ಬಡವರ ಪಾಲಿನ ವೈದ್ಯ ದೇವತೆ, ದಾವಣಗೆರೆ ವೈದ್ಯ‌ನಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

By Suvarna News  |  First Published Oct 30, 2022, 10:56 PM IST

ಎರಡು ರೂಪಾಯಿ ವೈದ್ಯನಾದ ಚಿರಪರಿಚಿತ ವೈದ್ಯರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಡಾ ಬಸವಂತಪ್ಪ ಅದಕ್ಕೆ ಅರ್ಹರಾಗಿದ್ದು ಅವರ ಅಭಿಮಾನಿಗಳು ಸಂತೇಬೆನ್ನೂರು ನಾಗರಿಕರಲ್ಲಿ ಹರ್ಷವನ್ನುಂಟು ಮಾಡಿದೆ.


ವರದಿ : ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್ 

ದಾವಣಗೆರೆ (ಅ.30) ವೈದ್ಯೋ ನಾರಾಯಣ ಹರಿ ಎಂಬುದು ಕೆಲ ವೈದ್ಯರಿಗೆ ಅಕ್ಷರಶಃ ಹೊಂದುತ್ತದೆ.ಅಂತಹ ವೈದ್ಯರಲ್ಲಿ ಸಂತೇಬೆನ್ನೂರಿನ ಡಾ ಬಸವಂತಪ್ಪ ಒಬ್ಬರು. ಇವರು ಬಡವರ ಪಾಲಿನ ಬಂಧು‌ ಅಶ್ವಿನಿ ದೇವತೆಯು ಹೌದು. ಎರಡು ರೂಪಾಯಿ ವೈದ್ಯನಾದ ಚಿರಪರಿಚಿತ ವೈದ್ಯರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಡಾ ಬಸವಂತಪ್ಪ ಅದಕ್ಕೆ ಅರ್ಹರಾಗಿದ್ದು ಅವರ ಅಭಿಮಾನಿಗಳು ಸಂತೇಬೆನ್ನೂರು ನಾಗರಿಕರಲ್ಲಿ ಹರ್ಷವನ್ನುಂಟು ಮಾಡಿದೆ. ಪ್ರತಿಯೊಬ್ಬರಿಗೂ ಉತ್ತಮ ಸಾಧನೆಯ ಕನಸು, ಗುರಿ  ಇರುತ್ತದೆ, ಆ  ಗುರಿ ಮುಟ್ಟುವವರು ಕೆಲವೇ ಜನ.  ಅದರಲ್ಲಿಯು ಎಂಬಿಬಿಎಸ್ ಮುಗಿಸಿ   ವೈದ್ಯ ಪದವಿ ಬಂದ ತಕ್ಷಣ  ನಗರ ಸೇರಿ ಪಣ ಸಂಪಾದನೆ ಮಾಡಿ  ಕಾಸು ಮಾಡುವವರೆ  ಹೆಚ್ಚು. ಆದ್ರೆ ಡಾ ಬಸವಂತಪ್ಪ ಅದಕ್ಕೆ ತದ್ವಿರುದ್ಧ.  ಹೊನ್ನೆ ಮರದ ಹಳ್ಳಿಯ ವೈದ್ಯ ಡಾ ಬಸವಂತಪ್ಪ  ಕಳೆದ 32 ವರ್ಷಗಳಿಂದ ತನ್ನ ವಿದ್ಯೆ ಮತ್ತು ಸೇವೆಯನ್ನು ತಮ್ಮ ಗ್ರಾಮಕ್ಕೆ ಮೀನಲಿಸಿ, ಬಡ ರೋಗಿಗಳ ಪಾಲಿನ ಆರಾಧ್ಯ ದೈವ ಆಗಿದ್ದಾರೆ. ನೀತಿಗೆರೆಯಲ್ಲಿ ಪಾಥಮಿಕ ಶಿಕ್ಷಣ, ಸಿರಿಗೆರೆಯಲ್ಲಿ ಹೈಸ್ಕೂಲು, ಶಿವಮೊಗ್ಗದಲ್ಲಿ ಪಿಯುಸಿ, ಮೈಸೂರಿನಲ್ಲಿ ಎಂ.ಬಿ.ಬಿ.ಎಸ್ ಮುಗಿಸಿ ಸಂತೆಬೆನ್ನೂರಿನಲ್ಲಿ ಸಿದ್ದೇಶ್ವರ್ ಕ್ಲಿನಿಕ್ ಮಾಡಿ ತಮ್ಮ ವೃತ್ತಿ ಜೀವನ  ಆರಂಭಿಸಿದರು. ರೋಗಿಗಳ ಪರೀಕ್ಷೆಗೆ 3 ರೂ. ಫೀಸ್‌ನೊಂದಿಗೆ ಪ್ರಾರಂಭ  ಮಾಡಿದರು. ನಂತರದ ದಿನಗಳಲ್ಲಿ 5 ರೂ. ರೂ. 20 ರೂ.ಗಳು. ಈಗ ಅವರ ಸೇವಾಶುಲ್ಕ 30 ರೂ.ಗೆ ಶುಲ್ಕ ಹೆಚ್ಚಿಸಿದ್ದಾರೆ.

