ಎಸ್‌ಡಿಪಿಐ ಒಂದು ದೇಶದ್ರೋಹಿ, ಸಮಾಜಘಾತುಕ ಪಕ್ಷವಾಗಿದೆ. ಇಸ್ಲಾಮಿಕ್ ಸಂಸ್ಕೃತಿ ಹೇಗಿದೆ ಅಂದರೆ ಹಿಂದೂಗಳನ್ನು ಕೊಲೆ ಮಾಡಿದವರಿಗೆ ಪ್ರಶಸ್ತಿ, ಸನ್ಮಾನ ಕೊಡುವಂತದ್ದು ಆಗಿದೆ.
ಬಾಗಲಕೋಟೆ (ಫೆ.19): ಕರ್ನಾಟಕದಲ್ಲಿ ಈವರೆಗೆ ನಡೆದಿರುವ 23 ಹಿಂದುಗಳ ಕೊಲೆ ಪ್ರಕರಣದಲ್ಲಿ ಬರೋಬ್ಬರಿ 9 ಕೊಲೆ ಪ್ರಕರಣಗಳಲ್ಲಿ ಸೋಷಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಹೆಸರಿದೆ. ಎಸ್‌ಡಿಪಿಐ ಒಂದು ದೇಶದ್ರೋಹಿ, ಸಮಾಜಘಾತುಕ ಪಕ್ಷವಾಗಿದೆ. ಇಸ್ಲಾಮಿಕ್ ಸಂಸ್ಕೃತಿ ಹೇಗಿದೆ ಅಂದರೆ ಹಿಂದೂಗಳನ್ನು ಕೊಲೆ ಮಾಡಿದವರಿಗೆ ಪ್ರಶಸ್ತಿ, ಸನ್ಮಾನ ಕೊಡುವಂತದ್ದು ಆಗಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಈ ಕುರಿತು ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್ ಡಿ ಪಿ ಐ ಒಂದು ದೇಶದ್ರೋಹಿ, ಸಮಾಜಘಾತಕ ಪಕ್ಷವಾಗಿದೆ. ಇಡೀ ಕರ್ನಾಟಕದ 23 ಕೊಲೆ ಪ್ರಕರಣಗಳಲ್ಲಿ 9 ಪ್ರಕರಣದ ಎಫ್‌ಐಆರ್‌ನಲ್ಲಿ ಎಸ್‌ಡಿಪಿಐ ಹೆಸರಿದೆ. ಎಸ್‌ಡಿಪಿಐ ರಾಜ್ಯಾಧ್ಯಕ್ಷ ಮಂಗಳೂರಿನ ಪುತ್ತೂರಿನಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಫೀದ್ ಬೆಳ್ಳಾರಿಯನ್ನು ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಾರೆ. ನೇರವಾಗಿ ಕೊಲೆಗೆ ಸಹಕಾರ ಹಾಗೂ ಪ್ರೋತ್ಸಾಹವನ್ನು ಕೊಟ್ಟಂಗೆ ಆಯ್ತು. ಇದು ಮೊದಲ ಬಾರಿಯಲ್ಲ ಹಿಂದಿನಿಂದಲೂ ಇಸ್ಲಾಮಿಕ್ ಕಿಡಿಗೇಡಿಗಳು ಗುಂಡಾಗಳಿಗೆ ಮಣೆ ಹಾಕುವ ಸಂಸ್ಕೃತಿ ಸಂಪ್ರದಾಯ ಇಸ್ಲಾಂನಲ್ಲಿ ನಡೆದುಕೊಂಡು ಬರುತ್ತಿದೆ ಎಂದು ಆರೋಪಿಸಿದರು.
undefined
ಕಾರ್ಕಳದಿಂದ ಪ್ರಮೋದ್ ಮುತಾಲಿಕ್ ಸ್ಪರ್ಧೆ: ಶ್ರೀರಾಮ ಸೇನೆಯಲ್ಲಿ ಅಸಮಾಧಾನದ ಹೊಗೆ
ಕೇರಳದಲ್ಲಿ 9 ಹಿಂದೂ ಮೀನುಗಾರರ ಕೊಲೆಯಾಯಿತು. ಈ ಪೈಕಿ ಮೂವರು ಕೊಲೆ ಆರೋಪಿಗಳನ್ನು ಎಸ್‌ಡಿಪಿಐನಿಂದ ಗ್ರಾಮ ಪಂಚಾಯತಿ ಸದಸ್ಯರನ್ನಾಗಿ ಮಾಡಲಾಯಿತು. ಇಸ್ಲಾಮಿಕ್ ಸಂಸ್ಕೃತಿ ಹೇಗಿದೆ ಅಂದರೆ ಹಿಂದೂಗಳನ್ನು ಕೊಲೆ ಮಾಡಿದವರಿಗೆ ಪ್ರಶಸ್ತಿ, ಸನ್ಮಾನ ಕೊಡುವಂತದ್ದು ಆಗಿದೆ. ದೇಶದಲ್ಲಿ ಚುನಾವಣಾ ಆಯೋಗ ಏನು ಮಾಡುತ್ತಿದೆ ಎಂಬುದು ತಿಳಿಯುತ್ತಿಲ್ಲ. ಈ ರೀತಿ ಕೊಲೆಗಡುಕರಿಗೆ ಮಾನ್ಯತೆ ಕೊಡುವಂತಹದ್ದು ಎಷ್ಟರಮಟ್ಟಿಗೆ ಸರಿ. ಬಿಜೆಪಿ ಸರ್ಕಾರ ಕೂಡ ಇಂತಹ ಆರೋಪಿಗಳಿಗೆ ಟಿಕೆಟ್ ಕೊಡದಂತೆ ಎಸ್‌ಡಿಪಿಐ ರದ್ದು ಮಾಡುವಂತೆ ಮನವಿ ಕೊಡಬೇಕು. