Chikkamagaluru: ಶ್ರೀಗಂಧಕ್ಕಿಲ್ಲ ಮನ್ನಣೆ: ರೈತರ ಪ್ರತಿಭಟನೆಗೆ ಕ್ಯಾರೇ ಎನ್ನದ ಅಧಿಕಾರಿಗಳು..!

By Girish GoudarFirst Published Mar 22, 2022, 11:32 AM IST
Highlights

*  ಶ್ರೀಗಂಧ ಬೆಳೆದ ಜಮೀನುಗಳನ್ನ ಸ್ವಾಧೀನಪಡಿಸಿಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
*  ರೈತರಿಗೆ ಮಾರುಕಟ್ಟೆ ಬೆಲೆ ನೀಡಲು ಮೀನಾಮೇಷ ಎಣಿಸುತ್ತಿರುವ ಅಧಿಕಾರಿಗಳು
*   ಶ್ರೀಗಂಧ ಬೆಳೆ ಕಳೆದುಕೊಂಡು 22 ರೈತರ ಬದುಕು ಅತಂತ್ರ
 

ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು(ಮಾ.22):  ಮೊದಲು ಅಧಿಕಾರಿಗಳು ಬಂದು ಜಾಗ ಬಿಡಿ ಅಂದ್ರು.. ಇಲ್ಲಾ ನಾವು ಶ್ರೀಗಂಧ ಬೆಳೆದಿದ್ದೀವಿ, ಬದುಕೇ ಇಲ್ಲಿ ಕಟ್ಟಿಕೊಂಡಿದ್ದೀವಿ ಹೇಗೆ ಬಿಡೋದು ಅಂತಾ ರೈತರು(Farmers) ಕೇಳಿದ್ರು. ಅಯ್ಯೋ, ಡೋಂಟ್ ವರಿ ಒಳ್ಳೇ ಪರಿಹಾರ ಕೊಡ್ತೀವಿ ಜಾಗ ಬಿಡ್ಬೇಕು ನೋ ದೂಸ್ರಾ ಮಾತು ಅಂತಾ ಆ ಕಡೆಯಿಂದ ರಿಪ್ಲೈ ಬಂತು. ಸರಿ, ಜಾಗ ಬಿಡ್ತೀವಿ ಅಂತಾ ರೈತರು ರೆಡಿಯಾದ್ರು. ಆದರೆ ಇದೀಗ ಕೋರ್ಟ್ ಆದೇಶ ಇದ್ರೂ ಪರಿಹಾರ ನೀಡದೇ ಇರುವ ಅಧಿಕಾರಿಗಳು ಕ್ರಮ ಖಂಡಿಸಿ ರೈತರು ಕುಟುಂಬದೊಂದಿಗೆ ಕಳೆದ 22 ದಿನಗಳಿಂದ ಪ್ರತಿಭಟನೆ(Protest) ನಡೆಸುತ್ತಿದ್ದಾರೆ.

Latest Videos

ತೋಟದಲ್ಲೇ ರೈತರ ಪ್ರತಿಭಟನೆ 

ಸೊಗಸಾಗಿ ಬೆಳೆದಿರುವ ಈ ಶ್ರೀಗಂಧದ(Sandalwood) ವನವನ್ನ ನೋಡಿದ್ರೆ, ನಾವಿರುವ ತಾಣವೇ ಗಂಧದ ಗುಡಿ.. ಚಂದದ ಗುಡಿ.. ಶ್ರೀಗಂಧದ ಗುಡಿ.. ಅನ್ನೋ ಕನ್ನಡದ ಕಣ್ಮಣಿ ಡಾ.ರಾಜ್ ಸಾಂಗ್ ನೆನಪಾಗದೇ ಇರದು..! ಆದ್ರೆ ಈ ರೈತರಿಗೆ, ತಾವು ಬೆಳೆದ ಶ್ರೀಗಂಧದ ಮರಗಳ ಬಳಿಯೇ ಕುಳಿತುಕೊಂಡು ಸರ್ಕಾರ, ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುವ ಸ್ಥಿತಿ ಬಂದಿದೆ. ಕೋರ್ಟ್‌ನ ಪರಿಹಾರದ ಆದೇಶ ಇಟ್ಕೊಂಡ್ ತೋರಿಸೋ ಜರೂರತ್ತು ಎದುರಾಗಿದೆ. ದೇವ್ರು ಕೊಟ್ರೂ ಪೂಜಾರಿ ಕೊಡ್ತಿಲಲ್ವಾ ಅನ್ನೋ ಆತಂಕ ಶುರುವಾಗಿದೆ. 

ಚಿಕ್ಕಮಗಳೂರು ನಗರಸಭೆ ಸಿಬ್ಬಂದಿ ಕರ್ತವ್ಯಕ್ಕೆ ಚಕ್ಕರ್...ದಿ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕೆ ಹಾಜರ್

