* ಹುತಾತ್ಮ ಯೋಧನ ಶವದ ಪೆಟ್ಟಿಗೆ ಮೇಲೆ ಬಿದ್ದು ಕಣ್ಣೀರಿಟ್ಟ ಪತ್ನಿ
* ಪತ್ನಿ ಹಾಗೂ ತಾಯಿಗೆ ಯೋಧನ ಪಾರ್ಥಿವ ಶರೀರದ ಮೇಲಿದ್ದ ರಾಷ್ಟ್ರಧ್ವಜ ಹಸ್ತಾಂತರ
* ಯೋಧನ ಪಾರ್ಥಿವ ಶರೀರಕ್ಕೆ ಸೆಲ್ಯೂಟ್ ಹೊಡೆದ ಪತ್ನಿ ತಾಯಿ ಹಾಗೂ ಸಹೋದರರು
ವಿಜಯಪುರ(ಜು.04): ಹುತಾತ್ಮ ಯೋಧ ಕಾಶೀರಾಯ ಬೊಮ್ಮನಹಳ್ಳಿ ಅಂತ್ಯಕ್ರಿಯೆ ಇಂದು(ಭಾನುವಾರ) ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಇಂದು(ಭಾನುವಾರ) ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದಿದೆ.
ಯೋಧನ ಪಾರ್ಥಿವ ಶರೀರದ ಮೇಲೆ ಹಾಕಿದ್ದ ರಾಷ್ಟ್ರಧ್ವಜವನ್ನ ಪತ್ನಿ ಹಾಗೂ ತಾಯಿಗೆ ಹಸ್ತಾಂತರ ಮಾಡಲಾಯಿತು. ಯೋಧನ ಪಾರ್ಥಿವ ಶರೀರಕ್ಕೆ ಸೆಲ್ಯೂಟ್ ಹೊಡೆದು ಪತ್ನಿ ತಾಯಿ ಹಾಗೂ ಸಹೋದರರು ಗೌರವ ಸಲ್ಲಿಸಿದ್ದಾರೆ. ಈ ವೇಳೆ ಯೋಧ ಕಾಶೀರಾಯನ ಇಬ್ಬರು ಮಕ್ಕಳೂ ಕೂಡ ಇದ್ದರು.
ವಿಜಯಪುರ: ಯೋಧ ಕಾಶಿರಾಯನ ಅಂತ್ಯಕ್ರಿಯೆಗೆ ಹರಿದು ಬಂದ ಜನಸಾಗರ
ಸೇನೆ ಹಾಗೂ ಸ್ಥಳೀಯ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದ್ದಾರೆ. ಲಿಂಗಾಯತ ವಿಧಿವಿಧಾನ ಮೂಲಕ ಯೋಧನ ಅಂತ್ಯಕ್ರಿಯೆ ನಡೆದಿದೆ. ಯರನಾಳದ ಮಠದ ಶ್ರೀ ಸಂಗನಬಸವ ಸ್ವಾಮೀಜಿ ನೇತೃತ್ವದಲ್ಲಿ ಅಂತ್ಯಕ್ರಿಯೆ ವಿಧಿವಿಧಾನಗಳು ನಡೆದಿವೆ. ವೀರಯೋಧನಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು.
ಹುತಾತ್ಮ ಯೋಧನ ಪತ್ನಿಯ ಶಪತ
ಪತಿಯ ಪಾರ್ಥಿವ ಶರೀರದ ಎದುರು ನಿಂತು ಹುತಾತ್ಮ ಯೋಧನ ಪತ್ನಿ ಸಂಗೀತಾ ಶಪತವೊಂದನ್ನ ಮಾಡಿದ್ದಾರೆ. ಮಗನನ್ನ ಅಪ್ಪನಂತೆ ಸೈನಿಕ ಮಾಡುವೆ ಎಂದು ಪತ್ನಿ ಸಂಗೀತಾ ಅವರು ಶಪತ ಮಾಡಿದ್ದಾರೆ. ಅವರ ಅಪ್ಪ ಅವನನ್ನ ಸ್ಟ್ರಾಂಗ್ ಮಾಡು ಎಂದು ಹೇಳುತ್ತಿದ್ದರು. ನಾನು ಅವನನ್ನ ಸ್ಟ್ರಾಂಗ್ ಮಾಡುತ್ತೇನೆ. ಅವರಪ್ಪ ಹೇಳಿದಂತೆ ಅವನನ್ನು ಸೈನಿಕನನ್ನಾಗಿ ಮಾಡುತ್ತೇವೆ ಎಂದು ಯೋಧನ ಪತ್ನಿ ಸಂಗೀತಾ ಅವರು ತಿಳಿಸಿದ್ದಾರೆ.