ಇನ್‌ಸ್ಪೆಕ್ಟರ್‌ ನಂದೀಶ್‌ ಅನಾರೋಗ್ಯದಿಂದ ಸಾವು: ಸಚಿವ ಆರಗ ಜ್ಞಾನೇಂದ್ರ

By Govindaraj SFirst Published Oct 30, 2022, 11:48 PM IST
Highlights

ಕೆ.ಆರ್‌.ಪುರಂ ಠಾಣೆ ಇನ್ಸ್‌ಪೆಕ್ಟರ್‌ ನಂದೀಶ್‌ ಅನಾರೋಗ್ಯದಿಂದ ತೀರಿ ಹೋಗಿದ್ದಾರೆ. ನನಗೆ ಇರುವ ಮಾಹಿತಿ ಪ್ರಕಾರ ಅವರ ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. 

ಶಿವಮೊಗ್ಗ (ಅ.30): ಕೆ.ಆರ್‌.ಪುರಂ ಠಾಣೆ ಇನ್ಸ್‌ಪೆಕ್ಟರ್‌ ನಂದೀಶ್‌ ಅನಾರೋಗ್ಯದಿಂದ ತೀರಿ ಹೋಗಿದ್ದಾರೆ. ನನಗೆ ಇರುವ ಮಾಹಿತಿ ಪ್ರಕಾರ ಅವರ ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋ ಬಗ್ಗೆ ಎಂಟಿಬಿ ನಾಗರಾಜ್‌ ಅವರಿಗೆ ಕೇಳಬೇಕು. ಈ ಬಗ್ಗೆ ನಿರ್ದಿಷ್ಟವಾಗಿ ಯಾರಾದರೂ ಕಂಪ್ಲೇಂಟ್‌ ಮಾಡಿದರೆ ನಮ್ಮ ಪೊಲೀಸರಿಂದ ತನಿಖೆ ಮಾಡಿಸಬಹುದು ಎಂದು ಹೇಳಿದರು. ಶಿವಮೊಗ್ಗದಲ್ಲಿ ದುಷ್ಟಶಕ್ತಿಗಳನ್ನು ನಿರ್ಮೂಲನೆಗೆ ಎಲ್ಲ ಪ್ರಯತ್ನ ಪೊಲೀಸರಿಂದ ಆಗುತ್ತಿದೆ. 

ಬಹಳ ಹಿಂದೆ ಶಿವಮೊಗ್ಗ ರೌಡಿಗಳ ಟ್ರೈನಿಂಗ್‌ ಸೆಂಟರ್‌ ಆಗಿತ್ತು. ಈಗ ಆ ಮಟ್ಟದಲ್ಲಿ ಇಲ್ಲ, ಕಡಿಮೆ ಆಗಿದೆ. ರೌಡಿಸಂ ಅನ್ನು ಎಲ್ಲ ರೀತಿಯಲ್ಲೂ ಮಟ್ಟಹಾಕಲು ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದರು. ಕೊಲೆ ಮಾಡುವವರು ಒಂದೊಂದು ಬಾರಿ ಯಾವ ಮತ್ತಿನಲ್ಲಿ ಇರುತ್ತಾರೋ, ಏನು ತಿನ್ನುತ್ತಾರೋ ಗೊತ್ತಿಲ್ಲ. ಆದರೂ, ಪೊಲೀಸರು ಅವರನ್ನು ಬಿಟ್ಟಿಲ್ಲ. ಜಿಲ್ಲೆಯಲ್ಲಿ ಗಾಂಜಾ ಸಪ್ಲೈ ಆಗ್ತಿದೆ. ಟನ್‌ಗಟ್ಟಲೆ ಮಾದಕ ವಸ್ತುಗಳನ್ನು ಹಿಡಿಯುತ್ತಿದ್ದಾರೆ. ಗಾಂಜಾ ಸಾಗಣೆಯನ್ನು ಪೊಲೀಸರು ಮಟ್ಟಹಾಕ್ತಿದ್ದಾರೆ. ಆದರೂ ಅಲ್ಲಿ ಇಲ್ಲಿ ಈ ರೀತಿಯ ಪ್ರಕರಣಗಳು ನಡೆಯುತ್ತಿವೆ. ಇದು ಬೇರೆ ಬೇರೆ ಕ್ರಿಮಿನಲ್‌ ನಡವಳಿಕೆಗಳಿಗೆ ಕಾರಣ ವಾಗುತ್ತದೆ. ಇದನ್ನು ಎಲ್ಲ ರೀತಿಯಲ್ಲೂ ಮಟ್ಟಹಾಕುವ ಕೆಲಸ ಆಗುತ್ತದೆ ಎಂದರು.