ಹೌದು, ಅಂದ ಹಾಗೆ ಹೀಗೆ ಪ್ರತಿಭಟನೆ ನಡೆಸುತ್ತಿರುವ ರೈತರು ಚಿಕ್ಕಮಗಳೂರು(Chikkamaluru) ಜಿಲ್ಲೆ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದವರು. ಈ ಗ್ರಾಮದ 22 ಮಂದಿ ರೈತರು 8 ವರ್ಷದಿಂದ ಇಲ್ಲಿ ಭೂಮಿ ತೆಗೆದುಕೊಂಡು ಶ್ರೀಗಂಧ ಬೆಳೆದಿದ್ರು. ಆದ್ರೆ ಇದೀಗ ತರೀಕೆರೆ ಬೈಪಾಸ್ ರಾಷ್ಟ್ರೀಯ ಹೆದ್ದಾರಿಯನ್ನ(National Highway) ನಿರ್ಮಿಸಲು ಇವುಗಳಿಗೆ ಕೊಡಲಿ ಪೆಟ್ಟು ಬೀಳೋ ಸಮಯ ಸನ್ನಿಹಿತವಾಗಿದೆ. ಆರು ವರ್ಷದ ಹಿಂದೆಯೇ ಈ ಜಾಗಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನೋಟಿಫಿಕೇಶನ್(Notification) ಮಾಡಿದ್ದಾರೆ. ಈ ವೇಳೆ ಕೇವಲ ಭೂಮಿಗೆ ಮಾತ್ರ ಅತಿ ಕಡಿಮೆ ಬೆಲೆ ಕಟ್ಟಿ ಪರಿಹಾರ ನೀಡಿದ್ದಾರೆ. ಆದ್ರೆ ಅದೇ ಭೂಮಿಯಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳಿಗೆ ಪರಿಹಾರದ ಹಣ ನೀಡಲು ಪ್ರಾಧಿಕಾರ ಮೀನಾಮೇಷ ಎಣಿಸುತ್ತಿದ್ದು, ಶ್ರೀ ಗಂಧ ಬೆಳೆಯನ್ನು ಬೆಳೆದಿರುವ ರೈತ ವಿಶುಕುಮಾರ್ ಸರ್ಕಾರದ, ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. 

ಚಿಕ್ಕಮಗಳೂರು: ಕಾಡುಕುರಿ‌, ಹಂದಿ ಶಿಕಾರಿ ಮಾಡಿದ ಆರೋಪಿಗಳು ಪರಾರಿ

ಪರಿಹಾರ ನೀಡಲು ಅಧಿಕಾರಿಗಳಿಂದ ಮೀನಾಮೇಷ 

ಮೊದಲು ಶ್ರೀಗಂಧದ ಬೆಳೆಗೆ ಬೆಲೆ ಫಿಕ್ಸ್ ಮಾಡಲು ಹಾವು ಏಣಿ ಆಟವನ್ನ ಪ್ರಾಧಿಕಾರ ಮಾಡ್ತು. ಸರ್ಕಾರಿ, ಖಾಸಗಿ ಎಜೆನ್ಸಿ ಅಂತಾ ವರ್ಷಗಟ್ಟಲ್ಲೇ ಸಮಯ ದೂಡುತ್ತಲ್ಲೇ ಬಂತು. ಕೊನೆಗೆ ಶ್ರೀಗಂಧ ಮರದ 30 ವರ್ಷದ ಜೀವಿತಾವಧಿಯನ್ನ ಗಮನದಲ್ಲಿಟ್ಟುಕೊಂಡು ಒಂದು ಮರಕ್ಕೆ 2 ಲಕ್ಷದ 44 ಸಾವಿರ ರೂಪಾಯಿಯನ್ನ ನೀಡುವಂತೆ ಹೈಕೋರ್ಟ್ ಸೂಚಿಸಿದೆ. ಆದರೂ ಅರಣ್ಯ ಇಲಾಖೆ ದಿನಕ್ಕೊಂದು ವರದಿ ತಯಾರಿಸುತ್ತಾ ಶ್ರೀಗಂಧ ಬೆಳೆದ ರೈತರಿಗೆ ಯಾಮಾರಿಸುತ್ತಲೇ ಬರುತ್ತಿದೆ. ಹತ್ತು ವರ್ಷದ ಒಂದು ಮರಕ್ಕೆ ಕೇವಲ 1176ರೂಪಾಯಿ ನೀಡುವುದಾಗಿ ಹೇಳಿದೆ. ಎಲ್ಲಿಯ 2 ಲಕ್ಷ, ಎಲ್ಲಿಯ 1 ಸಾವಿರ..? ಇವ್ರು ಕೊಡುವ ಪರಿಹಾರ(Compensation) ವಿಷವನ್ನ ಖರೀದಿ ಮಾಡಲು ಕೂಡ ಸಾಕಾಗುವುದಿಲ್ಲ ಅಂತಾ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯ ಆದೇಶ ಮಾಡಿದ್ರೂ ರೈತರನ್ನ ಸತಾಯಿಸುತ್ತಿರೋ ಅಧಿಕಾರಿಗಳ ನಡೆ ಪ್ರಶ್ನಿಸಿ ರೈತರು ಕುಟುಂಬ ಸದಸ್ಯರೊಂದಿಗೆ ಕಳೆದ 22 ದಿನಗಳಿಂದ ತರೀಕರೆ ತಾಲ್ಲೂಕಿನ ಹಳಿಯೂರು ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 

ಒಟ್ಟಾರೆ ದೇವ್ರು ಕೊಟ್ರೂ ಪೂಜಾರಿ ಕೊಡದ ಪರಿಸ್ಥಿತಿ ಈ ರೈತರದ್ದಾಗಿದ್ದು ಇದರಿಂದ ನ್ಯಾಯಾಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದರೂ ರೈತರ ಸಮಸ್ಯೆ ಕೇಳಲು ಜನಪ್ರತಿನಿಧಿಗಳುಮ ಅಧಿಕಾರಿಗಳು ಮುಂದೆಯಾಗೇ ಇರುವುದು ವಿಷರ್ಯಾಸವೇ ಸರಿ,ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಮುಖಹಾಕಬೇಕಾಗಿದೆ.
 

click me!