Tumkur Bus Accident: ಸಂಜೆ ತುಮಕೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ

By Suvarna News  |  First Published Mar 19, 2022, 3:50 PM IST

*ಬಸ್ ಅಪಘಾತ ಪ್ರಕರಣ 8 ಕ್ಕೂ ಹೆಚ್ಚು ಸಾವಾಗಿದ್ದು ಹಲವರು ತೀವ್ರ ಸ್ವರೂಪದ ಗಾಯಾಳು ಗಳಾಗಿದ್ದಾರೆ
*ತಕ್ಷಣವೇ 13 ಕ್ಕೂ ಹೆಚ್ಚು ಅಂಬ್ಯುಲೆನ್ಸ್ ಗಳನ್ನು ಗಾಯಾಳುಗಳನ್ನು ಅಸ್ಪತ್ರೆಗೆ ಸಾಗಿಸಲು ಕಳುಹಿಸಲಾಗಿದೆ
*ಎಸ್ಪಿ ಹಾಗೂ ಡಿಸಿ ಯವರನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಲು  ಸೂಚಿಸಿದ್ದೇನೆ: ಸಚಿವ ಆರಗ  ಜ್ಞಾನೇಂದ್ರ


ಶಿವಮೊಗ್ಗ (ಮಾ. 19):  ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು  20ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ನಡೆದಿದೆ.  ಈವರೆಗೂ 8 ಮಂದಿಯ ಮೃತರ ಹೆಸರು ಪತ್ತೆಯಾಗಿದೆ. ಈ ಬೆನಲ್ಲೇ ತೀರ್ಥಹಳ್ಳಿಯಲ್ಲಿ  ಪ್ರತಿಕ್ರಿಯಿಸಿರುವ  ತುಮಕೂರು ಉಸ್ತುವಾರಿ ಹಾಗೂ ಗೃಹಸ ಸಚಿವ ಆರಗ ಜ್ಞಾನೇಂದ್ರ ಬಸ್ ಅಪಘಾತ ಪ್ರಕರಣ 8 ಕ್ಕೂ ಹೆಚ್ಚು ಸಾವಾಗಿದ್ದು ಹಲವರು ತೀವ್ರ ಸ್ವರೂಪದ ಗಾಯಾಳುಗಳಾಗಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಸಂಜೆ ತುಮಕೂರಿಗೆ ಭೇಟಿ ನೀಡಿ ಸಚಿವರು ಪರಿಶೀಲನೆ ನಡೆಸಲಿದ್ದಾರೆ. 

"ತಕ್ಷಣವೇ 13 ಕ್ಕೂ ಹೆಚ್ಚು ಅಂಬ್ಯುಲೆನ್ಸ್ ಗಳನ್ನು ಗಾಯಾಳುಗಳನ್ನು ಅಸ್ಪತ್ರೆಗೆ ಸಾಗಿಸಲು ಕಳುಹಿಸಲಾಗಿದೆ. ಎಸ್ಪಿ ಹಾಗೂ ಡಿಸಿ ಯವರನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಲು  ಸೂಚಿಸಿದ್ದೇನೆ.  ಗಾಯಾಳುಗಳಿಗೆ ತುಮಕೂರು ಅಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಬೆಂಗಳೂರು ಅಸ್ಪತ್ರೆಗೆ ಕಳುಹಿಸಲು ಸೂಚನೆ ನೀಡಿದ್ದೇನೆ" ಎಂದು ಹೇಳಿದ್ದಾರೆ. 

Tap to resize

Latest Videos

ಇದನ್ನೂ ಓದಿ: ತುಮಕೂರು ಘಟನೆ ಬೆನ್ನಲ್ಲೇ ಕರ್ನಾಟಕದಲ್ಲಿ ಮತ್ತೆರಡು ಕಡೆ ಬಸ್‌ ಅಪಘಾತ!

