ಸವಣೂರು: ಪಾಕಿಸ್ತಾನದ ಧ್ವಜಾರೋಹಣದ ವಿಡಿಯೋ ಶೇರ್‌ ಮಾಡಿದ್ದ ಆರೋಪಿ ಬಂಧನ

By Kannadaprabha NewsFirst Published Aug 17, 2020, 1:00 PM IST
Highlights

ಪಾಕಿಸ್ತಾನದಲ್ಲಿ ದ್ವಜಾರೋಹಣ ನೆರವೇರಿಸಿದ್ದ ವಿಡಿಯೋ ಶೇರ್‌ ಮಾಡಿದ ವ್ಯಕ್ತಿ|  ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಾರಡಗಿ ಗ್ರಾಮದ ಬಂಧಿತ ಯುವಕ| ಆರೋಪಿಯನ್ನ ಬಂಧಿಸಿದ ಪೊಲೀಸರು| 

ಸವಣೂರು(ಆ.17): ಭಾರತದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ ಆಚರಿಸುತ್ತಿರುವ ಸಂದರ್ಭದಲ್ಲಿ ಸವಣೂರು ತಾಲೂಕಿನ ಕಾರಡಗಿ ಗ್ರಾಮದ ಯುವಕನೊಬ್ಬ ತನ್ನ ಫೇಸ್‌ಬುಕ್ ಅಕೌಂಟ್‌ನಲ್ಲಿ ಉದ್ದೇಶ ಪೂರ್ವಕವಾಗಿ ಪಾಕಿಸ್ತಾನದಲ್ಲಿ ದ್ವಜಾರೋಹಣ ನೆರವೇರಿಸಿದ್ದ ವಿಡಿಯೋವೊಂದನ್ನು ಶೇರ್‌ ಮಾಡಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾನೆಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ. 

ವಿಡಿಯೋ ಶೇರ್‌ ಮಾಡಿಕೊಂಡಿರುವ ಮಲ್ಲಿಕ್‌ ರೆಹಾನ್ ಹೂಲಗೂರ ಎಂಬಾತನ ವಿರುದ್ಧ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಕಾರಡಗಿ ಗ್ರಾಮದ ಗದಿಗೆಪ್ಪ ಕುರುವತ್ತಿ ದೂರು ನೀಡಿದ್ದಾರೆ. 

'ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ'

ಆರೋಪಿ ಮಲ್ಲಿಕ್‌ ರೆಹಾನ್ ಎಂಬಾತ ಔರಂಗಜೇಬಖಾನ್ ಫೇಸ್‌ಬುಕ್ ಅಕೌಂಟ್‌ನಿಂದ ಪಾಕಿಸ್ತಾನದ ಶಾಲೆಯೊಂದರ ದ್ವಜಾರೋಹಣದ ವಿಡಿಯೋ ಶೇರ್ ಮಾಡುವ ಮೂಲಕ ಭಾರತೀಯರ ಮನಸ್ಸಿಗೆ ನೋವುಂಟು ಮಾಡಿ ಸಮುದಾಯಗಳ ಮಧ್ಯ ಶಾಂತಿ ಕದಡಲು ಮುಂದಾಗಿದ್ದಾನೆ ಎಂದು ಆರೋಪಿಸಲಾಗಿದೆ. ಸವಣೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸಿದ್ದಾರೆ.
 

click me!