Davanagere: ಕಾಳಾಪುರ ಗಲಾಟೆ ತನಿಖೆ ಮುಗಿಸಿ, ಮಗಳ ಮನೆಗೆ ಹೊರಟ್ಟಿದ್ದ ಎಎಸ್ಐ ಅಪಘಾತದಲ್ಲಿ ಸಾವು

By Suvarna News  |  First Published Feb 4, 2023, 9:58 PM IST

ಮಗಳನ್ನು ನೋಡ್ಕೊಂಡು ಬರೋಣ ಎಂದು ಮಗಳ ಮನೆಗೆ ಹೊರಟಿದ್ದ ಎಎಸ್ ಐ ಬೈಕ್ ಅಪಘಾತದಲ್ಲಿ ದಾರುಣವಾಗಿ ಸಾವನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಹೊರವಲಯದ ಚಿನ್ನು ಡಾಬಾ ಬಳಿ ನಡೆದಿದೆ.


ವರದಿ : ವರದರಾಜ್ , ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಫೆ.4): ಮಗಳನ್ನು ನೋಡ್ಕೊಂಡು ಬರೋಣ ಎಂದು ಮಗಳ ಮನೆಗೆ ಹೊರಟಿದ್ದ ಎಎಸ್ ಐ ಬೈಕ್ ಅಪಘಾತದಲ್ಲಿ ದಾರುಣವಾಗಿ ಸಾವನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಹೊರವಲಯದ ಚಿನ್ನು ಡಾಬಾ ಬಳಿ ನಡೆದಿದೆ. ಎರಡು ಬೈಕ್ ನಡುವೆ ಪರಸ್ಪರ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ವಿಜಯನಗರ ಜಿಲ್ಲೆಯ ಹಂಪಿ ನಿವಾಸಿ ಶಬೀರ್ ಹುಸೇನ್ (59) ದಾರುಣವಾಗಿ ಮೃತಪಟ್ಟಿದ್ದಾರೆ.

Tap to resize

Latest Videos

53 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಅಪ್ರಾಪ್ತ ಬಾಲಕ!

ಕೊಟ್ಟೂರು ತರಳುಬಾಳು ಹುಣ್ಣಿಮೆ ಮೆರವಣಿಗೆ ವೇಳೆ ಕಾಳಾಪುರದಲ್ಲಿ ನಡೆದಿದ್ದ ಗಲಾಟೆಯ ವಿಚಾರವಾಗಿ ತನಿಖೆಗೆ ಮೃತ ಶಬೀರ್ ಹುಸೇನ್ ಆಗಮಿಸಿದ್ದರು. ವಿಚಾರಣೆ ಮುಗಿಸಿ ಬಳಿಕ ಮಗಳು ಮನೆಗೆ ಹೊರಟಿದ್ದ ವೇಳೆ ಅಪಘಾತವಾಗಿ ದಾರುಣ ಅಂತ್ಯ ಕಂಡಿದ್ದಾರೆ. ಇಂದು ಬೆಳಗ್ಗೆ ಚಿತ್ರದುರ್ಗದಲ್ಲಿನ ಮಗಳ ಮನೆಗೆ ಹೊರಟ್ಟಿದ್ದ ವೇಳೆ ಬೈಕ್ ಅಪಘಾತವಾಗಿದ್ದು, ಬೈಕ್ ಡಿಕ್ಕಿ ರಭಸಕ್ಕೆ ಶಬ್ಬೀರ್ ಹುಸೇನ್ ತಲೆಗೆ ಗಂಭೀರ ಗಾಯಗಳಾಗಿ ತಿವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದರು.

ಕಾಳಮ್ಮ ದೇವಾಲಯದಲ್ಲಿ ಕಳ್ಳತನ, 2.5 ಕೋಟಿ ಮೌಲ್ಯದ ದೇವರ ಆಭರಣ ಕಳವು

ಇನ್ನೊಂದು ಬೈಕಿನಲ್ಲಿದ್ದ ಇಬ್ಬರು ಬೈಕ್ ಸವಾರರಿಗೆ ಗಂಭೀರ ಗಾಯಗಳಾಗಿದ್ದು, ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೃತ ಶಬ್ಬೀರ್ ಹುಸೇನ್ ನನ್ನು ಕಳೆದುಕೊಂಡು ಇಡೀ ವಿಜಯನಗರ ಪೋಲಿಸರು ಕಂಬನಿಮಿಡಿದಿದ್ದಾರೆ. ಇದರ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

click me!