ಬೆಳೆ ವಿಮೆ ತುಂಬಿದ್ದು ಹೆಕ್ಟೇರ್‌ಗೆ 2,500, ಪರಿಹಾರ ಬಂದಿದ್ದು 700 ರೂ: ಕಂಗಾಲಾದ ಅನ್ನದಾತ..!

By Girish Goudar  |  First Published Jun 16, 2022, 10:35 PM IST

*  ಈರುಳ್ಳಿ ಬೆಳೆಗೆ ವಿಮಾ ಪರಿಹಾರ ಬಂದಿಲ್ಲ 
*  ತಿಮ್ಮಾಪುರ, ಹರ್ಲಾಪುರ ರೈತರ ಸಂಕಷ್ಟ
*  ವಿಮಾ ಕಂಪನಿ ರೈತರಿಗೆ ಮಹಾ ಮೋಸ ಮಾಡ್ತಿದೆಯಾ ಅನ್ನೋ ಅನುಮಾನವೂ ರೈತರಲ್ಲಿದೆ 


ಗದಗ(ಜೂ.16):  ವಿಮೆ ಪ್ರಿಮಿಯಂ ತುಂಬಿದ್ರೆ ಬೆಳೆ ನಾಶವಾಗಿ ಸಂಕಷ್ಟ ಅನುಭವಿಸುವಾಗ ರೈತ್ರಿಗೆ ನೆರವಾಗ್ಲಿಕ್ಕೆ ಸ್ವಲ್ಪ ಪರಿಗಾರ ಸಿಕ್ಕುತ್ತೆ.. ಮತ್ತೇ ಸಾವರಸ್ಕೊಂಡು ಒಂದುಷ್ಟು ಹಣ ಸೇರಿಸಿ ಮತ್ತೆ ಕೃಷಿ ಮಾಡೋದಕ್ಕೆ ಅನ್ನದಾತರಿಗೆ ಕನುಕೂಲ ಆಗುತ್ತೆ.. ಆದ್ರೆ, ಆ ರೈತ್ರಿಗೆ ಬೆಳೆ ವಿಮೆ ಪ್ರೀಮಿಯಂ ತುಂಬಿದ್ರೂ ಪರಿಹಾರ ಬಂದಿಲ್ಲ. ಇತ್ತ ಬೆಳೆ ನಾಶವಾಗಿ ಅತ್ತ ಹಣವೂ ಕೈಸೇರದೆ ರೈತ್ರು ಪಡವಾರದ ಸಂಕಷ್ಟ ಪಡುತ್ತಿದ್ದಾರೆ.

ಗದಗ ಜಿಲ್ಲೆಯ ವ್ಯಾಪ್ತಿಯಲ್ಲಿ ಬೆಳೆದ ತೋಟಗಾರಿಗೆ ಬೆಳೆ ಅದ್ರಲ್ಲೂ ಈರುಳ್ಳಿಗೆ ಬೆಳೆ ವಿಮೆ ಪರಿಹಾರದ ಹಣ ಬಂದಿಲ್ಲ ಅನ್ನೋ ಕೂಗು ಕೇಳಿ ಬರ್ತಿದೆ.. ಗದಗ ತಾಲೂಕಿನ ತಿಮ್ಮಾಪುರ, ಹರ್ಲಾಪುರ ವ್ಯಾಪ್ತಿಯ ರೈತ್ರಿಗೆ ಬೆಳೆ ವಿಮೆ ಪರಿಹಾರದ ಹಣ ಜಮೆಯಾಗಿಲ್ಲ ಅಂತಾ ಅನ್ನದಾತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Tap to resize

Latest Videos

ಮನೆಯಲ್ಲೇ ದೈವ ಸ್ವರೂಪಿ ತಾಯಿ ಪ್ರತಿಮೆ ಇಟ್ಟು ಮಕ್ಕಳಿಂದ ನಿತ್ಯ ಪೂಜೆ

ಕೆಲ ಬೆಳೆಗಳಿಗೆ ವಿಮೆ ಹಣ ಜಮೆಯಾಗಿದ್ರೆ ತೋಟಗಾರಿಕೆ ಬೆಳೆಗಳಿಗೆ ವಿಮೆ ಪರಿಹಾರ ಬಂದಿಲ್ಲ ಅನ್ನೋದು ರೈತ್ರ ಆರೋಪ..ಈರುಳ್ಳಿ ಬೆಳೆದ ರೈತ್ರಿಗೆ ಕವಡೆ ಕಾಸು ಪರಿಹಾರವೂ ಬಂದಿಲ್ವಂತೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಸುಮಾರು 12,420 ಹೆಕ್ಟೇರ ಪ್ರದೇಶದಲ್ಲಿ ಕಳೆದ ಹಂಗಾಮಿನಲ್ಲಿ ಈರುಳ್ಳಿ ಬೆಳೆಯಲಾಗಿತ್ತು.. ಹರ್ಲಾಪುರ, ತಿಮ್ಮಾಪುರ ವ್ಯಾಪ್ತಿಯಲ್ಲಿ ಸುಮಾರು 1,800 ಹೆಕ್ಟೇರ್ ಪ್ರದೇಶದಲ್ಲಿ ರೈತ್ರು ಈರುಳ್ಳಿ ಬೆಳೆದಿದ್ರು.. ಆದ್ರೆ, ಬಹುತೇಕ ಬೆಳೆ ಅಕಾಲಿಕ ಮಳೆಗೆ ಹಾನಿಯಾಗಿತ್ತು. ಈ ಬಗ್ಗೆ ಕೃಷಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ರು. ಆದ್ರೆ, ಪರಿಹಾರ ನೀಡುವಲ್ಲಿ ವ್ಯತ್ಯಾಸ ಆಗಿದೆ ಅಂತಾ ರೈತ್ರು ಆರೋಪಿಸುತ್ತಿದ್ದಾರೆ. 