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ಮನವಿ ಕೊಡುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ಮುಸ್ಲಿಂ ರುದ್ರಭೂಮಿಗೆ ಹಣ ಯಾಕೆ ಕೊಟ್ರಿ.? : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡಿಸಿದ ಬಜೆಟ್ ಅನ್ನು ಸ್ವಾಗತಿಸುತ್ತೇನೆ. ಆದರೆ, ಎರಡು ವಿಷಯಗಳಲ್ಲಿ ನಾನು ಖಂಡನೆ ವ್ಯಕ್ತ ಮಾಡುತ್ತೇನೆ. ಒಂದು ಮುಸ್ಲಿಂ ಸ್ಮಶಾನಕ್ಕಾಗಿ 10 ಕೋಟಿ ಘೋಷಣೆ ಮಾಡಿದ್ದು ಖಂಡಿಸುತ್ತೇನೆ. ಇದೇ ಅನುದಾನ ಹಿಂದೂ ರುದ್ರಭೂಮಿಗೆ ಯಾಕಿಲ್ಲ.? ಈಗಾಗಲೇ ವಕ್ಫ್ ಬೋರ್ಡ್‌ನಲ್ಲಿ ಸಾವಿರಾರು ಕೋಟಿ ಇದೆ. ವಕ್ಫ್ ಬೋರ್ಡ್ ಇರೋದೆ ಮುಸ್ಲಿಂರ ಮಸೀದಿ, ದರ್ಗಾ, ಸ್ಮಶಾನ, ಅವರ ಶಾಲಾ- ಕಾಲೇಜುಗಳನ್ನು ಅಭಿವೃದ್ಧಿ ಮಾಡುವುದಕ್ಕಾಗಿ. ಮತ್ತೆ ಹೆಚ್ಚುವರಿ 10 ಕೋಟಿ ಯಾಕೆ ಕೊಡಲಾಗಿದೆ. ಅದರ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ ಎರಡನೆಯದಾಗಿ ಮುಸ್ಲಿಂರಿಗಾಗಿ ಹೊಸ ಹಾಗೂ ವಸತಿ ಶಾಲೆಗಳನ್ನ ಹಣ ಬಿಡುಗಡೆ ಮಾಡಿದ್ದು ಖಂಡನೀಯವಾಗಿದೆ. ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಉರ್ದು ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಇಂತಹ ಸಮಯದಲ್ಲಿ ಮತ್ತೆ ಮುಸ್ಲಿಂರನ್ನು ಒಲೈಸುವಂತಹ ಕಾರ್ಯ ಬಿಜೆಪಿಗೆ ಶೋಭೆ ತರುವಂತದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದುಡ್ಡಿಗೋಸ್ಕರ ಕಾರ್ಕಳಕ್ಕೆ ಬಂದು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ: ಪ್ರಮೋದ್ ಮುತಾಲಿಕ್
ಕರಾವಳಿ ಭಾಗದ ಸಂಸ್ಕೃತಿ ನಿರ್ಲಕ್ಷ್ಯ: ಕರಾವಳಿ ಭಾಗದಲ್ಲಿ ನಮ್ಮ ಸಂಸ್ಕ್ರತಿ, ಸಂಪ್ರದಾಯ ಇದೆ. ಇದನ್ನ ಉಳಿಸುವ ಸಾಕಷ್ಟು ಪ್ರಕ್ರಿಯೆ ಕರಾವಳಿ ಭಾಗದಲ್ಲಿವೆ. ಅಲ್ಲಿ ಕೋಲಾ ಆಚರಣೆ ಪದ್ದತಿ ಇದ್ದು, ದೇವರು-ದೈವ ಪದ್ದತಿ ಹಾಗೂ ಯಕ್ಷಗಾನ ಕಲೆಯ ಪ್ರದರ್ಶನ ಇರುತ್ತದೆ. ಇಂತಹ ವೈಶಿಷ್ಟ್ಯ ಪೂರ್ಣವಾಗಿರುವ ಸಂಸ್ಕ್ರತಿಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಇಡೀ ರಾಜ್ಯದಲ್ಲಿ ಬಯಲಾಟ, ನಾಟಕಕಾರರಿಗೆ, ಕಲಾಕಾರರಿಗೆ ಪ್ರೋತ್ಸಾಹ ಕೊಡುವ ಪ್ರಕ್ರಿಯೆ ಬಜೆಟ್‌ನಲ್ಲಿ ಯಾವುದೂ ಇಲ್ಲ. ಕೆಲವು ಕೊರತೆಗಳ ಮದ್ಯದಲ್ಲಿ ಟೋಟಲ್ ಬಜೆಟ್ ಸ್ವಾಗತಾರ್ಹ ಎಂದು ಮುತಾಲಿಕ್ ಹೇಳಿದರು.