ಬೆಳಕು ನೀಡದ High Mast Light- ಕತ್ತಲೆಯಲ್ಲಿ ಎಪಿಎಂಸಿ ಆವರಣ!

By Kannadaprabha News  |  First Published Sep 25, 2022, 11:11 AM IST

ಪಟ್ಟ​ಣದ ಎಪಿಎಂಸಿ ಪ್ರಾಂಗಣದಲ್ಲಿ ಇರುವ ಹೈಮಾಸ್ಟ್‌ ದೀಪಗಳು ಬೆಳಗದ ಕಾರಣ ರಾತ್ರಿ ಸಮ​ಯ​ದ​ಲ್ಲಿ ರೈತರ ಕಾರ್ಯ ಚಟುವಟಿಕೆಗೆ ತೊಂದರೆಯಾಗುತ್ತಿದೆ


ಎಸ್‌.ಜಿ. ತೆಗ್ಗಿನಮನಿ

 ನರಗುಂದ (ಸೆ.25) : ಪಟ್ಟ​ಣದ ಎಪಿಎಂಸಿ ಪ್ರಾಂಗಣದಲ್ಲಿ ಇರುವ ಹೈಮಾಸ್ಟ್‌ ದೀಪಗಳು ಬೆಳಗದ ಕಾರಣ ರಾತ್ರಿ ಸಮ​ಯ​ದ​ಲ್ಲಿ ರೈತರ ಕಾರ್ಯ ಚಟುವಟಿಕೆಗೆ ತೊಂದರೆಯಾಗುತ್ತಿದೆ. 102 ಎಕರೆ ವಿಸ್ತಾರವುಳ್ಳ ಎಪಿಎಂಸಿಯಲ್ಲಿ 1992ರಲ್ಲಿ 1ನೇ ಹಂತದ ವಿದ್ಯುತ್ತೀಕರಣವನ್ನು .12 ಲಕ್ಷ ವೆಚ್ಚದಲ್ಲಿ ಮಾಡಲಾಗಿದೆ. 2010-12ರಲ್ಲಿ ಎರಡನೇ ಹಂತದ ವಿದ್ಯುತ್ತೀಕರಣದ ಕಾಮಗಾರಿ ನಡೆಯಿತು. .2.43 ಲಕ್ಷ ವೆಚ್ಚದ ಹೈಮಾಸ್ಟ್‌ ದೀಪದ ಕಂಬ ಹಾಗೂ .19.63 ಲಕ್ಷ ವೆಚ್ಚದಲ್ಲಿ ವಿದ್ಯುತ್ತೀಕರಣದ ಗ್ರೌಂಡ್‌ ಲೆವಲ… ಕಾಮಗಾರಿ ನಡೆದಿದೆ. ಇದರಲ್ಲಿ 80 ವಿದ್ಯುತ್‌ ಕಂಬಗಳು ಒಳಗೊಂಡಿವೆ.

Latest Videos

undefined

Big 3; ವಿದ್ಯುತ್‌ ಇಲ್ಲದೇ ಭವಿಷ್ಯವೇ ಕತ್ತಲು, ಕಗ್ಗತ್ತಲ ಕೂಪದಲ್ಲಿ ಕಲಬುರಗಿಯ ರಾವೂರ ಗ್ರಾಮ

ವಿದ್ಯುತ್‌ ಸರಬರಾಜು ಕಾಮಗಾರಿ ಎಲ್ಲವೂ ಗ್ರೌಂಡ್‌ ಲೆವಲ…ನಲ್ಲಿಯೇ ನಡೆದಿರುತ್ತದೆ. ವಿದ್ಯುತ್‌ ವೈರ್‌ಗಳೆಲ್ಲವೂ ನೆಲಮಟ್ಟದಲ್ಲಿ ಇರುವ ಕಾರಣ ಅಲ್ಲಲ್ಲಿ ವೈರ್‌ಗಳು ತುಂಡಾಗಿವೆ. ವೈರ್‌ಗಳು ಎಲ್ಲಿ ತುಂಡಾಗಿವೆ ಎಂಬುದು ಗೊತ್ತಾಗದೇ ಇರುವ ಕಾರಣ ಈಗ ಬೆಳಕಿನ ವ್ಯವಸ್ಥೆಯನ್ನು ಸರಿಪಡಿಸುವುದು ಕಷ್ಟವಾಗುತ್ತಿದೆ. ಅಲ್ಲದೆ ಅತಿಯಾದ ಮಳೆ, ರಸ್ತೆ, ಚರಂಡಿ ನಿರ್ಮಾಣದ ಕಾಮಗಾರಿಗಳ ಸಂದರ್ಭದಲ್ಲಿ ಗ್ರೌಂಡ್‌ ಲೆವಲ…ನಲ್ಲಿರುವ ವೈರ್‌ಗಳು ತುಂಡಾಗಿ ಹೋಗಿವೆ. ಹೀಗಾಗಿ ವಿದ್ಯುತ್‌ ಸರಬರಾಜಿನಲ್ಲಿ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಎಪಿಎಂಸಿಯಲ್ಲಿ ರೈತರು ಕೃಷಿ ಉತ್ಪನ್ನಗಳನ್ನು ತಂದು ಹಾಕಿ ಅವುಗಳನ್ನು ಸ್ವಚ್ಛಗೊಳಿಸಿದ ಆನಂತರ ಮಾರಾಟ ಮಾಡಬೇಕಾಗುತ್ತದೆ. ರಾತ್ರಿ ಸಮಯದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದೆ ರೈತರು ವಿಷಜಂತುಗಳಿಗೆ ಭಯಪಡುತ್ತಿದ್ದಾರೆ.