ಕೆಲ ರೈತ್ರು ಹೆಕ್ಟೇರ್ ಗೆ 2,500 ರೂಪಾಯಿ ಬೆಳೆ ವಿಮೆ ತುಂಬಿದ್ದು, 700 ರೂಪಾಯಿ ಪರಿಹಾರ ಬಂದಿದೆ.. ಈ ಬಗ್ಗೆ ಅಧಿಕಾರಿಗಳನ್ನ ಕೇಳಿದ್ರೆ ಸರಿಯಾದ ಮಾಹಿತಿ ರೈತ್ರಿಗೆ ಸಿಗ್ತಿಲ್ಲ.. ವಿಮಾ ಕಂಪನಿ ರೈತರಿಗೆ ಮಹಾ ಮೋಸ ಮಾಡ್ತಿದೆಯಾ ಅನ್ನೋ ಅನುಮಾನವೂ ರೈತರಲ್ಲಿದೆ.

2021/22 ಸಾಲಿನ ಮುಂಗಾರು ಹಂಗಾಮಿಗೆ 1,17,249 ರೈತ್ರು ವಿಮೆ ನೋಂದಣಿ ಮಾಡಿಸಿಕೊಂಡಿದ್ರು.. ಪ್ರೀಮಿಯಂ ತುಂಬಿದ ರೈತ್ರ ಪೈಕಿ 42,777 ರೈತರಿಗೆ ಪರಿಹಾರ ರೂಪದಲ್ಲಿ ಸುಮಾರು 82 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ.

ಮಾನಸಿಕ ಖಿನ್ನತೆ: ರೈಫಲ್‌ನಿಂದ ಶೂಟ್ ಮಾಡಿಕೊಂಡು ಪೇದೆ ಆತ್ಮಹತ್ಯೆ!

ಬೆಳೆ ಬೆಳೆದ ರೈತರ ಸಂಖ್ಯೆ ಪರಿಹಾರ 

ಹತ್ತಿ    5, 150       5.74 ಕೋಟಿ
ಹೆಸರು 8,208       8.95 ಕೋಟಿ
ಶೇಂಗಾ 9,860.     13.14 ಕೋಟಿ
ಮೆ.ಜೋಳ 11,061   16.30 ಕೋಟಿ
ಮೆಣಸಿನಕಾಯಿ  7,087 35 ಕೋಟಿ
ಸೂರ್ಯಕಾಂತಿ 639. .92 ಕೋಟಿ
ಈರುಳ್ಳಿ 403,   30 ಕೋಟಿ

ಗದಗ ಜಿಲ್ಲೆಯ ದಾಖಲೆ ಪ್ರಮಾಣದಲ್ಲಿ ಹಣ ಬಿಡುಗಡೆಯಾಗಿದೆ ಅಂತಾ ಅಧಿಕಾರಿಗಳು ಹೇಳ್ತಿದಾರೆ. ಇನ್ನು, ತಿಮ್ಮಾಪುರ ಹರ್ಲಾಪುರ ವ್ಯಾಪ್ತಿಯ ರೈತ್ರಿಗಾದ ತೊಂದ್ರೆ ಬಗ್ಗೆ ಗಮನಕ್ಕೆ ಬಂದಿದೆ. ತಾಲೂಕು ಹಾಗೂ ವಿಮಾ ಕಂಬನಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುತ್ತೇನೆ ಅಂತಿದಾರೆ ಕೃಷಿ ಇಲಾಖೆ ಡಿಡಿಜಿಯಾಉಲ್ಲಾ ಕೆ. 

ಈ ಬಾರಿ ಮುಂಗಾರು ಬಿತ್ತನೆ ಸದ್ಯ ಆರಂಭವಾಗಿದೆ.. ರೈತ್ರ ಬಳಿ ಹಣ ಇಲ್ದೆ ಪರದಾಡುತ್ತಿದ್ದು, ಬಿತ್ತನೇ ಆರಂಭವಾದರೂ ವಿಮೆ ಪರಿಹಾರ ಬಾರದಿರೋದು ರೈತ್ರನ್ನ ಕಂಗೆಡಿಸಿದೆ.. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ವಿಮೆ ಹಣ ಕೂಡ್ಲೆ ಬಿಡುಗಡೆಯಾಗುವಂತೆ ಕ್ರಮ ಕೈಗೊಳಬೇಕಿದೆ.. ಈ ಮೂಲಕ ಸಂಕಷ್ಟದಲ್ಲಿರುವ ರೈತ್ರಿಗೆ ಸಹಾಯವಾಗ್ಬೇಕಿದೆ. 
 

click me!