ಚಿಕ್ಕಮಗಳೂರು : ಅಪ್ರಾಪ್ತೆ ಮೇಲೆ ಅತ್ಯಾಚಾರ-42 ಅರೆಸ್ಟ್ , 30 ಚಾರ್ಜ್‌ಶೀಟ್

By Suvarna News  |  First Published Jul 4, 2021, 3:10 PM IST
  • ಚಿಕ್ಕಮಗಳೂರಿನಲ್ಲಿ ನಡೆದ ಅಪ್ರಾಪ್ತೆ ಬಾಲಕಿ ಮೇಲೆ ಕಾಮಾಂಧರ ಕ್ರೌರ್ಯ ಪ್ರಕರಣ
  • ಪ್ರಕರಣಕ್ಕೆ ಸಂಬಂಧಿಸಿದಂತೆ  30 ಚಾರ್ಜ್ ಶೀಟ್ ಸಲ್ಲಿಕೆ 
  • ಇದುವರೆಗೆ 42 ಮಂದಿ ಬಂಧನವಾಗಿದ್ದು ಇನ್ನು ಹಲವರ ಬಂಧನ ಸಾಧ್ಯತೆ 

ಚಿಕ್ಕಮಗಳೂರು (ಜು.04):  ಚಿಕ್ಕಮಗಳೂರಿನಲ್ಲಿ ನಡೆದ ಅಪ್ರಾಪ್ತೆ ಬಾಲಕಿ ಮೇಲೆ ಕಾಮಾಂಧರ ಕ್ರೌರ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ  30 ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. 

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ  ಕಳೆದ 5 ತಿಂಗಳ ಹಿಂದೆ ಬೆಳಕಿಗೆ ಬಂದಿದ್ದ ಅಪ್ರಾಪ್ತೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಇದುವರೆಗೆ 42 ಮಂದಿ ಬಂಧನವಾಗಿದ್ದು ಇನ್ನು ಹಲವರ ಬಂಧನ ಸಾಧ್ಯತೆ ಇದೆ. 

Tap to resize

Latest Videos

ಚಿಕ್ಕಮಗಳೂರು; ಗೋರಂಟಿ ಮಾಸುವ ಮುನ್ನವೇ ನವವಿವಾಹಿತೆ ಹೆಣವಾಗಿದ್ದಳು

ಸದ್ಯ ಚಿಕ್ಕಮಗಳೂರಿನ ವಿಶೇಷ ಪೋಕ್ಸೋ ಕೋರ್ಟ್ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.  5 ತಿಂಗಳಿನಲ್ಲಿ 42 ಮಂದಿ ಬಂಧನವಾಗಿದ್ದು, ಅತೀ ಹೆಚ್ಚು ಚಾರ್ಜ್ ಶೀಟ್ ಸಲ್ಲಿಕೆಯಾದ ಪ್ರಕರಣ ಇದಾಗಿದೆ.  

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಉಳಿದ ಆರೋಪಿಗಳಾಗಿ ಪೊಲೀಸರು ಬೆನ್ನು ಹತ್ತಿದ್ದು, ಅಪರ ಪೊಲೀಸ್ ವರಿಷ್ಠಾಧಿಕಾರಿ ಶೃತಿ ಸ್ಥಳದಲ್ಲೇ ಮೊಕ್ಕಂ ಹೂಡಿ ತನಿಖೆ ನಡೆಸುತ್ತಿದ್ದಾರೆ. 
 
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ ಕಳೆದ 5 ತಿಂಗಳ ಹಿಂದೆ ಸ್ವಂತ ತಾಯಿಯೇ ತನ್ನ ಅಪ್ರಾಪ್ತ ಮಗಳನ್ನು ಅತ್ಯಾಚಾರಕ್ಕೆ ದೂಡಿದ್ದಳು. ಈ ಪ್ರಕರಣ ಸಂಬಂಧ ಅನೇಕರ ಬಂಧನವಾಗಿತ್ತು. ದಿನದಿನವೂ ಹೊಸ ಹೊಸ ತಿರುವುಗಳನ್ನು ಪ್ರಕರಣ ಪಡೆಯುತ್ತಲೆ ಸಾಗಿತ್ತು. 

click me!