ಕೊರೋನಾ ಭೀತಿ: ಇಡೀ ಬ್ಯಾಂಕ್‌ ಸಿಬ್ಬಂದಿ ಹೋಂ ಕ್ವಾರಂಟೈನ್‌

By Kannadaprabha NewsFirst Published Apr 16, 2020, 7:09 AM IST
Highlights
ವಿದೇಶದಿಂದ ಮರಳಿದ ಬ್ಯಾಂಕ್‌ ಸಿಬ್ಬಂದಿಯ ಸಂಬಂಧಿಕರು| ಮಾರ್ಚ್‌ ತಿಂಗಳಲ್ಲಿಯೇ ಆ ವ್ಯಕ್ತಿ ಧಾರವಾಡಕ್ಕೆ ಮರಳಿದ್ದು, ಈ ವಿಷಯ ಬಹಿರಂಗ ಆಗಿರಲಿಲ್ಲ| ಬ್ಯಾಂಕ್‌ ಸಿಬ್ಬಂದಿಯನ್ನ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. 
ಧಾರವಾಡ(ಏ.16): ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಸಿಬ್ಬಂದಿಯ ಸಂಬಂಧಿಕರೊಬ್ಬರು ವಿದೇಶದಿಂದ ಮರಳಿದ್ದು, ಅವರೊಂದಿಗೆ ಸಂಪರ್ಕಕ್ಕೆ ಬಂದ ವಿಷಯವನ್ನು ಮುಚ್ಚಿಟ್ಟ ಹಿನ್ನೆಲೆ ಕರ್ನಾಟಕ ಕಾಲೇಜು ಆವರಣದಲ್ಲಿನ ಬ್ಯಾಂಕ್‌ ಶಾಖೆಯನ್ನು ಬಂದ್‌ ಮಾಡಿ ಅಲ್ಲಿಯ ಎಲ್ಲ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಮಾರ್ಚ್‌ ತಿಂಗಳಲ್ಲಿಯೇ ಆ ವ್ಯಕ್ತಿ ಧಾರವಾಡಕ್ಕೆ ಮರಳಿದ್ದು, ಈ ವಿಷಯ ಬಹಿರಂಗ ಆಗಿರಲಿಲ್ಲ. ಈ ವಿಷಯ ತಿಳಿದ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಕೆ.ಈಶ್ವರ ಜಿಲ್ಲಾಡಳಿತಕ್ಕೆ ಪತ್ರ ಬರೆದು ವಿಷಯ ತಿಳಿಸಿದ್ದಾರೆ. 

ಕೊರೋನಾ ಸಂಕಷ್ಟದಲ್ಲೂ ವೃತ್ತಿ ದ್ರೋಹ ಬಗೆದ ಡಾಕ್ಟರ್‌..!

ಜಿಲ್ಲಾಧಿಕಾರಿಗಳ ಸೂಚನೆಯಂತೆ ಬ್ಯಾಂಕ್‌ಗೆ ಸೋಮವಾರ ಕ್ರಿಮಿನಾಶಕ ದ್ರವ ಸಿಂಪಡಿಸಿ ಶುಚಿಗೊಳಿಸಲಾಗಿದ್ದು, ಬ್ಯಾಂಕ್‌ ಅನ್ನು ಬಂದ್‌ ಮಾಡಲಾಗಿದೆ.ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಲ್ಕು ಜನ ಸಿಬ್ಬಂದಿಯನ್ನು ಮನೆಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. 
 
click me!