ಇನ್ಸ್‌ಪೆಕ್ಟರ್‌ ಸಸ್ಪೆಂಡ್‌ಗೂ ಸಾವಿಗೂ ಸಂಬಂಧವಿಲ್ಲ: ಸಚಿವ ಆರಗ ಜ್ಞಾನೇಂದ್ರ

‘ಹೋರಿ ಸ್ಪರ್ಧೆಯಲ್ಲಿ ಇಬ್ಬರ ಬಲಿ ವಿರುದ್ಧ ಕ್ರಮ’: ಹೋರಿ ಬೆದರಿಸುವುದು ಒಂದು ಜಾನಪದ ಕಲೆ. ಆದರೆ, ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇದು ಸರಿಯಲ್ಲ. ಆಯೋಜಕರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ನಾನು ಇದರ ಬಗ್ಗೆ ಪೊಲೀಸರಿಂದ ಮಾಹಿತಿ ತೆಗೆದುಕೊಳ್ಳುತ್ತೇನೆ. ಹೋರಿ ಸ್ಪರ್ಧೆಯಿಂದ ಸಾವಾಗಿರುವ ಪ್ರಕರಣಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಸಚಿವ ಜ್ಞಾನೇಂದ್ರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಆಮದು ಅಡಕೆ ಗುಣಮಟ್ಟಸರಿಯಿಲ್ಲ: ಆಮದು ಅಡಕೆಯ ಗುಣಮಟ್ಟಸರಿ ಇಲ್ಲ ಎಂಬುದನ್ನು ಅಧ್ಯಯನ ವರದಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ನಗರದ ಪರಿವಾರ ಸಹಕಾರಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಡಕೆ ಆಮದು ಅಂತಾರಾಷ್ಟ್ರೀಯ ಒಪ್ಪಂದವಾಗಿದ್ದರಿಂದ ಈ ಒಪ್ಪಂದ ಮುರಿಯಲು ಕೇಂದ್ರ ಸರ್ಕಾರಕ್ಕೂ ಕಷ್ಟವಾಗುತ್ತದೆ. ಆದರೆ, ಈ ಒಪ್ಪಂದದ ದೋಷಗಳ ಬಗ್ಗೆ ನಾವು ಮನವರಿಕೆ ಮಾಡಿಕೊಡಬೇಕಾಗಿದೆ. ಆಮದು ಮಾಡಿಕೊಳ್ಳುವ ಪ್ರತಿ ಕೆಜಿ ಕೆಂಪಡಿಕೆಗೆ .409, ಚಾಲಿ ಅಡಕೆಗೆ .360 ದರ ವಿಧಿಸಬೇಕು ಎಂದು ಕೇಂದ್ರಕ್ಕೆ ವರದಿ ಸಲ್ಲಿಕೆ ಮಾಡಲಾಗುತ್ತಿದೆ ಎಂದರು.

Shivamogga: ಕ್ರೀಡಾ ಸಾಧಕರು ಪೊಲೀಸ್‌ ಇಲಾಖೆಗೆ ಸೇರಲು ಶೇ.2 ಮೀಸಲಾತಿ

ಗ್ರಾಮೀಣ ಭಾಗದಲ್ಲಿ ಅಡಕೆಗೆ ಬೆಲೆ ಬಂದ ಬಳಿಕ ಕ್ರಾಂತಿಕಾರಕ ಬೆಳವಣಿಗೆ ಆಗಿದೆ. ಬೆಳೆಗೆ ಬೆಲೆ ಬಂದಾಗ ಕೇವಲ ರೈತ ಮಾತ್ರನಲ್ಲ, ಸುತ್ತಲಿನ ಸಮುದಾಯವೆಲ್ಲ ಪ್ರಗತಿ ಆಗುತ್ತದೆ ಎಂದರು. ಅಡಕೆ ಕ್ಷೇತ್ರ ವಿಸ್ತರಣೆ ಆಗಿದೆ. ಆದರೆ, ದರ ಬಿದ್ದರೆ ನಮ್ಮ ಜೀವನ ಬೀಳುತ್ತದೆ. ಅಡಕೆಗೆ ಈಗಲೂ ತಲೆ ಮೇಲೆ ಕತ್ತಿ ಇದೆ. ಸುಪ್ರಿಂ ಕೋರ್ಚ್‌ಗೆ ಸಲ್ಲಿಸಿದ ಅಫಿಡವಿಟ್‌ ಇನ್ನೂ ಇದೆ. ಸ್ಥಳೀಯ ಅಡಕೆಗೆ ಔಷಧೀಯ ಗುಣ ಇದೆ ಎಂಬುದನ್ನು ಸಂಶೋಧನೆ ಮಾಡಲಾಗುತ್ತಿದ್ದು, ಎರಡು ತಿಂಗಳಲ್ಲಿ ಸಂಪೂರ್ಣ ವರದಿ ಬರಲಿದೆ. ಅದನ್ನು ಸುಪ್ರಿಂ ಕೋರ್ಚ್‌ಗೆ ಸಲ್ಲಿಸುತ್ತೇವೆ ಎಂದರು. ಸಹಕಾರಿ ಕ್ಷೇತ್ರ ನಮ್ಮ ಆರ್ಥಿಕ ಪರಿಸ್ಥಿತಿ ಗಟ್ಟಿಗೊಳಿಸಿದೆ. ಇಲ್ಲಿಯ ಪ್ರತಿ ಕುಟುಂಬಗಳ ಗೌರವವನ್ನು ಜಾಸ್ತಿಗೊಳಿಸುವ ಕಾರ್ಯವನ್ನು ಸಹಕಾರಿ ಸಂಘಗಳು ಮಾಡಿವೆ. ಶಾಸಕ, ಮಂತ್ರಿ ಪದವಿಗಿಂತ ಸಹಕಾರಿ ಕ್ಷೇತ್ರದಲ್ಲಿ ನಾನು ಸಲ್ಲಿಸುತ್ತಿರುವ ಸೇವೆ ನೆಮ್ಮದಿ ನೀಡಿದೆ ಎಂದರು.

click me!