Hijab Row : ಸರ್ಕಾರದ ಸುರಕ್ಷಾತ್ಮಕ ತಂತ್ರ,  ಮತ್ತೆ 3  ದಿನ ಕಾಲೇಜಿಗೆ ರಜೆ

By Contributor Asianet  |  First Published Feb 11, 2022, 9:24 PM IST

* ಹಿಜಾಬ್ ವಿವಾದ: ಕಾಲೇಜು ರಜೆ ಫೆ.16ವರೆಗೆ ಮುಂದುವರಿಕೆ
*   ಕಾಲೇಜು ಆರಂಭಕ್ಕೆ ಮುಂದಾಗದ ಸರ್ಖಾ
* ಯಾವ ಧಾರ್ಮಿಕ ಧಿರಿಸಿಗೆ ಅವಕಾಶ ಇಲ್ಲ ಎಂದಿದ್ದ ಹೈ ಕೋರ್ಟ್
* ಮತ್ತೆ ಮೂರು ದಿನ ಕಾಲ ರಜೆ ವಿಸ್ತರಣೆ


ಬೆಂಗಳೂರು(ಫೆ. 11)  ಹಿಜಾಬ್ (Hijab) ವಿವಾದದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಶಿಕ್ಷಣ ಸಂಸ್ಥೆಗಳಿಗೆ ನೀಡಿದ್ದ ರಜೆಯನ್ನು ಮುಂಜಾಗ್ರತಾ ಕ್ರಮವಾಗಿ ಫೆ.16ರವರೆಗೂ ಮುಂದುವರಿಸಲಾಗಿದೆ . ಸರ್ಕಾರ (Karnataka Govt) ಅಧಿಕೃತ ಆದೇಶವನ್ನು ನೀಡಿದ್ದು ಈ ಬಗ್ಗೆ ಉನ್ನತ ಶಿಕ್ಷಣ ಸಚಿವ  ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.

 ಉನ್ನತ`ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ವಿಶ್ವವಿದ್ಯಾಲಯಗಳು,  ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳಿಗೆ ಇದು ಅನ್ವಯಿಸುತ್ತದೆ. ಆದರೆ, ಈ ಅವಧಿಯಲ್ಲಿ ಆನ್ಲೈನ್ ಬೋಧನೆ ಎಂದಿನಂತೆಯೇ ನಡೆಯಲಿದೆ. ಜೊತೆಗೆ, ಈಗಾಗಲೇ ನಡೆಯುತ್ತಿರುವ ಮತ್ತು ನಿಗದಿಯಾಗಿರುವ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿ, ಕಾಲೇಜು ಪುನಾರಂಭದ ಬಗ್ಗೆ ಫೆ.16ರ ಹೊತ್ತಿಗೆ ತೀರ್ಮಾನಿಸಲಾಗುವುದು ಎಂದು ಅವರು ಹೇಳಿದ್ದಾರೆ.

Tap to resize

Latest Videos

Karnataka Hijab Row : 'ವಿಳಾಸ, ಪೋನ್ ನಂಬರ್  ಕಾಲೇಜಿನಿಂದಲೇ ಲೀಕ್ ಆಗಿದೆ..  SPಗೆ ವಿದ್ಯಾರ್ಥಿನಿಯರ ದೂರು

ಹಿಜಾಬ್ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈ ಕೋರ್ಟ್ (Karnataka high Court ) ಬ್ರೇಕ್ ಹಾಕಿತ್ತು.  ಅಂತಿಮ ಆದೇಶ ನೀಡುವವರೆಗೆ ಯಾವುದೇ ಧಾರ್ಮಿಕ ಉಡುಗೆಗೆ ಅವಕಾಶ ಇಲ್ಲ ಎಂದು ಆದೇಶ ನೀಡಿತ್ತು.ಅಲ್ಲದೇ ತಕ್ಷಣವೇ ಶಾಲೆ-ಕಾಲೇಜು ಪ್ರಾರಂಭಿಸಿ ಎಂದು ಸರ್ಕಾರಕ್ಕೆ ಕೋರ್ಟ್ ಸೂಚಿಸಿತ್ತು.  ಆದರೆ ಸರ್ಕಾರ ಕಾಲೇಜು ಆರಂಭಕ್ಕೆ ಮುಂದಾಗಿಲ್ಲ. 

ಸುಪ್ರೀಂ ಗೆ ಹೊರಟ ಕಾಂಗ್ರೆಸ್‌ ನಾಯಕ:  ರಾಜ್ಯದಲ್ಲಿ ಹಿಜಾಬ್ (Hijab Row) ಪ್ರಕರಣದ ಕುರಿತು ಹೈಕೋರ್ಟ್ ನಲ್ಲಿ ತ್ರಿಸದಸ್ಯ ಪೀಠ ವಿಚಾರಣೆ ನಡೆಸುತ್ತಿರುವಾಗಲೇ, ಹೈಕೋರ್ಟ್ (High Court) ನೀಡಿದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಯುವ ಮುಖಂಡ  (Congress Youth Leader B V Srinivas ) ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ (Youth Congress president BV Srinivas) ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ. ಮುಸ್ಲಿಂ ಹುಡುಗಿರುವ ತಲೆಗೆ ಹಿಜಾಬ್ ಧರಿಸುವುದು ಅವರ ಮೂಲಭೂತ ಹಕ್ಕು ಎಂದು ಬಿವಿ ಶ್ರೀನಿವಾಸ್ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಪ್ರಕರಣ ದಾಖಲು:  ಶಿವಮೊಗ್ಗದಲ್ಲಿ ಹಿಜಾಬ್ ವಿಚಾರ ಹಿಂಸಾಚಾರಕ್ಕ ತಿರುಗಿತ್ತು. ಈ ಬೆನ್ನಲ್ಲೇ ನಗರದಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿ ಒಟ್ಟಾರೆ 40ಕ್ಕೂ ಹೆಚು ಪ್ರಕರಣಗಳು ದಾಖಲಾಗಿವೆ. ಶಿವಮೊಗ್ಗ, ದಾವಣಗೆರೆ ಮತ್ತು ಹರಿಹರಗಳಲ್ಲಿ ಸರ್ಪಗಾವಲು ಹಾಕಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. . ಹಿಜಾಬ್‌-ಕೇಸರಿ ಶಾಲು ಸಂಘರ್ಷಕ್ಕೆ ಸಂಬಂಧಿಸಿ ಹರಿಹರ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರಿನ ಗಲಾಟೆ, ಮಲೆಬೆನ್ನೂರಿನ ಯುವಕನಿಗೆ ಇರಿದ ಪ್ರಕರಣಗಳಿಗೆ ಸಂಬಂಧಿಸಿ ಪ್ರಕರಣಗಳು ದಾಖಲಾಗಿದ್ದವು. 

click me!