ಅಡಕೆ ಕೊಯ್ಲು, ಔಷಧಿ ಸಿಂಪಡಣೆಗೆ ‘ಪಿಂಗಾರ’ದ ತಂಡ, ರಾಜ್ಯದಲ್ಲೇ ಪ್ರಥಮ

By Suvarna News  |  First Published Feb 11, 2022, 5:42 PM IST

* ಅಡಕೆ ಕೊಯ್ಲು, ಔಷಧಿ ಸಿಂಪಡಣೆಗೆ ‘ಪಿಂಗಾರ’ದ ತಂಡ
* ರೈತ ಉತ್ಪಾದಕ ಸಂಸ್ಥೆಯ ಇಂತಹ ಪ್ರಯತ್ನ ರಾಜ್ಯದಲ್ಲೇ ಪ್ರಥಮ 
* ಕೆಲಸಕ್ಕೆ ಫೈಬರ್ ದೋಟಿ ಬಳಕೆ


 ಮಂಗಳೂರು, (ಫೆ.11): ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಸಕ್ರಿಯವಾಗಿರುವ ಪಿಂಗಾರ ತೋಟಗಾರಿಕಾ ರೈತ ಉತ್ಪಾಾದಕ ಕಂಪೆನಿ ಈಗ ಅಡಕೆ ಕೃಷಿಕರಿಗೆ ತೋಟದಲ್ಲಿ ಔಷಧಿ ಸಿಂಪಡಣೆ ಹಾಗೂ ಅಡಕೆ ಕೊಯ್ಲಿಗೆ ನೆರವಾಗಲು ತಂಡ ರಚಿಸಿದೆ. ರೈತ ಉತ್ಪಾದಕ ಸಂಸ್ಥೆಯೊಂದು (ಎಫ್‌ಪಿಸಿ) ಇಂತಹ ಜಾಬ್ ವರ್ಕ್ ಮಾದರಿಯಲ್ಲಿ ಕಾರ್ಯ ನಿರ್ವಹಿಸುವ ಪ್ರಯತ್ನ ಇಡೀ ರಾಜ್ಯದಲ್ಲೇ ಇದು ಪ್ರಥಮ.

ಕರಾವಳಿಯ ಬೆಳೆಗಾರರಿಗೆ ಕ್ಲಪ್ತ ಸಮಯದಲ್ಲಿ ಅಡಕೆ ತೋಟಕ್ಕೆ ಔಷಧಿ ಸಿಂಪಡಣೆ ಹಾಗೂ ಬೆಳೆದು ಹಣ್ಣಾಾದ ಅಡಕೆ ಕೊಯ್ಲು ದೊಡ್ಡ ತಲೆನೋವು. ಸಾಕಷ್ಟು ಸಂಖ್ಯೆೆಯಲ್ಲಿ ನುರಿತ ಕಾರ್ಮಿಕರು ಇಲ್ಲದಿರುವುದು ಹಾಗೂ ಹೇಳಿದ ಸಮಯಕ್ಕೆೆ ಬಾರದೆ ಕಾರ್ಮಿಕರು ಕೈಕೊಡುವುದು ಕೂಡಾ ಬೆಳೆಗಾರರನ್ನು ಕಂಗಾಲಾಗಿಸುತ್ತಿಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಕಡೆ ಈಗಾಗಲೇ ಜನಪ್ರಿಯವಾಗಿರುವ ಫೈಬರ್ ದೋಟಿ ಮೂಲಕ ಕೊಯ್ಲು ಪ್ರಯೋಗ ಕರಾವಳಿಗೂ ಕಾಲಿಟ್ಟಿದೆ. ಕಾರ್ಮಿಕರ ಕೊರತೆಯನ್ನು ಈ ಪ್ರಯೋಗ ನಿವಾರಿಸುವ ವಿಶ್ವಾಸ ಇರಿಸಲಾಗಿದೆ.

