ಸಹಕಾರ ಸಂಘಗಳು ರೈತರಿಗೆ ಹತ್ತಿರವಾಗುವ ಕಾರ್ಯ ಮಾಡಬೇಕು: ಸಚಿವ ಬಿ.ಸಿ.ಪಾಟೀಲ್‌

By Govindaraj SFirst Published Oct 30, 2022, 11:11 PM IST
Highlights

ಸಹಕಾರ ಸಂಘಗಳು ತಮ್ಮದೇ ಛಾಪು ಮೂಡಿಸಿ ಜನರಿಗೆ ಹತ್ತಿರವಾಗುವಂತಹ ಕೆಲಸ ಮಾಡುತ್ತಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು.

ಹಿರೇಕೆರೂರು (ಅ.30): ಸಹಕಾರ ಸಂಘಗಳು ತಮ್ಮದೇ ಛಾಪು ಮೂಡಿಸಿ ಜನರಿಗೆ ಹತ್ತಿರವಾಗುವಂತಹ ಕೆಲಸ ಮಾಡುತ್ತಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು. ಕೇಂದ್ರ ಸರ್ಕಾರದ ಆತ್ಮನಿರ್ಭರ್‌ ಭಾರತ್‌ ನಬಾರ್ಡ್‌ ಪ್ರಾಯೋಜಕತ್ವದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹುಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸುವ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ, ಉಗ್ರಾಣ ಮತ್ತು ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಸಂಘಗಳು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ ರೈತರಿಗೆ ಮತ್ತಷ್ಟುಹತ್ತಿರವಾಗುವಂತಹ ಕಾರ್ಯ ಮಾಡಬೇಕು ಎಂದರು. ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಆತ್ಮನಿರ್ಭರ್‌ ಯೋಜನೆ ಮೂಲಕ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪನೆ ಮಾಡಲಾಗಿದ್ದು ಇದರಿಂದ ರೈತರಿಗೆ ಲಾಭ ಗಳಿಸಲು ಅನುಕೂಲವಾಗಿದೆ ಎಂದರು. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಸಹಕಾರಿ ಸಂಘಗಳು ರೈತರ ಪಾಲಿಗೆ ಕಾಮಧೇನುಗಳಾಗಿವೆ. 

12 ಕೋಟಿ ವೆಚ್ಚದಲ್ಲಿ ಗಾರ್ಮೆಂಟ್ಸ್‌ ಘಟಕಕ್ಕೆ ಚಾಲನೆ: ಸಚಿವ ಬಿ.ಸಿ.ಪಾಟೀಲ್‌

ಗ್ರಾಮ ಪಂಚಾಯಿತಿ ಮತ್ತು ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶಗಳ ಎರಡು ಕಣ್ಣುಗಳಾಗಿದ್ದು, ಈ ಎರಡೂ ಕ್ಷೇತ್ರಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮತ್ತು ರೈತರ ಅಭಿವೃದ್ಧಿಗೆ ಪೂರಕವಾಗಿವೆ. ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಮಾಜಿ ಶಾಸಕ ಬಿ.ಎಚ್‌. ಬನ್ನಿಕೋಡ ಮಾತನಾಡಿ, ನುಡಿದಂತೆ ನಡೆದಾಗ ಸಹಕಾರ ಕ್ಷೇತ್ರ ಅಭಿವೃದ್ಧಿ ಮತ್ತು ಸ್ವಾವಲಂಬಿಯಾಗಲು ಸಾಧ್ಯವಿದೆ. ಸಹಕಾರ ಸಂಘಗಳು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ರೈತರಿಗೆ ಅನುಕೂಲ ಮಾಡಬೇಕು ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಂದ್ರ ಬಡಳ್ಳಿ ಅಧ್ಯಕ್ಷತೆ ವಹಿಸಿದ್ದರು. ನವದೆಹಲಿ ಇಪೋ› ಇ ಬಜಾರ್‌ ನಿರ್ದೇಶಕ ಎಸ್‌.ಎಸ್‌. ಪಾಟೀಲ, ರಾಜ್ಯ ಜನತಾ ಬಜಾರ್‌ ಅಧ್ಯಕ್ಷ ಜಿ.ಪಿ. ಪಾಟೀಲ, ಧಾರವಾಡ ಕೆಸಿಸಿ ಬ್ಯಾಂಕ್‌ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ, ಉಪಾಧ್ಯಕ್ಷ ಎಸ್‌.ವೈ. ಪಾಟೀಲ, ಅಪೆಕ್ಸ್‌ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ, ಮುಖಂಡರಾದ ಎಸ್‌.ಬಿ. ತಿಪ್ಪಣ್ಣನವರ, ರವಿಶಂಕರ ಬಾಳಿಕಾಯಿ, ಡಿ.ಸಿ. ಪಾಟೀಲ, ಜೆ.ಬಿ. ತಂಬಾಕದ, ಬಿ.ಎನ್‌. ಬಣಕಾರ, ಪಪಂ ಅಧ್ಯಕ್ಷ ಕಂಠಾಧರ ಅಂಗಡಿ, ಉಪಾಧ್ಯಕ್ಷೆ ವಿಜಯಶ್ರೀ ಬಂಗೇರ, ಕರಬಸಪ್ಪ ಗಡಿಯಣ್ಣನವರ, ಲತಾ ಪ್ರಕಾಶ ಶೀತಿಕೊಂಡ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಅಗತ್ಯ ತಯಾರಿ; ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವಸಂತಪ್ಪ ವಾಲ್ಮೀಕಿ, ನಿರ್ದೇಶಕರಾದ ಚಂದ್ರಪ್ಪ ಬಂಗೇರ, ಹೇಮಪ್ಪ ಚಿಕ್ಕಣ್ಣನವರ, ಮಂಜುನಾಥ ಗಡಿಯಣ್ಣನವರ, ಹುಚ್ಚಪ್ಪ ಚವಟಗಿ, ಪರಮೇಶ ಸಣ್ಣಮತ್ತಿಹಳ್ಳಿ, ಹನುಮಂತಪ್ಪ ನೂಲಗೇರಿ, ಶೀತಮ್ಮ ತಂಬಾಕದ, ಲಕ್ಷ್ಮೀ ಮಾವರಿಯವರ ಮುಖ್ಯ ಕಾರ್ಯನಿರ್ವಾಹಕ ಮೋಹನ ಬಿಳಕಿ, ಸಿಬ್ಬಂದಿಯವರಾದ ಶಿವಾನಂದ ಮತ್ತೂರ, ಶಿವಮೂರ್ತಿ ಚಿಕ್ಕಣ್ಣನವರ, ಮಾಲತೇಶ ಮಡಿವಾಳರ, ರಾಮಪ್ಪ ಬ್ಯಾಡಗಿ, ತಿರಕಪ್ಪ ಚವಟಗಿ ಸೇರಿದಂತೆ ಸಂಘದ ಸದಸ್ಯರು ಇದ್ದರು.

click me!