾಗಿಲಿಗೆ ಸೇವೆ ಸೌಲಭ್ಯ ಕಲ್ಪಿಸಿರುವುದು ಒಳ್ಳೆಯದು. ಹಿರಿಯ ನಾಗರಿಕರಿಗೆ ಮನೆಗೇ ತೆರಳಿ ರಕ್ತ ಪರೀಕ್ಷೆ, ಔಷಧ ನೀಡುವುದು ಉತ್ತಮ ಕಾರ್ಯವಾಗಿದೆ ಎಂದು ತಿಳಿಸಿದರು.

Tap to resize

Latest Videos

ಸಮುದಾಯಕ್ಕೆ ಎಂಟ್ರಿ ಕೊಟ್ಟ ಕೊರೋನಾ : ಮುಂದಿವೆ ಡೇಂಜರ್ ಡೇ..

ಮಾಜಿ ಶಾಸಕ ಜಿ.ಎಚ್‌.ಶ್ರೀನಿವಾಸ್‌ ಮಾತನಾಡಿ, ಯೆನೆಪೋಯ ಆಸ್ಪತ್ರೆ ಒಳ್ಳೆಯ ಸೇವೆ ನೀಡುತ್ತಿದೆ. ಬಡವರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡುತ್ತಿದೆ. ಸ್ಥಳೀಯವಾಗಿ ಇಂತಹ ಅನುಕೂಲ ಕಲ್ಪಿಸಿರುವುದು ಉತ್ತಮ ಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಟಿ.ಎಚ್‌.ಶಿವಶಂಕರರಪ್ಪ ಮಾತನಾಡಿ, ಪಟ್ಟಣದ ಸಂಜೀವಿನಿ ಹೆಲ್ತ್‌ಕೇರ್‌ ಆಸ್ಪತ್ರೆಯು ಮಂಗಳೂರಿನ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಜೊತೆಗೆ ಒಡಂಬಡಿಕೆ ಮಾಡಿಕೊಂಡಿರುವುದು ಉತ್ತಮ ಕಾರ್ಯವಾಗಿದೆ. ಆಸ್ಪತ್ರೆ ಚೇರ್ಮನ್‌ ಸೆರ್ಮದ್‌ ಉಲ್ಲಾ ಖಾನ್‌ ಅವರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿ ಇದ್ದಾರೆ ಎಂದರು.

ಬೆಳಗಾವಿ: ಸೈಕಲ್‌ನಲ್ಲಿ ಕೊರೋನಾ ಶಂಕಿತನ ಶವ ಸಾಗಿಸಿ ಅಂತ್ಯಕ್ರಿಯೆ

ಸಂಜೀವಿನಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕರಾದ ಮೊಹಮದ್‌ ಬಿಲಾಲ್‌ ಖಾನ್‌ ಮಾತನಾಡಿದರು.ಮಾಜಿ ಪುರಸಭಾಧ್ಯಕ್ಷ ಎಂ.ನರೇಂದ್ರ, ಜಿಪಂ ಮಾಜಿ ಅಧ್ಯಕ್ಷ ಕೆ.ಆರ್‌.ಧೃವಕುಮಾರ್‌, ಯೆ.ಮೆ.ಕಾ.ಅ.ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್‌ ಶೇಟ್‌, ಯೆ.ಮೆ.ಕಾ.ಅ. ಆಸ್ಪತ್ರೆ ಮಾರುಕಟ್ಟೆನಿರ್ವಾಹಕ ವಿಜಯಾನಂದ ಶೆಟ್ಟಿ, ಆಸ್ಪತ್ರೆ ಚೇರ್‌ಮನ್‌ ಸೆರ್ಮದ್‌ ಉಲ್ಲಾ ಖಾನ್‌, ಸಿಇಒ ಡಾ.ಸಫಾ ಮರಿಯಾಮ್‌ ಭಾಗವಹಿಸಿದ್ದರು.

click me!