Tap to resize

Latest Videos

ಐದು ದಿನದಲ್ಲಿ ಅಡಕೆ ಕೊಯ್ಯಲು ಕಲಿಯಿರಿ

ಸುಧಾರಿತ ಹಗುರ ಫೈಬರ್ ದೋಟಿ ಬಳಸಿ ನೆಲದಲ್ಲೇ ನಿಂತು ಅಡಕೆ ಕೊಯ್ಲು ಮಾಡುವುದು ಹಾಗೂ ಔಷಧಿ ಸಿಂಪಡಣೆ ನಡೆಸಲು ಪಿಂಗಾರ ತಂಡ ರಚಿಸಿದ್ದು ಇದರಲ್ಲಿ ೮ ಮಂದಿ ಸಿಬ್ಬಂದಿಗೆ ತರಬೇತಿ ನೀಡಿ ಸಿದ್ಧಪಡಿಸಲಾಗುತ್ತಿದೆ. ಈ ತರಬೇತಿಗೆ ಕ್ಯಾಂಪ್ಕೊಅಡಕೆ ಕೌಶಲ್ಯ ಪಡೆ ಹಾಗೂ ನುರಿತ ನುರಿತ ತರಬೇತಿಗಾರರ ಸಹಕಾರ ಸಿಗಲಿದೆ.

ಹೀಗಿರಲಿದೆ ತಂಡ:

ಪಿಂಗಾರ ಸಂಸ್ಥೆಯ ತಂಡ ಸದ್ಯ ಓಮ್ನಿ ಕಾರಿನಲ್ಲಿ ಕೊಯ್ಲಿಗೆ ಬೇಡಿಕೆ ಬಂದ ತೋಟಕ್ಕೆ ತೆರಳಲಿದೆ. ತಂಡದಲ್ಲಿ 8 ಮಂದಿ ಇರುತ್ತಾರೆ. ನಾಲ್ವರು ದೋಟಿಯಿಂದ ಕೊಯ್ಲು ಮಾಡುವವರು. ಇತರ ನಾಲ್ವರು ರಿಂಗ್ ಬಲೆಯಲ್ಲಿ ಕೊಯ್ದ ಅಡಕೆ ಸಂಗ್ರಹಿಸುವವರು. ಇವರಲ್ಲದೆ ಚಾಲಕನೇ ತಂಡದ ಮ್ಯಾನೇಜರ್ ಆಗಿರಲಿದ್ದು, ಇಡೀ ಜಾಬ್‌ವರ್ಕ್ ನಿರ್ವಹಿಸುವರು.

