ಹಿಜಾಬ್ ಬೆಂಬಲಿಸಿ ಬಂದ್‌ಗೆ ಕರೆ, ಮುಸ್ಲಿಂ ವ್ಯಾಪಾರಿಗಳಿಗೆ ಬಿಗ್ ಶಾಕ್!

By Suvarna News  |  First Published Mar 22, 2022, 4:30 PM IST

* ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಾಬ್ ವಿವಾದ ಅನೇಕ ತಿರುವು
* ಮುಸ್ಲಿಂ ವ್ಯಾಪಾರಿಗಳಿಗೆ ಬಿಗ್ ಶಾಕ್
* ತೀರ್ಪು ಬಂದ ನಂತರ ಕೊನೆಯಾಗುತ್ತದೆ ಎಂದು ಭಾವಿಸಲಾಗಿತ್ತು


ವರದಿ - ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್ 

ಉಡುಪಿ, (ಮಾ.22): ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಾಬ್ ವಿವಾದ(Hijab Row) ಅನೇಕ ತಿರುವುಗಳನ್ನು ಪಡೆಯುತ್ತಿದೆ. ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ಸಂಘಟನೆ ಒಂದು ದಿನ ರಾಜ್ಯಾದ್ಯಂತ ವ್ಯಾಪಾರ ವಹಿವಾಟು ಬಂದ್ ಮಾಡಿತ್ತು. ತೀರ್ಪನ್ನು ಪ್ರಶ್ನೆ ಮಾಡುವ ಮೂಲಕ ಸಂವಿಧಾನ ವಿರೋಧಿ ಚಟುವಟಿಕೆ ಮಾಡಿದ್ದಾರೆ ನೆಲದ ಕಾನೂನಿಗೆ ಗೌರವ ಕೊಡುತ್ತಿಲ್ಲ ಎಂದು ಕಾಪು ಸುಗ್ಗಿ ಮಾರಿಪೂಜೆಯಲ್ಲಿ ಮುಸ್ಲಿಂ ವ್ಯಾಪಾರ (Muslim Traders ) ವಹಿವಾಟಿಗೆ ಬ್ರೇಕ್ ಹಾಕಲಾಗಿದೆ. 

Latest Videos

undefined

ಉಡುಪಿಯಲ್ಲಿ (Udupi) ಆರಂಭವಾದ ಹಿಜಾಬ್ ಹೋರಾಟ ತ್ರಿಸದಸ್ಯ ಪೀಠದಲ್ಲಿ ತೀರ್ಪು ಬಂದ ನಂತರ ಕೊನೆಯಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ತೀರ್ಪಿನ ಸೈಡ್ ಎಫೆಕ್ಟ್‌ಗಳು ಶುರುವಾಗಿದೆ. 

Udupi: ಮಾರಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನೋ ಎಂಟ್ರಿ..!

ದೇವಸ್ಥಾನದ(Temples) ಪರಿಸರದಲ್ಲಿ ಅನ್ಯಧರ್ಮೀಯರಿಗೆ ಅವಕಾಶ ಇಲ್ಲ ಎಂದು ಆಡಳಿತ ಮಂಡಳಿ ಹೇಳಿದೆ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ಕಾನೂನಿನ ಸಮರ್ಥನೆಯನ್ನು ಪಡೆದುಕೊಂಡಿದೆ .ಕಾಪು ಮಾರಿಗುಡಿಯ ಆಸುಪಾಸಿನಲ್ಲಿ ಮುಂಭಾಗದ ಹೆದ್ದಾರಿಯ ಇಕ್ಕೆಲದಲ್ಲಿ, ಅಂಡರ್ ಪಾಸ್ ಕೆಳಗೆ ಯಾರಿಗೂ ವ್ಯಾಪಾರಕ್ಕೆ ಅವಕಾಶ ನೀಡಿಲ್ಲ. ಎರಡು ದಿನ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಎರಡು ದಿನಗಳ ಹಿಂದೆ ವಿವಿಧ ಹಿಂದೂ ಸಂಘಟನೆಯ ಮುಖಂಡರು ಸದಸ್ಯರು ಮಾರಿಗುಡಿಗೆ ಭೇಟಿಕೊಟ್ಟು ಮುಸಲ್ಮಾನರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದ್ದರು. ಆಡಳಿತ ಮಂಡಳಿ ಒತ್ತಾಯಕ್ಕೆ ಮಣಿದು, ಹಿಂದೂ ವ್ಯಾಪಾರಸ್ಥರಿಗೆ ಮಾತ್ರ ಅವಕಾಶ ಕೊಡುವುದಾಗಿ ಆಡಳಿತ ಮಂಡಳಿ ಹೇಳಿತ್ತು. ಧಾರ್ಮಿಕ ದತ್ತಿ ಇಲಾಖೆಯ ನಿಯಮ ದಲ್ಲಿ ಇರುವಂತೆ ಈ ಬಾರಿ ಹಿಂದೂಗಳಿಗೆ ಮಾತ್ರ ವ್ಯಾಪಾರ ವಹಿವಾಟು ಮಾಡಲು ಅವಕಾಶ ಮಾಡಿಕೊಡಲಾಗಿದೆ. 

