Jnana Bhaskar Swamiji Passes Away: ಚಿಟುಗು ಮಲ್ಲೇಶ್ವರ ಮಠದ ಸ್ವಾಮೀಜಿ ಅಸಹಜ ಸಾವು

Published : Jun 17, 2022, 11:55 AM ISTUpdated : Jun 17, 2022, 12:04 PM IST
Jnana Bhaskar Swamiji Passes Away: ಚಿಟುಗು ಮಲ್ಲೇಶ್ವರ ಮಠದ ಸ್ವಾಮೀಜಿ ಅಸಹಜ ಸಾವು

ಸಾರಾಂಶ

ಜಿಲ್ಲೆಯ ಹಿರಿಯೂರು ನಗರದ ಚಿಟುಗು ಮಲ್ಲೇಶ್ವರ ಮಹಾಸಂಸ್ಥಾನದ ಗುರುಗಳಾದ  ಶ್ರೀ ಜ್ಞಾನ ಭಾಸ್ಕರ ಸ್ವಾಮೀಜಿ 75) ಗುರುವಾರ ಬೆಳಗ್ಗೆ ಚಿಟುಗು ಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿನ ನಿವಾಸದಲ್ಲಿ ಅಸಹಜ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ಚಿತ್ರದುರ್ಗ (ಜೂ.17): ಜಿಲ್ಲೆಯ ಹಿರಿಯೂರು ನಗರದ ಚಿಟುಗು ಮಲ್ಲೇಶ್ವರ ಮಹಾಸಂಸ್ಥಾನದ ಗುರುಗಳಾದ  ಶ್ರೀ ಜ್ಞಾನ ಭಾಸ್ಕರ ಸ್ವಾಮೀಜಿ 75) ಗುರುವಾರ ಬೆಳಗ್ಗೆ ಚಿಟುಗು ಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿನ ನಿವಾಸದಲ್ಲಿ ಅಸಹಜ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ಚಿಟುಗು ನಿವಾಸದಲ್ಲಿ ಬೆಳಗಿನ ಸಮಯದಲ್ಲಿ ಸ್ನಾನಗೃಹದಲ್ಲಿ ಅವರ ಮೃತದೇಹ ಕಂಡು ಬಂದಿದ್ದು, ಸ್ನಾನಕ್ಕೆ ನೀರು ಕಾಯಿಸಿಕೊಳ್ಳುವ ವೇಳೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರಬಹುದೇ? ಅಥವಾ ಸ್ವಾಮೀಜಿಗಳ ಸಾವಿಗೆ ಬೇರೆ ಏನಾದ್ರು ಕಾರಣ ಇರಬಹುದೇ ಎಂಬ ಅನುಮಾನ ಶ್ರೀಗಳ‌ ಭಕ್ತರಲ್ಲಿ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ವಾಮೀಜಿಗಳ ಸಾವಿಗೆ ನಿಖರ ಕಾರಣ ಏನು ಎಂಬುದು ತನಿಖೆ ನಂತರವೇ ಹೊರಬರಬೇಕಿದೆ.

ವಿಶ್ವಕರ್ಮ ಸಮಾಜದ ಒಕ್ಕೂಟದಲ್ಲಿನ 63 ಗುರುಗಳ ಪೈಕಿ ಇವರು ಒಬ್ಬರು. ಮಿಕ್ಕೆಲ್ಲಾ ಸ್ವಾಮೀಜಿಗಳಿಗೆ ಈ ಸಾವಿನ ಮಾಹಿತಿ ನೀಡಲಾಗಿದ್ದು, ಅವರು ಬಂದ ಬಳಿಕ ಅಂತ್ಯಸಂಸ್ಕಾರದ ಬಗ್ಗೆ ನಿರ್ಧರಿಸಲಾಗುವುದು ಎಂದು ಭಕ್ತರು ತಿಳಿಸಿದರು. 30 ವರ್ಷಗಳ ಹಿಂದೆ ಜ್ಞಾನಭಾಸ್ಕರ ಸ್ವಾಮೀಜಿ ಸಂಸಾರ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದರು. ಅವರಿಗೆ ಪೂರ್ವಾಶ್ರಮದ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.

PREV
Read more Articles on
click me!

Recommended Stories

ಸದ್ದಿಲ್ಲದೇ ಓಪನ್ ಆದ 'ಬಿಗ್ ಬಾಸ್' ನಡೆಯುವ ಜಾಲಿವುಡ್ ಸ್ಟುಡಿಯೋ! KSPCB ಅನುಮತಿ
ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!