ಫೈಬರ್ ದೋಟಿಗೆ 60-80 ಸಾವಿರ ರು. ತನಕ ಬೆಲೆ ಇದ್ದು, ಸಾಮಾನ್ಯ ರೈತರಿಗೆ ಇದರ ಖರೀದಿ ಕಷ್ಟ ಎಂಬ ಕಾರಣಕ್ಕೆ ಸಂಸ್ಥೆಯೇ ನಾಲ್ಕು ದೋಟಿಗಳನ್ನು ಖರೀದಿಸಿದೆ.  ಇವರಲ್ಲಿ 60 ಹಾಗೂ 80 ಫೀಟ್ ಎತ್ತರದ ದೋಟಿಗಳಿರುತ್ತವೆ. ರಿಂಗ್ ಬಲೆ, ಕತ್ತಿ, ಹೆಲ್ಮೆಟ್ ಮತ್ತಿತರ ರಕ್ಷಣಾ ವ್ಯವಸ್ಥೆಯೂ ಇರುತ್ತದೆ. ನಾಲ್ಕು ಮಂದಿ ತೋಟದಲ್ಲಿ ಅಡಕೆ ಕೊಯ್ದ ತಕ್ಷಣ ಕೆಳಗಿನಿಂದ ಬಲೆ ಅಳವಡಿಸಿದ 3 ಮೀಟರ್ ವ್ಯಾಸದ ರಿಂಗ್ ಸಹಾಯದಿಂದ ಇತರ ನಾಲ್ವರು ಸಿಬ್ಬಂದಿ ಕೊನೆಯನ್ನು ಸಂಗ್ರಹಿಸುತ್ತಾರೆ. ನಂತರ 10 ಕೊನೆಗಳ ರಾಶಿ ಮಾಡಿ ಇರಿಸುತ್ತಾರೆ. ಈ ರಾಶಿಯನ್ನು ಅಂಗಳಕ್ಕೆ ಸಾಗಿಸುವ ಜವಾಬ್ದಾರಿ ಮಾತ್ರ ಆಯಾ ತೋಟದ ಮಾಲೀಕರದ್ದು. ಈ ವಿಧಾನದಲ್ಲಿ ಅಡಕೆ ಕೊಯ್ಯುವಾಗ ರಿಸ್‌ಕ್‌ ಕಡಿಮೆ. ಕೊಯ್ದಾಗ ಅಡಕೆ ಚೆಲ್ಲಾಪಿಲ್ಲಿಯಾಗದೆ ನೇರವಾಗಿ ಬಲೆಗೇ ಬೀಳುತ್ತದೆ. ಸದ್ಯ ಅಡಕೆ ಕೊಯ್ಲಿಗೆ ಪ್ರತಿ ಮರಕ್ಕೆ 10 ರು.ನಂತೆ ಹಾಗೂ ಔಷಧಿ ಸಿಂಪಡಣೆಗೆ ಪ್ರತಿ ಮರಕ್ಕೆ 4 ರು. ಶುಲ್ಕ ನಿಗದಿಪಡಿಸಲಾಗಿದೆ ಎಂದು ಪಿಂಗಾರ ಸಂಸ್ಥೆ ಅಧ್ಯಕ್ಷ ರಾಮ್ ಕಿಶೋರ್ ಮಂಚಿ ಕಜೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಸಂಸ್ಥೆ ಆರಂಭಿಕ ಹಂತದಲ್ಲಿ  20-40 ವಯೋಮಾನದ 8 ಮಂದಿಯ ತಂಡ ರಚಿಸುತ್ತಿದೆ. ಇವರಿಗೆ ಮೂಲ ವೇತನ, ಪ್ರೋತ್ಸಾಹಧನ, ಪಿಎಫ್ ಮತ್ತಿತರ ಸವಲತ್ತು ನೀಡಲಾಗುತ್ತದೆ. ಬೇಡಿಕೆ ಹೆಚ್ಚಾದರೆ ಇನ್ನಷ್ಟು ಸಿಬ್ಬಂದಿಯನ್ನು ನೇಮಿಸಿ ತರಬೇತಿ ನೀಡಲು ನಿರ್ಧರಿಸಲಾಗಿದೆ. ಆರಂಭಿಕ ಹಂತದಲ್ಲಿ ಒಬ್ಬ ವ್ಯಕ್ತಿ ದಿನಕ್ಕೆ ಸುಮಾರು 500 ಕೊನೆ ಕೊಯ್ಯಲು ಸಾಧ್ಯ. ಪರಿಣತಿ ಪಡೆದ ಬಳಿಕ ದಿನಕ್ಕೆ 2500ರಷ್ಟು ಕೊನೆ ಕೊಯ್ದ ದಾಖಲೆ ಇದೆ.

ಈ ವರೆಗೆ 15 ಯುವಕರಿಂದ ಅರ್ಜಿ ಬಂದಿದ್ದು, ಇವರಿಗೆ ಫೆ.15ರಂದು ಮಂಚಿ ಕಜೆಯ ರಾಮ್‌ಕಿಶೋರ್ ಅವರ ತೋಟದಲ್ಲಿ ತರಬೇತಿ ನೀಡಲಾಗುತ್ತಿದೆ. ಅಮೆರಿಕಾದಲ್ಲಿದ್ದ ಉದ್ಯೋಗ ತೊರೆದು ಪ್ರಸ್ತುತ ಈ ಫೈಬರ್ ದೋಟಿ ವಿತರಕರಾಗಿ ಕೆಲಸ ಮಾಡುತ್ತಿರುವ ಹಾಸನ ಮೂಲದ ಬಾಲಸುಬ್ರಹ್ಮಣ್ಯಂ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳಲಿದ್ದಾರೆ.