ಜಾತ್ರೆ ಮತ್ತು ಬೀದಿ ಬದಿ ವ್ಯಾಪಾರವನ್ನು ನಂಬಿ ಉಡುಪಿ ಜಿಲ್ಲೆಯಲ್ಲಿ 650ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳಿವೆ. ನಾವು ತಲೆತಲಾಂತರದಿಂದ ಹಿಂದೂ ಧರ್ಮಿಯರ ಜೊತೆ ಅನ್ಯೋನ್ಯವಾಗಿ ಇದ್ದೇವೆ. ದಯವಿಟ್ಟು ನಮಗೆ ವ್ಯಾಪಾರ ಮಾಡಲು ಅವಕಾಶ ಕೊಡಿ ಎಂದು ಜಿಲ್ಲಾ ಬೀದಿಬದಿ ಜಾತ್ರೆ ವ್ಯಾಪಾರಿಗಳ ಸಂಘ ಮನವಿ ಮಾಡಿದೆ.

ಸದ್ಯದ ಪರಿಸ್ಥಿತಿ ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತಾಗಿದೆ. ಹಿಜಾಬ್ ತೀರ್ಪು ಬಂದ ನಂತರ ಬಂದ್ ಮಾಡಿ ಕೋರ್ಟಿಗೆ ಅಗೌರವ ತೋರಿದ್ದನ್ನು ಹಿಂದೂ ಸಂಘಟನೆಗಳು ಗಂಭೀರವಾಗಿ ಪರಿಗಣಿಸಿವೆ. 

ಕಾಪು ಸುಗ್ಗಿ ಮಾರಿಪೂಜೆ ಕೇವಲ ಉಡುಪಿ ಜಿಲ್ಲೆ ಮಾತ್ರವಲ್ಲ ಕರಾವಳಿ ಮತ್ತು ಮಲೆನಾಡಿನ ಅನೇಕ ಜಿಲ್ಲೆಗಳ ಭಕ್ತರು ಜಾತ್ರೆಗೆ ಬರುತ್ತಾರೆ. ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತದೆ. ಮಾರಿ ಪೂಜೆಗೆ ಬೇಕಾದ ಕೋಳಿ ಕುರಿಗಳನ್ನು ಹೆಚ್ಚಾಗಿ ಮುಸಲ್ಮಾನರೇ ವ್ಯಾಪಾರ ನಡೆಸುತ್ತಿದ್ದರು. ಇದೇ ಮೊದಲ ಬಾರಿಗೆ ಮುಸಲ್ಮಾನರೆಲ್ಲ ದ ಜಾತ್ರೆಗೆ ಕಾಪು ಸಾಕ್ಷಿಯಾಗಿದೆ. ಕೇವಲ ಕಾಪು ಸುಗ್ಗಿ ಮಾರಿಪೂಜೆ ಮಾತ್ರವಲ್ಲ ಈ ಭಾಗದಲ್ಲಿ ಇನ್ನು ಮುಂದೆ ನಡೆಯುವ ಪ್ರತಿಯೊಂದು ಜಾತ್ರೆಗಳಲ್ಲಿ ಇದೇ ರೀತಿಯ ನಿಷೇಧ ಪ್ರಕ್ರಿಯೆ ಮುಂದುವರಿಯುವ ಸಾಧ್ಯತೆಗಳಿವೆ.

ಹೈಕೋರ್ಟ್ ತೀರ್ಪು ಬಂದ 2ನೇ ದಿನ ಮುಸ್ಲಿಂ ಸಂಘಟನೆಗಳು ಹಾಗೂ ಮುಸ್ಲಿಮ್ ಒಕ್ಕೂಟ ಕರ್ನಾಟಕ ಬಂದ್ ಗೆ ಕರೆ ನೀಡಿತ್ತು. ಉಡುಪಿಯಲ್ಲಿ ಮುಸಲ್ಮಾನ ವ್ಯಾಪಾರಿಗಳು ಒಂದು ದಿನ ವಹಿವಾಟು ಸ್ಥಗಿತಗೊಳಿಸಿದ್ದರು. ಮುಸಲ್ಮಾನ ಒಡೆತನದ ಕಾಪುವಿನ ಕೆಲ ಕಾಂಪ್ಲೆಕ್ಸ್ ಗಳಲ್ಲಿ ಹಿಂದೂ ಧರ್ಮಿಯರ ಅಂಗಡಿಗಳನ್ನು ಬಂದ್ ಮಾಡಿಸಲಾಗಿತ್ತು. ಇದೀಗ ಕಾಪು ತಾಲೂಕಿನ ಸುಗ್ಗಿ ಮಾರಿಪೂಜೆ ಗೆ ಮುಸಲ್ಮಾನ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿಲ್ಲ. 

click me!