ಹನಿಟ್ರ್ಯಾಪ್ ಕೇಸ್ : ವಿಡಿಯೋ ಮೂಲಕ ಬೆತ್ತಲಾದವಳು ಅರೆಸ್ಟ್

Suvarna News   | Asianet News
Published : Jul 04, 2021, 03:30 PM IST
ಹನಿಟ್ರ್ಯಾಪ್ ಕೇಸ್ : ವಿಡಿಯೋ ಮೂಲಕ ಬೆತ್ತಲಾದವಳು ಅರೆಸ್ಟ್

ಸಾರಾಂಶ

 ಹನಿಟ್ರಾಪ್ ಆರೋಪ - ಪುತ್ತೂರಿನಲ್ಲಿ ಯುವತಿ ಅರೆಸ್ಟ್ ಸೇಲ್ಸ್ ಮ್ಯಾನ್‌ಗೆ ಹನಿಟ್ರ್ಯಾಪ್ ಮಾಡಿ 30 ಲಕ್ಷಕ್ಕೆ ಬೇಡಿಕೆ ಕಾರ್ಕಳದವಳೆಂದು ಪರಿಚಯ ಮಾಡಿಕೊಂಡಿದ್ದ ತನಿಶಾ ಅರೆಸ್ಟ್

ಮಂಗಳೂರು(ಜು.04) : ಹನಿಟ್ರಾಪ್ ಆರೋಪದಲ್ಲಿ  ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಗ್ರಾಮಾಂತರ ಪೊಲೀಸರು ಯುವತಿಯೋರ್ವಳನ್ನು ಇಂದು ಬಂಧಿಸಿದ್ದಾರೆ. 

ಪುತ್ತೂರಿನಲ್ಲಿ ಸೇಲ್ಸ್ ಮ್ಯಾನ್ ಒಬ್ಬರಿಗೆ ಹನಿಟ್ರಾಪ್ ಮಾಡಿ ಬಳಿಕ 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂದ  ಕಾರ್ಕಳದವಳೆಂದು ಪರಿಚಯ ಮಾಡಿಕೊಂಡಿದ್ದ ತನಿಶಾ ಎಂಬಾಕೆಯನ್ನು ಬಂಧಿಸಲಾಗಿದೆ. 

'ಮನೆಗೆ ಬಾ ಎಂದು ಕರೆಸಿ ವಿಡಿಯೋ ಮಾಡಿದ್ದ' ಹುಬ್ಬಳ್ಳಿ ಯುವತಿ ಪ್ರತ್ಯಕ್ಷ

ಇನ್ನು ಈಕೆಯ ತಂಡದಲ್ಲಿದ್ದ ಹನೀಫ್, ಮಹಮ್ಮದ್ ಕುಂಇ, ಶಾಫಿ, ಅಝರ್, ಸಯೀದ್ ಮೋನು, ನಾಸೀರ್ ಗಾಗಿ ಹುಡುಕಾಟ ನಡೆಸಲಾಗುತ್ತಿದೆ. 

ಮಂಗಳೂರು: ಗಂಡಸರ ವಿಕ್ನೇಸ್.. ಹನಿ..ಹನಿ..ಸವಿಯಲು ಹೋದವನಿಗೆ ಸಿಕ್ಕಿದ್ದೇನು?

ಯುವಕನ ಜೊತೆ ವಿಡಿಯೋ ಕಾಲ್ ಮೂಲಕ ನಗ್ನವಾಗಿ ಮಾತುಕತೆ ನಡೆಸಿ,  ಬಳಿಕ ಅದನ್ನ ರೆಕಾರ್ಡ್ ಮಾಡಿ ಸಾಮಾಜಿಕ ತಾಣಗಳಲ್ಲಿ ಬಿಡುವ ಬೆದರಿಕೆ ಹಾಕಿದ್ದರು. ಈ ನಿಟ್ಟಿನಲ್ಲಿ ಪುತ್ತೂರಿನ ವ್ಯಕ್ತಿ ದೂರು ದಾಖಲಿಸಿದ್ದು, ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಯುವತಿ ಸಿಕ್ಕಿ ಬಿದ್ದಾಳೆ. 

ಸದ್ಯ ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 

PREV
click me!

Recommended Stories

'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ
ಮೈಸೂರಿನ ಪುಟ್ಟ ರಾಜಕುಮಾರನ ಹುಟ್ಟುಹಬ್ಬ: ವಿಶೇಷ ಫೋಟೊಗಳನ್ನು ಶೇರ್ ಮಾಡಿದ ಮಹಾರಾಣಿ