ಹಣದ ಕೊರತೆ: 2015-16ರಲ್ಲಿ .40 ಲಕ್ಷ ವೆಚ್ಚದ ಕ್ರಿಯಾ ಯೋಜನೆ ತಯಾರಿಸಿ ಕೇಂದ್ರ ಕಚೇರಿಯಿಂದ ಅನುಮತಿ ಪಡೆದುಕೊಂಡು ವಿದ್ಯುತ್ತೀಕರಣ ಕಾಮಗಾರಿ ಕೈಗೊಳ್ಳಲು ಮಂಜೂರಾತಿ ಪಡೆದುಕೊಳ್ಳಲಾಗಿತ್ತು. ಆದರೆ ಹಣದ ಲಭ್ಯತೆ ಇಲ್ಲದ ಕಾರಣ ಕಾಮಗಾರಿ ಕೈಗೊಂಡಿರಲಿಲ್ಲ. ಆದ ಕಾರಣ ವಿದ್ಯುತ್‌ ಬೆಳಕಿನ ಸಮಸ್ಯೆಯು ಬಗೆಹರಿಯದೆ ಹಾಗೆಯೇ ಉಳಿದಿದೆ.

ವಿದ್ಯತ್ತೀಕರಣದ ಸಮಸ್ಯೆಯ ನಿವಾರಣೆಗೆ ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ. ಹಣದ ಲಭ್ಯತೆ ಹಾಗೂ ಕೇಂದ್ರ ಕಚೇರಿಯಿಂದ ಮಂಜೂರಾತಿಯನ್ನು ಪಡೆದುಕೊಂಡು ಕೂಡಲೇ ಟೆಂಡರ್‌ ಕರೆದು ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನರ ತಿಳಿ​ಸಿ​ದ​ರು.

ಬಿಗ್‌ 3 ಇಂಪ್ಯಾಕ್ಟ್‌: 10 ತಿಂಗಳ ಸಮಸ್ಯೆಗೆ 10 ದಿನದಲ್ಲೇ ಸಿಕ್ತು ಮುಕ್ತಿ..!

ಕೃಷಿ ಉತ್ಪನ್ನಗಳ ಮಾರಾಟದ ಸಂದರ್ಭದಲ್ಲಿ ಎಪಿಎಂಸಿ ಯಾರ್ಡ್‌ನಲ್ಲಿ ಸರಿಯಾಗಿ ಬೆಳಕಿನ ವ್ಯವಸ್ಥೆ ಇಲ್ಲ ಮತ್ತು ಹೈಮಾಸ್ಟ್‌ ಕಂಬದಲ್ಲಿ ಒಂದು ಬಾರಿಯೂ ಬಲ್‌್ಬಗಳು ಬೆಳಕು ನೀಡಿಯೇ ಇಲ್ಲ. ಹೈಮಾಸ್‌್ಕ ಇದ್ದೂ ಇಲ್ಲದಂತಾಗಿದೆ. ರೈತರ ಕೃಷಿ ಉತ್ಪನ್ನಗಳ ಮಾರಾಟದ ಸಂದರ್ಭದಲ್ಲಿ ರಾತ್ರಿ ಹೊತ್ತು ವಿಷ ಜಂತುಗಳ ಹಾವಳಿಯಿಂದ ಭಯ ಆಗುತ್ತಿದೆ.

- ವೀರಣ್ಣ ಸೊಪ್ಪಿನ, ಕರ್ನಾಟಕ ರೈತ ಸೇನೆ ಅಧ್ಯಕ್ಷ

click me!