ಪಿಂಗಾರ ಸಂಸ್ಥೆಯ ಅಧ್ಯಕ್ಷ ರಾಮ್ ಕಿಶೋರ್ ಮಂಚಿ ಕಜೆ ಮಾತು
ಈ ಜಾಬ್ ವರ್ಕ್‌ನ ಲಾಭ ನಷ್ಟ ಕುರಿತು ಈಗ ಲೆಕ್ಕ ಹಾಕಲು ಅಸಾಧ್ಯ. ಆದರೆ ಮೊದಲೇ ತಿಳಿಸಿದ ದಿನ ಕ್ಲಪ್ತ ಸಮಯಕ್ಕೇ ಬಂದು ನಮ್ಮ ತಂಡದವರು ಕೊಯ್ಲು ಹಾಗೂ ಔಷಧಿ ಸಿಂಪಡಣೆ ನಡೆಸಿಕೊಡುತ್ತಾಾರೆ. ಹೇಳಿದ ದಿನ ಬಾರದೆ ಕಾರ್ಮಿಕರು ಕೈಕೊಡುವ ಸಮಸ್ಯೆೆ ಇದರಿಂದ ನಿವಾರಣೆ ಆಗಲಿದೆ. ರೈತರ ಜೊತೆ ಸಂವಹನದಲ್ಲಿ ವಿಶ್ವಾಾಸಾರ್ಹತೆ ಉಳಿಸಿಕೊಳ್ಳುವುದು ಹಾಗೂ ನಡವಳಿಕೆ ಕುರಿತೂ ತಂಡಕ್ಕೆ ತರಬೇತಿ ನೀಡಲಾಗುವುದು. ವಿಶ್ವಾಸಾರ್ಹತೆ ಉಳಿಸುವುದೇ ನಮಗೆ ಮುಖ್ಯ ಎಂದರು.

ಪಿಂಗಾರ’ಕ್ಕೆ ಕನ್ನಡಪ್ರಭ- ಸುವರ್ಣ ನ್ಯೂಸ್ ರೈತರತ್ನ ಪ್ರಶಸ್ತಿ ಲಭಿಸಿತ್ತು
ಐದು ವರ್ಷಗಳ ಹಿಂದೆ ವಿಟ್ಲದಲ್ಲಿ ಆರಂಭವಾದ ಪಿಂಗಾರ ರೈತ ಉತ್ಪಾಾದಕ ಸಂಸ್ಥೆೆ ಬೆಳೆಗಾರರ ಮಿತ್ರ. ರೈತರು ಬೆಳೆದ ಹಲಸು ಮತ್ತಿಿತರ ಫಲಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡಿ ಹೆಸರು ಮಾಡಿದೆ. ಸಂಸ್ಥೆೆ ಕಳೆದ ವರ್ಷ ೩.೫೦ ಕೋಟಿ ರು. ವ್ಯವಾಹರ ನಡೆಸಿ, ೪ ಲಕ್ಷ ರು. ಲಾಭ ಗಳಿಸಿದೆ. ಸಂಸ್ಥೆೆ ‘ಕನ್ನಡಪ್ರಭ, ಏಷಿಯಾನೆಟ್ ಸುವರ್ಣ ನ್ಯೂಸ್’ ನೀಡುವ ರೈತರತ್ನ ಪ್ರಶಸ್ತಿಿಗೆ ಕಳೆದ ವರ್ಷ ಪಾತ್ರವಾಗಿತ್ತು.
 

click me!