ಖಾಸಗಿ ಬಸ್ ವೈ.ಎನ್ ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ  ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಈ ದರ್ಘಟನೆ ಸಂಭವಿಸಿದೆ. ದುರ್ಘಟನೆಯಲ್ಲಿ ಗಾಯಾಳುಗಳನ್ನ ಸ್ಥಳೀಯರು ರಕ್ಷಿಸಿ ಆಸ್ಪತ್ರೆ ದಾಖಲಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 

ಘಟನಾ ಸ್ಥಳಕ್ಕೆ ಪಾವಗಡ ಪೊಲೀಸರು ದೌಡಾಯಿಸಿದ್ದಾರೆ. ಬಸ್‌ನಲ್ಲಿ 80ಕ್ಕೂ ಹಚ್ಚು ಜನರು ಪ್ರಯಾಣಿಸುತ್ತಿದ್ದರು. ಬಸ್‌ನ ಟಾಪ್ ಮೇಲೂ ಕೂಡ ಕುಳಿತಿದ್ದರು ಎಂದು ತಿಳಿದು ಬಂದಿದೆ. ಬಸ್ ಪಲ್ಟಿಯಾಗುತ್ತಿದ್ದಂತೆ ಚಾಲಕ ಹಾಗೂ ನಿರ್ವಾಹಕ ಪರಾರಿಯಾಗಿದ್ದಾರೆ. ವೈ.ಎನ್ ಹೊಸಕೋಟೆ ಮೂಲದ ಬಸ್ ಇದಾಗಿದ್ದು ಬಸ್ ಮಾಲೀಕನ ಹೆಸರು ಶ್ರೀನಿವಾಸ್ ಅಂತ ತಿಳಿದು ಬಂದಿದೆ. 

ಇದನ್ನೂ ಓದಿ: Tumakuru Accident: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ: ಸಚಿವ ಶ್ರೀರಾಮುಲು

ದುರ್ಘಟನೆಯಲ್ಲಿ ವಿದ್ಯಾರ್ಥಿಗಳೂ ಕೂಡ ಮೃತಪಟ್ಟಿದ್ದಾರೆ. ಮೃತರ ಹೆಸರು ಅಮೂಲ್ಯ ಪೋತಗಾನಹಳ್ಳಿ (16), ಅಜಿತ್ ಸೂಲನಾಯಕನಹಳ್ಳಿ(18), ಕಲ್ಯಾಣ್ (18) ವೈ.ಎನ್ ಹೊಸಕೋಟೆ, ಶಹನವಾಜ್ (18) ಬೆತ್ತರಹಳ್ಳಿ ಅಂತ ಗುರುತಿಸಲಾಗಿದೆ. ಇನನ್ನುಳಿದವರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಪಾವಗಡ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಶಾಸಕ ವೆಂಕಟರಮಣಪ್ಪ ಭೇಟಿ ನೀಡಿ, ಗಾಯಾಳುಗಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡುವಂತೆ ವೈದ್ಯರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ನಾಗರಾಜು ಟಿ.ಆರ್ ಬಸ್(KA06-C 8933) ಗೆ ಇನ್‌ಶ್ಯೂರೆನ್ಸ್‌ ಅಪ್ಡೇಟ್ ಇದೆ.  ಒರಿಯಂಟಲ್ ಇನ್ ಶ್ಯೂರೆನ್ಸ್ ಮಾಡಲಾಗಿದೆ. 8-9-2022ರವೆಗೂ ಇನ್‌ಶ್ಯೂರೆನ್ಸ್ ಚಾಲ್ತಿಯಲ್ಲಿದೆ. ಬಸ್ ನೋಂದಣಿ ತುಮಕೂರು ಆರ್.ಟಿ.ಒ ದಿಂದ ಮಧುಗಿರಿ ಆರ್.ಟಿ.ಒಗೆ ವರ್ಗಾವಣೆಯಾಗಿದೆ. ಮೊದಲು ರಘು ಎಂಬುವರ ಹೆಸರಿನಲ್ಲಿದ್ದ ಬಸ್ ಈಗ ನಾಗರಾಜು ಟಿ.ಆರ್ ಹೆಸರಿಗೆ ವರ್ಗಾವಣೆಯಾಗಿದೆ. 2019ರಲ್ಲಿ ನಾಗರಾಜು ಹೆಸರಿಗೆ ಮಾಲೀಕತ್ವ ವರ್ಗಾವಣೆಯಾಗಿದೆ.

click me!