* ಕಾಲೇಜಿನ ಮೇಲೆಯೇ ದೂರು ಕೊಟ್ಟ ವಿದ್ಯಾರ್ಥಿನಿಯರು
* ತಮ್ಮ ವೈಯಕ್ತಿಕ ಸ್ಟೋರಿ ಬಹಿರಂಗ ಮಾಡಲಾಗಿದೆ.
* ಹಿಜಾಬ್ ವಿವಾದಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ್ದ ನ್ಯಾಯಾಲಯ
* ಅಡ್ಮಿಶನ್ ಟೈಂ ನಲ್ಲಿ ಕೊಟ್ಟಿದ್ದ ಮಾಹಿತಿ ಸೋರಿಕೆಯಾಗಿದೆ
ಉಡುಪಿ(ಫೆ. 11) ಹಿಜಾಬ್ (Hijab) ವಿವಾದ ಮತ್ತಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಕಾಲೇಜಿನ ಪ್ರವೇಶದ ಸಂದರ್ಭ ನೀಡಿದ್ದ ಮೊಬೈಲ್ ಸಂಖ್ಯೆ, ಹೆಸರು, ದಾಖಲೆ, ವಿಳಾಸ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಸಾಮಾಜಿಕ ತಾಣದದಲ್ಲಿ(Social Media) ಬಹಿರಂಗ ಮಾಡಿದ್ದು ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಉಡುಪಿ (Udupi) ಕಾಲೇಜಿನ ವಿದ್ಯಾರ್ಥಿನಿಯರ ಪೋಷಕರು ಎಸ್‌ಪಿ ವಿಷ್ಣುವರ್ಧನ್ ಗೆ ದೂರು ಸಲ್ಲಿಸಿದ್ದಾರೆ.
ತಮ್ಮ ಕಾಲೇಜು ಮಾಹಿತಿ, ಮೊಬೈಲ್ ನಂಬರ್ ಗಳನ್ನು ಬಹಿರಂಗಪಡಿಸಿದ ಕಾಲೇಜಿನ ಮೇಲೆ ಕ್ರಮ ಕೈಗೊಳ್ಳುವಂತೆ ಹಿಜಾಬ್ ಪರ ನಿಂತಿದ್ದ ಆರು ವಿದ್ಯಾರ್ಥಿನಿಯರು ಉಡುಪಿ ಎಸ್ಪಿಗೆ ದೂರು ನೀಡಿದ್ದಾರೆ ದೂರಿಗೆ ಆಧಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟವಾಗಿರುವ ಮಾಹಿತಿಯ ಸ್ಕ್ರೀನ್ ಶಾಟ್ ಒದಗಿಸಲು ತಿಳಿಸಲಾಗಿದೆ. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಎಸ್ ಪಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು. ಇನ್ನೆರಡು ತಿಂಗಳಿನಲ್ಲಿ ಪರೀಕ್ಷೆ ಇದ್ದು ವಿದ್ಯಾರ್ಥಿಗಳು ಗೊಂದಲದ ಮಾತಿಗೆ ಬಲಿಯಾಗಬಾರದು ಎಂದು ಪ್ರಾಚಾರ್ಯರು ಮನವಿ ಮಾಡಿಕೊಂಡಿದ್ದಾರೆ.
ಹೈಕೋರ್ಟ್ ವಿಚಾರಣೆಯಲ್ಲಿ ಆಗಿದ್ದೇನು?
ಹೈಕೋರ್ಟ್ ಹೇಳಿದ್ದೇನು?
ವಿದ್ಯಾರ್ಥಿಗಳ ಹಿಜಾಬ್ ಹಾಗೂ ಕೇಸರಿ ಜಟಾಪಟಿಗೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿತ್ತು ಹಿಜಾಬ್ ಸಂಘರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದ್ದು, ಅಂತಿಮ ಆದೇಶ ನೀಡುವವರೆಗೆ ಯಾವುದೇ ಧಾರ್ಮಿಕ ಉಡುಗೆಗೆ ಅವಕಾಶ ಇಲ್ಲ ಎಂದು ಆದೇಶ ನೀಡಿದೆ. ಅಲ್ಲದೇ ತಕ್ಷಣವೇ ಶಾಲೆ-ಕಾಲೇಜು ಪ್ರಾರಂಭಿಸಿ ಎಂದು ಸರ್ಕಾರಕ್ಕೆ ಕೋರ್ಟ್ ಸೂಚಿಸಿತ್ತು.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಸ್ತೃತ ಪೀಠ ಈ ಮಧ್ಯಂತರ ಆದೇಶ ನೀಡಿತ್ತು. ರಾಜ್ಯದ ಎಲ್ಲ ಶಾಲಾ-ಕಾಲೇಜುಗಳು ಶೀಘ್ರ ಆರಂಭವಾಗಬೇಕು. ಮುಂದಿನ ಆದೇಶದವರೆಗೆ ಧಾರ್ಮಿಕ ಗುರುತುಗಳನ್ನು ಬಳಸುವಂತಿಲ್ಲ. ಕೇಸರಿ ಶಾಲು ಅಥವಾ ಹಿಜಾಬ್ ಧರಿಸಿ ಶಾಲೆಗಳಿಗೆ ಹೋಗುವಂತಿಲ್ಲ ಎಂದು ನ್ಯಾಯಾಲಯವು ಮೌಖಿಕ ಆದೇಶದಲ್ಲಿ ತಿಳಿಸಿ ಪ್ರಕರಣವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ರಾಜ್ಯದಲ್ಲಿ ಶಾಂತಿ ನೆಮ್ಮದಿ ಮರಳಬೇಕು.ಕೆಲವು ದಿನಗಳ ಕಾಲ ನೀವು ನಿಮ್ಮ ನಂಬಿಕೆ ಬಿಡುವುದು ಒಳ್ಳೆಯದು. ಕೆಲವೇ ದಿನಗಳಲ್ಲಿ ಅಂತಿಮ ತೀರ್ಪು ಪ್ರಕಟಿಸುತ್ತೇವೆ. ಅಲ್ಲಿಯವರೆಗೆ ಧಾರ್ಮಿಕ ಗುರುತುಗಳನ್ನ ಬಳಸಬಾರದು ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿತ್ತು.
ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ ರಾಷ್ಟ್ರೀಯ ಮಟ್ಟದಲ್ಲಿಯೂ ಸದ್ದು ಮಾಡಿತು. ಪಾಕಿಸ್ತಾನದ ಸಚಿವರು ಈ ಬಗ್ಗೆ ಹೇಳಿಕೆ ಕೊಟ್ಟರು. ಇಂಥ ಪ್ರಕರಣವನ್ನು ಸದ್ಯದ ಮಟ್ಟಿಗೆ ವಿಚಾರಣೆ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.