Asianet Suvarna News impact: ರೈತರ ಜೀವ ಹಿಂಡುತ್ತಿದ್ದ ಆಗ್ರೋ ಏಜೆನ್ಸಿಗಳಿಗೆ ಸ್ಟಾಪ್ ಸೇಲ್ ನೋಟಿಸ್

By Ravi Janekal  |  First Published Sep 25, 2022, 10:34 AM IST

ಡಿಎಪಿ ಗೊಬ್ಬರ ಖರೀದಿಸಬೇಕೆಂದರೆ ಜೊತೆಗೆ ಬೇಕೋ ಬೇಡವೋ ಮತ್ತೊಂದು ಗೊಬ್ಬರ ಖರೀದಿ ಕಡ್ಡಾಯ ಎಂಬ ಅಲಿಖಿತ ನಿಯಮ ಹಾಕಿ ರೈತರ ಜೀವ ಹಿಂಡುತ್ತಿದ್ದ ಆಗ್ರೋ ಏಜನ್ಸಿಗಳಿಗೆ ನೋಟಿಸ್ ನೀಡಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ "ಗೊಬ್ಬರ ಗೋಲ್ಮಾಲ್" ವಿಷಯವಾಗಿ ಸೆಪ್ಟೆಂಬರ್20 ರಂದು ವಿಸ್ತೃತ ವರದಿ ಪ್ರಸಾರ ಮಾಡಲಾಗಿತ್ತು


ವರದಿ : ಗಿರೀಶ್ ಕಮ್ಮಾರ, ಏಷ್ಯ ನೆಟ್ ಸುವರ್ಣ ನ್ಯೂಸ್ ಗದಗ

ಗದಗ (ಸೆ.25) : ಡಿಎಪಿ ಗೊಬ್ಬರ ಖರೀದಿಸಬೇಕೆಂದರೆ ಜೊತೆಗೆ ಬೇಕೋ ಬೇಡವೋ ಮತ್ತೊಂದು ಗೊಬ್ಬರ ಖರೀದಿ ಕಡ್ಡಾಯ ಎಂಬ ಅಲಿಖಿತ ನಿಯಮ ಹಾಕಿ ರೈತರ ಜೀವ ಹಿಂಡುತ್ತಿದ್ದ ಆಗ್ರೋ ಏಜನ್ಸಿಗಳಿಗೆ ನೋಟಿಸ್ ನೀಡಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ "ಗೊಬ್ಬರ ಗೋಲ್ಮಾಲ್" ವಿಷಯವಾಗಿ ಸೆಪ್ಟೆಂಬರ್20 ರಂದು ವಿಸ್ತೃತ ವರದಿ ಪ್ರಸಾರ ಮಾಡಲಾಗಿತ್ತು. ವರದಿ ಪ್ರಸಾರದ ಬೆನ್ನಲ್ಲೆ ನರಗುಂದ ಪಟ್ಟಣದಲ್ಲಿರುವ ಮೂರು ಆಗ್ರೋ ಏಜನ್ಸಿಗಳಿಗೆ ಸ್ಟಾಪ್ ಸೇಲ್ ನೋಟಿಸ್ ನೀಡಲಾಗಿದೆ.. ವರದಿ ಪ್ರಸಾರವಾದ ಎರಡು ದಿನ ಅಂದ್ರೆ ಗುರುವಾರ 22 ನೇ ತಾರೀಕು ಸ್ಥಳಕ್ಕೆ ಭೇಟಿ ನೀಡಿದ್ದ ವಿಜಿಲೆನ್ಸ್(Vigilance) ವಿಭಾಗದ ಪ್ರಮೊದ್ ತುಂಬಳ(pramod tumbala), ಅನವಶ್ಯಕ ಲಿಂಕ್ ನೀಡಕೂಡದು ಎಂದು ಆಗ್ರೋ ಏಜನ್ಸಿ(Agro Agency)ಗಳಿಗೆ ತಾಕೀತು ಮಾಡಿದ್ದಾರೆ. ಅಲ್ದೆ, ಮುಂದಿನ ಆದೇಶದವರೆಗೂ ಅನ್ವಯ ಆಗುವಂತೆ ಸ್ಟಾಪ್ ಸೇಲ್ ನೋಟಿಸ್(Stop sale notice) ನೀಡಿದ್ದಾರೆ.