Tap to resize

Latest Videos

ಮಾತ್ರೆ ಕೊಳ್ಳಲಾರದ ಬಡವರಿಗೆ ಉಚಿತವಾಗಿ‌ ಬರುವ ಸ್ಯಾಂಪಲ್  ಮಾತ್ರೆಗಳನ್ನು ಕೊಟ್ಟು  ಬಡವರಿಗೆ ರೋಗ ಗುಣಪಡಿಸಿದ ಎಷ್ಟೋ ಉದಾಹರಣೆಗಳಿವೆ. ಪ್ರತಿ ದಿನ ವೈದ್ಯರು ಬೆಳಗ್ಗೆ  ಬಂದರೆ ರಾತ್ರಿ ಮನೆಗೆ ಹೊರಡುತ್ತಾರೆ, ಕೆಲವ ದಿನ 80 ದಿಂದ 90 ರೋಗಿಗಳನ್ನು ನೋಡುತ್ತಾರೆ. ಇವರ ಈ ಸೇವಾ ಕಾರ್ಯಕ್ಕೆ ಪತ್ನಿ ಸುಜಾತ ಕೂಡ ಸಾಥ್ ನೀಡಿದ್ದಾರೆ.ಕಳೆದ  32 ವರ್ಷಗಳಿಂದ ಗ್ರಾಮೀಣ ಸೇವೆ ಮಾಡುತ್ತಿರುವ ಡಾ ಬಸವಂತಪ್ಪ ರೋಗಿಗಳಲ್ಲೇ ದೇವರನ್ನು ಕಂಡ ವೈದ್ಯ ಮಹಾಶಯ.

Kannada Rajyotsava Award: 2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 67 ಅರ್ಹ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ವೈದ್ಯ ವೃತ್ತಿ ಎನ್ನುವುದು ಜೀವಗಳನ್ನು ಬದುಕಿಸುವ ಪುಣ್ಯದ ವೃತ್ತಿ, ಈ ಭಾಗದಲ್ಲಿ ಯಾವ ಹಳ್ಳಿಗೆ  ಹೋದರೂ ನಮ್ಮ  ಡಾಕ್ಟರು ಎಂದು ಜನರು ಹೇಳುವಾಗ ನನಗೆ ಹೆಮ್ಮೆ ಎನಿಸುತ್ತದೆ. ನನಗೆ ವೃತ್ತಿ ಜೀವನ ತೃಪ್ತಿ ತಂದಿದೆ. ನನಗೆ ರಾಜ್ಯ ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ನನ್ನ ಜವಬ್ಧಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎನ್ನುತ್ತಾರೆ  ಡಾ.ಬಸವಂತಪ್ಪ.

 

ರಾಯಚೂರಿನ ಇಬ್ಬರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ, ವಿಶೇಷ ಕ್ಷೇತ್ರದಲ್ಲಿ ಸಾಧನೆ

ಡಾ ಬಸವಂತಪ್ಪನವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.ಸಂತೇಬೆನ್ನೂರಿನ ಗ್ರಾಮ‌ ಪಂಚಾಯತ್ ಅದ್ಯಕ್ಷೆ ಶಿಲ್ಪ ಮರುಳುಸಿದ್ದೇಶ್ ಮಾತನಾಡಿ ಕೊರೊನೊ ಸಂದರ್ಭದಲ್ಲಿ ವೈದ್ಯ ಬಸವಂತಪ್ಪನವರು ಅವಿರತ ಸೇವೆ ಸಲ್ಲಿಸಿದ್ದಾರೆ.ಸುತ್ತಮುತ್ತ 40 ಹಳ್ಳಿಗಳಲ್ಲೇ ಅವರ ಸೇವೆ ಗಣನೀಯವಾದುದು.ಅವರು ನಮ್ಮ ಊರಿನ ಹೆಮ್ಮೆ ನಮ್ಮ ಡಾಕ್ಟರ್ ಎಂದು ಪ್ರಸಿದ್ದಿ ಅವರಿಂದ ಇನ್ನಷ್ಟು ಸಮಾಜ ಮುಖಿ ಕೆಲಸ ವಾಗಲಿ ಎಂದು ಶುಭ ಹಾರೈಸಿದ್ದಾರೆ.

click me!