Tap to resize

Latest Videos

undefined

ರೈತರ ಆಶೋತ್ತರಗಳಿಗೆ ನಮ್ಮ ಸರ್ಕಾರ ಸ್ಪಂದಿಸುತ್ತಿದೆ: ಸಚಿವ ನಾಗೇಶ್‌

ಕೃಷಿ ಇಲಾಖೆ ಎಡಿ ಮೀಟಿಂಗ್: ವಿಜಿಲೆನ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮರುದಿನ ಶುಕ್ರವಾರ 23 ನೇ ತಾರೀಕು, ವ್ಯಾಪಾರಸ್ಥರೊಂದಿಗೆ ಮೀಟಿಂಗ್ ನಡೆಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್ ಎಫ್ ತಹಶೀಲ್ದಾರ್, ರೈತರಿಗೆ ಒತ್ತಡ ಹೇರಿ ಹೆಚ್ಚುವರಿ ಗೊಬ್ಬರ ಖರೀದಿಸದಂತೆ ಸೂಚಿಸಿದ್ದಾರೆ.. ಒಂದ್ವೇಳೆ ಲಿಂಕ್ ಮಾಡಿ ಒತ್ತಾಯಪೂರ್ವಕವಾಗಿ ಗೊಬ್ಬರ ಸೇಲ್ ಮಾಡಿದ್ರೆ ಲೈಸೆನ್ಸ್ ಕ್ಯಾನ್ಸಲ್ ಮಾಡಿಸೋದಾಗಿಯೂ ಎಚ್ಚರಿಕೆ ನೀಡಲಾಗಿದೆ.

ಏನಿದು 'ಲಿಂಕ್' ಸಿಸ್ಟಮ್..? ಡಿಎಪಿ(DAP) ರಸಗೊಬ್ಬರ ಖರೀದಿ ಮಾಡ್ಬೇಕು ಎಂದು ಆಗ್ರೋ ಏಜನ್ಸಿಗಳಿಗೆ ಹೋದ್ರೆ ಅಲ್ಲಿ ಕಡ್ಡಾಯವಾಗಿ ಮತ್ತೊಂದು ಗೊಬ್ಬರ ಖರೀದಿಸಬೇಕು ಅನ್ನೋ ನಿಯಮ ಹೇರಿದ್ದಾರೆ. 1400 ರೂಪಾಯಿ ಕೊಟ್ಟು 50 ಕೆಜಿಯ ಡಿಎಪಿ ಖರೀದಿಸಿದ್ರೆ, ಹೆಚ್ಚುವರಿಯಾಗಿ 240 ರೂಪಾಯಿ ಕೊಟ್ಟು ನ್ಯಾನೊ ಯುರಿಯಾ(Nano urea) ಖರಿದಿಸ್ಬೇಕು. ಇಲ್ಲವೇ, ಪೊಟ್ಯಾಷ್ ಕಾಂಪ್ಲೆಕ್ಸ್ (Potash complex)ಗೊಬ್ಬರ ಖರೀದಿಸೋದು ಕಡ್ಡಾಯ. ಕಂಪನಿಯಿಂದಲೇ ಈ ಆಫರ್ ಬಂದಿದೆ.. ಹೀಗಾಗಿ ಬೇಕೋ ಬೇಡ್ವೋ ಹಣ ಕೊಟ್ಟು ಗೊಬ್ಬರ ಖರೀದಿಸ್ಬೇಕು ಎಂದು ಆಗ್ರೋ ಏಜೆನ್ಸಿಗಳು ಒತ್ತಡ ಹೇರುತ್ತಿವೆ. ಡಿಎಪಿ ಒಂದೇ ಕೊಡಿ ಜೊತೆಗೆ ಏನೂ ಖರೀದಿಸಲ್ಲ ಅಂದ್ರೆ ಗೊಬ್ಬರ ಕೊಡಲ್ಲವೆಂದು ಆಗ್ರೋ ಏಜನ್ಸಿಗಳು ಹೇಳುತ್ತಾರೆ.

ರೈತರಲ್ಲಿ ನೆಮ್ಮದಿ ಮೂಡಿಸಿದ ವರದಿ: ಹೆಚ್ಚುವರಿ ಗೊಬ್ಬರ ಖರೀದಿಯಿಂದ ರೈತರು ಕಂಗಾಲಾಗಿದ್ರು, ವರದಿ ಪ್ರಸಾರವಾದ ಕೂಡಲೇ ನೋಟಿಸ್ ನೀಡಿದ್ದು ರೈತರಿಗೆ ನೆಮ್ಮದಿ ತಂದಿದೆ. ಕಷ್ಟದಲ್ಲಿರೋ ರೈತರಿಗೆ ಹೆಚ್ಚುವರಿ ಗೊಬ್ಬರ ಖರೀದಿ ತಲೆನೋವಾಗಿತ್ತು. ನೋಟಿಸ್ ನೀಡಿ, ಅಧಿಕಾರಿಗಳು ಸೂಚನೆ ನೀಡಿದ್ದು ಖುಷಿಯಾಗಿದೆ. ಶಾಶ್ವತವಾಗಿ ಲಿಂಕ್ ಸಿಸ್ಟಮ್ ಬಂದ್ ಆಗುವಂತೆ ಸರ್ಕಾರ ಆದೇಶ ಮಾಡ್ಬೇಕು ಅನ್ನೋದು ರೈತರ ಮಾತಾಗಿದೆ. 3 ಸಲ ಬಿತ್ತೀವಿ, ಮಳಿ ಎಲ್ಲ ಸತ್ಯಾನಾಶ ಮಾಡ್ಯದ: ಕೇಂದ್ರದ ನೆರೆ ಅಧ್ಯಯನ ತಂಡದ ಮುಂದೆ ಕಣ್ಣೀರಿಟ್ಟ ರೈತರು

click me!